ವಿಜಯವಾಡ: ರಾಜ್ಯದಲ್ಲಿ ನಡೆಯುವ 2024ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಮದ್ಯಪ್ರಿಯರ ವೋಟ್ಗಳನ್ನು ಸೆಳೆಯಲು ಆಂಧ್ರಪ್ರದೇಶದ ಜನರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಭಾರಿ ಭರವಸೆ ಕೊಟ್ಟರು.
ರಾಜ್ಯದಲ್ಲಿ ಪಕ್ಷಕ್ಕೆ ಒಂದು ಕೋಟಿ ಮತಗಳು ಬಂದರೆ 70 ರೂ.ಗೆ ಮದ್ಯ ನೀಡಲಾಗುವುದು ಎಂದು ಸೋಮು ವೀರರಾಜು ಹೇಳಿದರು.
ಇದನ್ನೂ ಓದಿ: ಸೆಂಟ್ ಉದ್ಯಮಿಯ ತೆರಿಗೆ ವಂಚನೆ ಪ್ರಕರಣ: ಕನೌಜ್ನಲ್ಲಿ ವಶಪಡಿಸಿಕೊಂಡ ಹಣವೆಷ್ಟು ಗೊತ್ತಾ?
ಮಂಗಳವಾರ ವಿಜಯವಾಡದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, 'ಭಾರತೀಯ ಜನತಾ ಪಕ್ಷಕ್ಕೆ ಒಂದು ಕೋಟಿ ಮತ ನೀಡಿ. ಕೇವಲ 70 ರೂ.ಗೆ ಮದ್ಯ ನೀಡುತ್ತೇವೆ. ಇನ್ನು ಆದಾಯ ಹೆಚ್ಚಾದಲ್ಲಿ ಕೇವಲ 50 ರೂ.ಗೆ ಮದ್ಯ ನೀಡುತ್ತೇವೆ' ಎಂದರು.
ರಾಜ್ಯ ಸರ್ಕಾರವು ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ರಾಜ್ಯದಲ್ಲಿ ಒಂದು ಕೋಟಿ ಜನರು ಹೆಚ್ಚಿನ ದರದಲ್ಲಿ ಮದ್ಯ ಸೇವಿಸುತ್ತಿದ್ದು, ಅಗ್ಗದ ಮದ್ಯಕ್ಕಾಗಿ 2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.