ETV Bharat / bharat

'ಮರೆಯಲು ಸಾಧ್ಯವಿಲ್ಲ'.. ಉಮ್ಮನ್ ಚಾಂಡಿ ನಿಧನಕ್ಕೆ ಕಂಬನಿ ಮಿಡಿದ ಕೇರಳ ಜನತೆ - ಜನಸಂಪರ್ಕ ಪರಿಪಾಡಿ

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜಾರಿಗೆ ತಂದಿದ್ದ ಯೋಜನೆಗಳ ಫಲಾನುಭವಿಗಳು, ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Etv Bharat
Etv Bharat
author img

By

Published : Jul 18, 2023, 7:13 PM IST

ಕೋಯಿಕ್ಕೋಡ್ (ಕೇರಳ): ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್​ ನಾಯಕ ಉಮ್ಮನ್ ಚಾಂಡಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ತಿರುವನಂತಪುರಕ್ಕೆ ತರಲಾಗಿದೆ. ಚಾಂಡಿ ಅವರ ಅಗಲಿಕೆಗೆ ಹಲವು ನಾಯಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇಂದು ರಾಜ್ಯ ಸಚಿವಾಲಯದ ದರ್ಬಾರ್ ಹಾಲ್‌ನಲ್ಲಿ ಉಮ್ಮನ್ ಚಾಂಡಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಅಲ್ಲಿಂದ ಬಳಿಕ ಅವರು ಪ್ರಾರ್ಥನೆ ಮಾಡುತ್ತಿದ್ದ ಸೆಕ್ರೆಟರಿಯೇಟ್ ಬಳಿಯ ಸೇಂಟ್ ಜಾರ್ಜ್ ಕ್ಯಾಥೆಡ್ರಲ್​ಗೆ ಕೊಂಡೊಯ್ಯಲಾಗುತ್ತದೆ. ನಂತರ ತಿರುವನಂತಪುರಂನಲ್ಲಿರುವ ಇಂದಿರಾ ಭವನದಲ್ಲಿ ಉಮ್ಮನ್ ಚಾಂಡಿ ಅವರಿಗೆ ಪಕ್ಷದ ಕಾರ್ಯಕರ್ತರು ಅಂತಿಮ ಗಮನ ಸಲ್ಲಿಸಿದ್ದಾರೆ.

ನಾಳೆ ಬೆಳಗ್ಗೆ ಪುತ್ತುಪ್ಪಲ್ಲಿಗೆ ಉಮ್ಮನ್ ಚಾಂಡಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಸಂಜೆ ಅವರ ನಿವಾಸಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಪುತ್ತುಪ್ಪಲ್ಲಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಹಿರಿಯ ರಾಜಕಾರಣಿಯಾದ ಉಮ್ಮನ್ ಚಾಂಡಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ, ವಿವಿಧ ಸರ್ಕಾರಗಳಲ್ಲಿ ಹಣಕಾಸು, ಗೃಹ ಮತ್ತು ಕಾರ್ಮಿಕ ಇಲಾಖೆಗಳನ್ನು ನಿಭಾಯಿಸಿದ್ದರು.

ಉಮ್ಮನ್ ಚಾಂಡಿ ಅವರು 1970ರಿಂದ ಸತತ 53 ವರ್ಷಗಳ ಕಾಲ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ದಾಖಲೆ ಹೊಂದಿದ್ದರು. ಇವರ ನಿಧನದಿಂದ ಕೇರಳ ಕಾಂಗ್ರೆಸ್​ ಬಲಿಷ್ಠರಾಗಿದ್ದ ನಾಯಕನನ್ನು ಕಳೆದುಕೊಂಡಿದೆ. ತಮ್ಮ ಅಧಿಕಾರ ಹಾಗೂ ಆಡಳಿತಾವಧಿಯಲ್ಲಿ ಉಮ್ಮನ್ ಚಾಂಡಿ ಜಾರಿಗೊಳಿಸಿದ್ದ ಹಲವು ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳು ಕೇರಳದ ಜನತೆ ಅವರನ್ನು ನೆನಪಿಸಿಕೊಳ್ಳುತ್ತದೆ.

ಉಮ್ಮನ್​ ಚಾಂಡಿ ಯಾವಾಗಲೂ ಜನರ ಸಂಪರ್ಕದಲ್ಲಿರುವ ನಾಯಕರಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಜನರ ಅಹವಾಲು ಆಲಿಸಲೆಂದು ಜನಸಂಪರ್ಕ ಪರಿಪಾಡಿ ಎಂಬ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದು ದೇಶದ ಗಮನ ಸೆಳೆದಿತ್ತು. ಈ ಕಾರ್ಯಕ್ರಮದ ಫಲವಾಗಿ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಬಳಿ 2012ರಲ್ಲಿ ಕೋಯಿಕ್ಕೋಡ್ ಜಿಲ್ಲೆಯ ಚೆಂಗೊಟ್ಟುಕಾವು ಮೂಲದ ಕುಟುಂಬವೊಂದು ಬಂದಿತ್ತು.

ಮುಹಮ್ಮದ್ ನಿಶಾನ್ ಎಂಬ ಬಾಲಕನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಬೇರೆ ರಾಜ್ಯಗಳಿಗೆ ಹೋಗಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಾಕ್ಲಿಯರ್ ಇಂಪ್ಲಾಂಟ್ ಮಾಡಲು 8 ಲಕ್ಷ ರೂಪಾಯಿ ಬೇಕಿತ್ತು. ಹೀಗಾಗಿ ಮೊಹಮ್ಮದ್ ನಿಶಾನ್ ಪೋಷಕರು ಉಮ್ಮನ್ ಚಾಂಡಿ ಅವರನ್ನು ಕೋಯಿಕ್ಕೋಡ್‌ನ ಜನಸಂಪರ್ಕ ಪರಿಪಾಡಿಯಲ್ಲಿ ಮಾತನಾಡಿದ್ದರು.

ಅಲ್ಲಿ ಮೊಹಮ್ಮದ್ ನಿಶಾನ್​ಗೆ ಶ್ರುತಿ ತರಂಗಂ ಯೋಜನೆಯಡಿ ಚಿಕಿತ್ಸೆಗೆ ಉಮ್ಮನ್ ಚಾಂಡಿ ಸೂಚಿಸಿದ್ದರು. ಕಾಕ್ಲಿಯರ್ ಇಂಪ್ಲಾಂಟೇಶನ್ ಮೂಲಕ ಶ್ರವಣಶಕ್ತಿ ಪಡೆದಿರುವ ಮೊಹಮ್ಮದ್ ನಿಶಾನ್ ಈಗ 8ನೇ ತರಗತಿ ಓದುತ್ತಿದ್ದಾನೆ. ಇದೀಗ ಉಮ್ಮನ್ ಚಾಂಡಿ ಅವರನ್ನು ಕಣ್ಣಿಗೆ ಕಾಣುವ ದೇವರು ಎಂದು ಮೊಹಮ್ಮದ್ ನಿಶಾನ್ ಕುಟುಂಬ ಸ್ಮರಿಸಿಕೊಳ್ಳುತ್ತಿದೆ. ಅಲ್ಲದೇ, ಉಮ್ಮನ್ ಚಾಂಡಿ ಜಾರಿಗೆ ತಂದಿದ್ದ ಯೋಜನೆಗಳ ಹಲವು ಫಲಾನುಭವಿಗಳು ಸಹ ಉಮ್ಮನ್ ಚಾಂಡಿ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಕೇರಳದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ನಿಧನ; ಗಣ್ಯರ ಸಂತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.