ETV Bharat / bharat

ಪಿಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅಲರ್ಟ್‌; ಪಂಜಾಬ್‌ನಲ್ಲಿ ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಸಿಧು

ಕ್ರಿಕೆಟರ್‌ ಕಂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದರೊಂದಿಗೆ ಅಲ್ಲಿ ಸಿಎಂ ಅಮರೀಂದರ್‌ ಸಿಂಗ್‌ ಹಾಗೂ ಸಿಧು ನಡುವಿನ ಅಸಮಾಧಾನಕ್ಕೆ ಅಂತ್ಯ ಹಾಡಲಾಗಿದೆ ಎನ್ನಲಾಗಿತ್ತು. ಆದರೆ, ಸಿಎಂ ಬಣ ಬೂದಿ ಮುಚ್ಚಿದ ಕೆಂಡದಂತಾಗಿದೆ..

Captain vs Sidhu : MLAs arrive at Sidhu's residence for meeting
ಪಿಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅಲರ್ಟ್‌; ಪಂಜಾಬ್‌ನಲ್ಲಿ ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಸಿಧು
author img

By

Published : Jul 21, 2021, 3:12 PM IST

ಚಂಡೀಗಢ : ಕಾಂಗ್ರೆಸ್‌ ಹೈಕಮಾಂಡ್ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದ ನಂತರವೂ ಪಂಜಾಬ್ ಕಾಂಗ್ರೆಸ್‌ನಲ್ಲಿ ಅಸಮಾಧಾನ ತಣಿಯುವಂತೆ ಕಾಣ್ತಿಲ್ಲ.

ಸಿಧು ನೇಮಕಾತಿಯ ನಂತರ ತಮ್ಮ ಪ್ರಭಾವವನ್ನು ಬಲ ಪಡಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ತಮ್ಮ ಬೆಂಬಲಿಗರಿಗೆ ನಿರಾಶೆ ಮಾಡಿಲ್ಲ. ಸಿಧು ಅಮೃತಸರದಲ್ಲಿ ಶಾಸಕರೊಂದಿಗೆ ಸಭೆ ನಡೆಸಬೇಕೆಂದು ಕರೆ ನೀಡಿದರೆ, ಸಿಎಂ ಅಮರೀಂದರ್ ಅವರು ಇಂದು ಚಂಡೀಗಢದಲ್ಲಿ ಪಂಜಾಬ್ ಸಂಸದರೊಂದಿಗೆ ಸಭೆ ಕರೆದಿದ್ದಾರೆ.

ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಂಗದ್‌ ಸೈನಿ, ಕ್ಷಮಿಸುವುದು ಅಥವಾ ಕ್ಷಮಿಸದಿರುವುದು ವಿಷಯವಲ್ಲ. ಸೋನಿಯಾ ಗಾಂಧಿಯವರ ಆದೇಶದಂತೆ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಶಾಸಕ ಇಂದರ್‌ಬೀರ್ ಸಿಂಗ್ ಬುಲಾರಿಯಾ, ಪಿರ್ಮಲ್ ಸಿಂಗ್, ಮದನ್ ಲಾಲ್ ಜಲಾಲ್‌ಪುರ್, ಹರ್ಜೋತ್ ಕಮಲ್, ಬೃಂದರ್ ಧಿಲ್ಲಾನ್, ಅಮೃತಸರ ಮೇಯರ್‌ರಿಂಟು ಹಿಡಿದು ಅನೇಕ ನಾಯಕರು ಸಿಧು ಅವರ ಮನೆಗೆ ಆಗಮಿಸಿದ್ದಾರೆ. ಶಾಸಕ ಜೋಗಿಂದರ್‌ಪಾಲ್ ಭೋವಾ, ಪರಗತ್ ಸಿಂಗ್, ತಾರ್ಸೆಮ್ ಸಿಂಗ್ ಡಿಸಿ, ಕಾರ್ಯಾಧ್ಯಕ್ಷರಾದ ಪವನ್ ಗೋಯೆಲ್, ಶೇರ್ ಸಿಂಗ್ ಗುಬಯಾ, ಶಾಸಕ ಅಂಗದ್ ಸೈನಿ ಕೂಡ ಬ್ಯಾಂಡ್‌ವ್ಯಾಗನ್‌ ಕೂಡ ಸಿಧು ಟೀಂ ಸೇರಿದ್ದಾರೆ.

ಇದನ್ನೂ ಓದಿ: ಪಂಜಾಬ್‌ ಕೈ ಅಧ್ಯಕ್ಷರಾಗುತ್ತಿದ್ದಂತೆ ನವಜೋತ್‌ ಸಿಂಗ್‌ ಸಿಧು ಗುರಿ 'ಜೀತೇಗ ಪಂಜಾಬ್‌' ಮಿಷನ್‌

ಸಿಧು ಅವರು ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಯನ್ನು ಸಿಎಂ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ನಿರಾಕರಿಸಿದ್ದರು. ಸಿಎಂ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಸಿಧು ಅವರನ್ನು ಸಿಎಂ ಭೇಟಿಯಾಗುವುದಿಲ್ಲ ಎಂದು ತುಕ್ರಲ್ ಹೇಳಿದ್ದಾರೆ.

ಸಿಎಂ ಅಮರೀಂದರ್‌ ಸಿಂಗ್‌ ಮತ್ತು ಸಿಧು ಅವರ ನಡುವೆ ಭಿನ್ನಾಭಿಪ್ರಾಯವಿದೆ. ಆದರೂ ನವಜೋತ್‌ ಸಿಂಗ್‌ ಸಿಧುರನ್ನು ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನ ಸ್ವಾಗತಿಸಿದ್ದು, ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ಕ್ಯಾಬಿನೆಟ್ ಸಚಿವ ತ್ರಿಪತ್ ರಾಜಿಂದರ್ ಸಿಂಗ್ ಬಜ್ವಾ ಅವರೊಂದಿಗೆ ಸೋಮವಾರ ತಮ್ಮ ನಿವಾಸದಲ್ಲಿ ಸಭೆ ನಡೆಸಬೇಕೆಂದು ಸಿಧು ಕರೆ ನೀಡಿದ್ರು. ಸಭೆಯಲ್ಲಿ ಪಿಪಿಸಿಸಿ ಮಾಜಿ ಅಧ್ಯಕ್ಷ ಸುನಿಲ್ ಜಖರ್, ಸುಖ್ಜಿಂದರ್ ಸಿಂಗ್ ರಾಂಧವಾ, ಸುಖ್ವಿಂದರ್ ಸಿಂಗ್ ಸುಖ್ ಸರ್ಕರಿಯಾ, ರಜಿಯಾ ಸುಲ್ತಾನಾ ಮತ್ತು ಚರಣಜಿತ್ ಸಿಂಗ್ ಚನ್ನಿ ಸೇರಿ 35 ಶಾಸಕರು ಮತ್ತು ಮಂತ್ರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.