ETV Bharat / bharat

ಕಾರು ಹಳ್ಳಕ್ಕೆ ಬಿದ್ದು ನಾಲ್ವರು ದುರ್ಮರಣ.. ಮದುವೆ ಮುಗಿಸಿ ಬರುತ್ತಿದ್ದಾಗ ದುರಂತ - ಕಾರು ಹಳ್ಳಕ್ಕೆ ಬಿದ್ದು ನಾಲ್ವರ ದುರ್ಮರಣ

ಉತ್ತರಾಖಂಡದ ಅಲ್ಮೋರಾ ಸಮೀಪದ ಕಾಫಿಗೈರ್ ರಸ್ತೆಯ ನೌಗಾಂವ್ ಬಖಾರಿಯಾ ನಡುವೆ ಹರಿದಿರುವ ಹಳ್ಳಕ್ಕೆ ಕಾರು ಬಿದ್ದು, ನಾಲ್ವರು ಸ್ಥಳದಲ್ಲೇ ಸಾವು.

the car fell into the stream
ಹಳ್ಳದಲ್ಲಿ ಕಾರು ಬಿದ್ದಿರುವುದು
author img

By

Published : Dec 3, 2022, 2:32 PM IST

ಅಲ್ಮೋರಾ(ಉತ್ತರಾಖಂಡ) ನಗರದ ಭೈನ್ಸಿಯಾಚಾನ ಡೆವಲಪ್‌ಮೆಂಟ್ ಬ್ಲಾಕ್‌ ಬಳಿ ಕಾರು ಆಳವಾದ ಹಳ್ಳಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದು, ಇಬ್ಬರು ತೀವ್ರ ಗಾಯಗೊಂಡಿರುವ ದುರ್ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಕಾರಿನಲ್ಲಿದ್ದವರು ವರನ ಸಂಬಂಧಿಕರಾಗಿದ್ದು, ಢೌಲ್ಚಿನ ಜಮ್ರಾಡಿ ಬ್ಯಾಂಡ್ ಬಳಿಯ ಬಖ್ರಿಯಾತಾಂಡಾದಲ್ಲಿ ನಡೆದ ಮದುವೆ ಮೆರವಣಿಗೆ ಮುಗಿಸಿಕೊಂಡು ವಾಪಸ್ಸು ಬರುತ್ತಿದ್ದರು. ಮೃತಪಟ್ಟವರಲ್ಲಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಇದ್ದಾರೆ.

ಪೊಲೀಸ್ ರ ಪ್ರಕಾರ, ಶನಿವಾರ ಬೆಳಗ್ಗೆ ಕಾರು ಕಾಫಿಗೈರ್ ರಸ್ತೆಯ ನೌಗಾಂವ್-ಬಖಾರಿಯಾ ನಡುವಿನ ಆಳವಾದ ಕಂದರಿಗೆ ಬಿದ್ದಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ತೀವ್ರ ನೋವಿನಿಂದ ಕಿರುಚಾಡುತ್ತಿದ್ದನ್ನು ಕಂಡು, ಸ್ಥಳೀಯ ಸಮೀಪದ ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ಒದಗಿಸಿದ್ದಾರೆ.

ಪೊಲೀಸರು ಆಗಮಿಸಿದ ಬಳಿಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಕಾಫಿಗರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 4 ಜನರ ಸಾವನ್ನು ತಹಶಿಲ್ದಾರ್ ಕುಲದೀಪ್ ಪಾಂಡೆ ದೃಢಪಡಿಸಿದ್ದಾರೆ.

ಇದನ್ನೂ ಓದಿ:ದಟ್ಟ ಮಂಜಿನಿಂದ ಅವಾಂತರ.. ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.