ETV Bharat / bharat

ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ನಿಯೋಜನೆಗೊಂಡ ಮೊದಲ ಮಹಿಳೆ ಕ್ಯಾ. ಫಾತಿಮಾ ವಾಸಿಮ್​ - ಭಾರತೀಯ ವಾಯುಪಡೆ

ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Captain Fatima Wasim  Wasim becomes first woman medical officer  operational post on Siachen Glacier  ಸಿಯಾಚಿನ್ ಗ್ಲೇಸಿಯರ್‌  15 ಸಾವಿರ ಅಡಿಗಳ ಎತ್ತರ  ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆ ಹುದ್ದೆ  ಮಹಿಳಾ ವೈದ್ಯಕೀಯ ಅಧಿಕಾರಿ  ಭಾರತೀಯ ವಾಯುಪಡೆ  ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್
ಕ್ಯಾ. ಫಾತಿಮಾ ವಾಸಿಮ್​
author img

By ANI

Published : Dec 11, 2023, 12:09 PM IST

ನವದೆಹಲಿ: ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ. ಇದು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ. ಇದರ ಎತ್ತರ 20,062 ಅಡಿ. ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿ ಹರಿಯುತ್ತದೆ. ಈಗ ದೇಶದ ಹೆಣ್ಣು ಮಕ್ಕಳನ್ನೂ ಸಿಯಾಚಿನ್‌ನಲ್ಲಿ ನಿಯೋಜಿಸಲಾಗುತ್ತಿದೆ.

ಹೌದು, ಭಾರತೀಯ ವಾಯುಪಡೆಯು ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು ಸಿಯಾಚಿನ್‌ನಲ್ಲಿ 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ. ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣಾ ಪೋಸ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಫಾತಿಮಾ ಅವರನ್ನು 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

  • Capt Fatima Wasim of Siachen Warriors creates history by becoming the First Woman Medical Officer to be deployed on an operational post on the Siachen Glacier. She was inducted to a post at an altitude of 15,200 feet after undergoing rigorous training at Siachen Battle School… pic.twitter.com/E5SSNfZZh5

    — ANI (@ANI) December 11, 2023 " class="align-text-top noRightClick twitterSection" data=" ">

ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಕೂಡ ಕ್ಯಾಪ್ಟನ್ ಫಾತಿಮಾ ವಾಸಿಮ್‌ಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸಿಯಾಚಿನ್ ವಾರಿಯರ್ಸ್‌ನ ಕ್ಯಾಪ್ಟನ್ ಫಾತಿಮಾ ವಾಸಿಮ್‌ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿನ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು 15 ಸಾವಿರ ಅಡಿ ಎತ್ತರದಲ್ಲಿ ನಿಯೋಜಿಸಿರುವುದು ಅವರ ಅದಮ್ಯ ಮನೋಭಾವ ಮತ್ತು ಹೆಚ್ಚಿನ ಪ್ರೇರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆಯಲಾಗಿದೆ.

ಕ್ಯಾಪ್ಟನ್ ಫಾತಿಮಾ ವಾಸಿಂ ಸಿಯಾಚಿನ್ ಬ್ಯಾಟಲ್ ಸ್ಕೂಲ್​ನಲ್ಲಿ ತರಬೇತಿ ಪಡೆದಿದ್ದಾರೆ. ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಇಂಡಕ್ಷನ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿದೆ. ಈಗ ಅವರು 15,200 ಅಡಿ ಎತ್ತರದಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ.

ಓದಿ: ಸಿಯಾಚಿನ್‌ನಲ್ಲಿ ಮೃತಪಟ್ಟ ಅಗ್ನಿವೀರ್​ ಅಕ್ಷಯ್​ ಲಕ್ಷ್ಮಣ್​ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.