ETV Bharat / bharat

ಕೇಂದ್ರ ಸೇವೆಗಳಿಗೆ ಅಧಿಕಾರಿಗಳನ್ನು ಕಳಿಸಿಕೊಡಲು ನಿರಾಕರಿಸಿದ ಮಮತಾ ಸರ್ಕಾರ - ಬಂಗಾಳದ ಐಎಎಸ್​ ಅಧಿಕಾರಿಗಳು ಕೇಂದ್ರ ಸೇವೆಗೆ

ಐಎಎಸ್​ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯುಕ್ತಿಗೊಳಿಸಿದ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಪಶ್ಚಿಮ ಬಂಗಾಳ ಸರ್ಕಾರ ತಿರಸ್ಕರಿಸಿದೆ.

home minister summons IPS officer of Bengal
ಕೇಂದ್ರದ ಆದೇಶ ತಿರಸ್ಕರಿಸಿದ ಪಶ್ಚಿಮ ಬಂಗಾಳ ಸರ್ಕಾರ
author img

By

Published : Dec 13, 2020, 6:19 PM IST

ನವದೆಹಲಿ : ಪಶ್ಚಿಮ ಬಂಗಾಳದ ಮೂವರು ಐಪಿಎಸ್​ ಅಧಿಕಾರಿಗಳನ್ನು ಕೇಂದ್ರ ಸೇವೆಗಳಿಗೆ ನಿಯುಕ್ತಿಗೊಳಿಸಿ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಮಮತಾ ಸರ್ಕಾರ ತಿರಸ್ಕರಿದ್ದು, ಅವರನ್ನು ಕಳಿಸಿಕೊಡಲು ಸಾಧ್ಯವಿಲ್ಲ ಎಂದಿದೆ.

ಮೂವರು ಐಪಿಎಸ್​ ಅಧಿಕಾರಿಗಳಾದ ಭೋಲನಾಥ್ ಪಾಂಡೆ ( ಡೈಮಂಡ್ ಹಾರ್ಬರ್ ಎಸ್ಪಿ ), ರಾಜೀವ್ ಮಿಶ್ರಾ (ದಕ್ಷಿಣ ಬಂಗಾಳ ಎಡಿಜಿ ), ಮತ್ತು ಪ್ರವೀಣ್ ಕುಮಾರ್ ತ್ರಿಪಾಠಿ (ಪ್ರೆಸಿಡೆನ್ಸಿ ರೇಂಜ್ ಡಿಐಜಿ ) ಅವರನ್ನು ಕೇಂದ್ರ ಸೇವೆಗಳಿಗೆ ನಿಯಕ್ತಿಗೊಳಿಸಿ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಆದೇಶವನ್ನು ದೀದಿ ಸರ್ಕಾರ ತಿರಸ್ಕರಿಸಿದೆ. ಇದಕ್ಕೂ ಮೊದಲು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಂಗಾವಲು ವಾಹನ ಮೇಲೆ ದಾಳಿಯನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆ ಆದೇಶವನ್ನು ತಿರಸ್ಕರಿಸುವ ಮೂಲಕ ಬಂಗಾಳ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿತ್ತು.

ಓದಿ: ಸಿಎಸ್‌, ಡಿಜಿಪಿ ದೆಹಲಿಗೆ ಹೋಗಲ್ಲ; ಗೃಹ ಸಚಿವಾಲಯದ ಸಮನ್ಸ್ ಗೆ ಬಂಗಾಳ ಸರ್ಕಾರದ ಸವಾಲ್

ಜೆ.ಪಿ ನಡ್ಡಾ ಬೆಂಗಾವಲಿನ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ಭದ್ರತಾ ಲೋಪವನ್ನು ಪ್ರಶ್ನಿಸಿ, ಮೇಲಿನ ಅಧಿಕಾರಿಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೇಡರ್ ನಿಯಂತ್ರಣ ಅಧಿಕಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹಾಗೂ ಗೃಹ ಸಚಿವಾಲಯಕ್ಕೆ ಇರುವುದರಿಂದ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ಇಲ್ಲ ಎನ್ನಲಾಗ್ತಿದೆ.

ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿಗೆ ತೆರಳಿದ್ದ ವೇಳೆ ಡೈಮಂಡ್ ಹಾರ್ಬರ್‌ನಲ್ಲಿ ಡಿ.10 ರಂದು ಜೆ.ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ ಹಲವು ನಾಯಕರು ಗಾಯಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.