ETV Bharat / bharat

ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನು 3 ಕಿ.ಮೀ​ ಎಳೆದೊಯ್ದ ಚಾಲಕ!​

ದೆಹಲಿಯಲ್ಲಿ ಚಾಲಕನೊಬ್ಬ ತನ್ನ ಕಾರಿನ ಬಾನೆಟ್​ ಮೇಲೆ ವ್ಯಕ್ತಿಯನ್ನು 3 ಕಿಲೋ ಮೀಟರ್​ವರೆಗೆ ಎಳೆದೊಯ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

man atop bonnet
ಬಾನೆಟ್​ ಮೇಲೇ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿ
author img

By

Published : May 1, 2023, 12:40 PM IST

Updated : May 1, 2023, 2:30 PM IST

ಕಾರು ಬಾನೆಟ್‌ ಮೇಲೆ ವ್ಯಕ್ತಿಯನ್ನು ಕೊಂಡೊಯ್ಯುತ್ತಿರುವ ವಿಡಿಯೋ

ದೆಹಲಿ: ಇಲ್ಲಿನ ಆಶ್ರಮ ಚೌಕ್‌ನಿಂದ ನಿಜಾಮುದ್ದೀನ್ ದರ್ಗಾಕ್ಕೆ ತೆರಳುತ್ತಿದ್ದ ಕಾರೊಂದು ವ್ಯಕ್ತಿಯೊಬ್ಬರನ್ನು ತನ್ನ ಕಾರಿನ ಬಾನೆಟ್​ ಮೇಲೆ ಸುಮಾರು ಮೂರು ಕಿಲೋಮೀಟರ್ ದೂರದ​ವರೆಗೆ ಎಳೆದೊಯ್ದಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಕಾರು ಚಾಲಕ ತನ್ನ ಕಾರಿನ ಮೇಲೆ ವ್ಯಕ್ತಿಯಿದ್ದರೂ ಕೂಡ ನಿಲ್ಲಿಸದೇ ಚಲಾಯಿಸುತ್ತಿರುವ ದೃಶ್ಯವನ್ನು ಬೇರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜನರು ಸೆರೆ ಹಿಡಿದಿದ್ದಾನೆ.

ಈ ವಿಡಿಯೋವನ್ನು ಪೊಲೀಸ್ ಕಂಟ್ರೋಲ್ ರೂಂನಲ್ಲಿದ್ದ ಸಿಬ್ಬಂದಿ ಗಮನಿಸಿ ಕಾರನ್ನು ಹಿಂಬಾಲಿಸಿದ್ದಾರೆ. ಆದರೆ ಆರೋಪಿ ಕಾರು ನಿಲ್ಲಿಸದೇ ಇದ್ದುದರಿಂದ ಕಾರನ್ನು ಓವರ್​ ಟೇಕ್​ ಮಾಡಿ ಹಿಂದಿಕ್ಕಿದ ಪೊಲೀಸ್​ ವಾಹನವು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಬಳಿಕವಷ್ಟೇ ಕಾರು ಚಾಲಕ ತನ್ನ ವಾಹನಕ್ಕೆ ಬ್ರೇಕ್​ ಹಾಕಿದ್ದಾನೆ. ನಂತರ ಪೊಲೀಸರು ಚಾಲಕನನ್ನು ಮತ್ತು ವಾಹನದ ಬಾನೆಟ್​ ಮೇಲೆ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ಬಾನೆಟ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನು ಚೇತನ್​ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಚಾಲಕ. ಈತ ಹೇಳಿರುವ ಪ್ರಕಾರ, ತನ್ನ ಕಾರಿನಲ್ಲಿದ್ದ ಪ್ರಯಾಣಿಕನನ್ನು ಇಳಿಸಿ ಹಿಂತಿರುಗುತ್ತಿದ್ದಾಗ ಆಶ್ರಮ ಚೌಕ್‌ ಬಳಿ ಕಾರೊಂದು ಚೇತನ್​ನ ಕಾರಿಗೆ 3 ಬಾರಿ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಚೇತನ್​ ಆ ಕಾರಿನ ಚಾಲಕನನ್ನು ಪ್ರಶ್ನಿಸಲು ತಾನು ಕಾರಿನಿಂದ ಇಳಿದಿದ್ದಾನೆ.

ಇದನ್ನೂ ಓದಿ:20 ಗಂಟೆ ಅವಶೇಷಗಳಡಿ ಸಿಲುಕಿದ ವ್ಯಕ್ತಿಯ ಪ್ರಾಣ ಕಾಪಾಡಿದ ಸಿಬ್ಬಂದಿ; ಜನ್ಮದಿನದಂದೇ ಸಿಕ್ತು ಮರು ಹುಟ್ಟು!

ಆದರೆ ಆರೋಪಿ ಚಾಲಕ ಕಾರಿನಿಂದ ಇಳಿಯದೇ ತನ್ನ ವಾಹನವನ್ನು ಚಲಾಯಿಸಿದ್ದಾನೆ. ಈ ವೇಳೆ ಚೇತನ್​ ಕಾರಿನ ಮುಂಭಾಗವೇ ಇದ್ದುದರಿಂದ ಬಾನೆಟ್​ನಲ್ಲಿ ನೇತಾಡಬೇಕಾಯಿತು. ಆರೋಪಿಯು ಮದ್ಯ ಸೇವಿಸಿದ್ದು ಹಲವಾರು ಬಾರಿ ನಿಲ್ಲಿಸಲು ಕೇಳಿಕೊಂಡರೂ ಆರೋಪಿ ಆಶ್ರಮ ಚೌಕ್‌ನಿಂದ ನಿಜಾಮುದ್ದೀನ್ ದರ್ಗಾದವರೆಗೆ ಎರಡರಿಂದ ಮೂರು ಕಿಲೋಮೀಟರ್​ವರೆಗೆ ಕಾರು ಚಲಾಯಿಸಿಕೊಂಡೇ ಹೋಗಿದ್ದಾನೆ. ಕೊನೆಗೆ ಪೊಲೀಸ್​ ಕಂಟ್ರೋಲ್​ ರೂಮ್​ನಲ್ಲಿದ್ದ ಪೊಲೀಸರು ತಾನು ಸಿಕ್ಕಿಹಾಕಿಕೊಂಡಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಬೇಕಾಯಿತು ಎಂದು ತಿಳಿಸಿದ್ದಾನೆ.

ಆರೋಪಿಯನ್ನು ರಾಮ್‌ಚಂದ್ ಎಂದು ಗುರುತಿಸಲಾಗಿದೆ. ಈತ ತಾನು ಚೇತನ್​ ಎಂಬಾತನ ಕಾರಿಗೆ ಗುದ್ದಿಲ್ಲ. ಚೇತನ್​ ಉದ್ದೇಶಪೂರ್ವಕವಾಗಿಯೇ ತನ್ನ ಕಾರಿನ ಬಾನೆಟ್‌ಗೆ ಹಾರಿದ್ದಾನೆ ಮತ್ತು ಕೆಳಗಿಳಿಯುವಂತೆ ಕೇಳಿದಾಗ ಆತ ಇಳಿಯಲಿಲ್ಲ ಎಂದು ಹೇಳಿದ್ದಾನೆ. ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆ ವಿರುದ್ಧದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಈ ವಾಹನವು ರವೀಂದ್ರ ಸಿಂಗ್ ಎಂಬ ವ್ಯಕ್ತಿಗೆ ನೋಂದಣಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಬೆಚ್ಚಿದ ಜನ.. ಕಾನ್ಸ್​ಟೇಬಲ್​ ಸಾವು!

Last Updated : May 1, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.