ಹೈದರಾಬಾದ್: ಪುಷ್ಪ ಸಿನಿಮಾ ಶೈಲಿಯಲ್ಲಿ ಚೌಟುಪ್ಪಲ್ ನಲ್ಲಿ ಗಾಂಜಾ ಸಾಗಾಟ ಮಾಡಿದಿ ಘಟನೆ ನಡೆದಿದೆ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ರೇಂಜ್ನಲ್ಲಿ ತನ್ನ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ಆದರೆ, ಈ ಚಿತ್ರವು ಚಿತ್ರಪ್ರೇಮಿಗಳನ್ನು ಮಾತ್ರವಲ್ಲದೇ, ಕ್ರಿಮಿನಲ್ಗಳನ್ನೂ ರಂಜಿಸಿದೆ. ಈ ಚಿತ್ರದ ಶೈಲಿಯನ್ನು ತಮ್ಮ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿರುವುದು ಬಯಲಾಗಿದೆ. ಈ ಸಿನಿಮಾ ರಿಲೀಸ್ ಆದ ಮೇಲೆ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಏಕೆಂದರೆ ಅನೇಕ ಸ್ಮಗ್ಲರ್‌ಗಳು ಈ ಸಿನಿಮಾ ಶೈಲಿಯಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ.
ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದೇ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ, ರಾಚಕೊಂಡ ಪೊಲೀಸರು ಸ್ವಲ್ಪ ಜಾಣ ಪ್ರದರ್ಶನ ಮಾಡಿದ್ದಾರೆ. ಪುಷ್ಪಾ ಸಿನಿಮಾವನ್ನು ಎರಡ್ಮೂರು ಬಾರಿ ನೋಡಿದ್ದಾರಂತೆ. ಆದ್ದರಿಂದಲೇ ಕಳ್ಳಸಾಗಾಣಿಕೆದಾರರ ಆಲೋಚನಾ ಕ್ರಮ ಅವರಿಗೆ ಚೆನ್ನಾಗಿ ಅರ್ಥವಾಗಿದೆ. ಆರೋಪಗಳ ಜಾಡು ಹಿಡಿದು ಬಂದಿಸಿದ್ದಾರೆ.
ಚೌಟುಪ್ಪಲದಲ್ಲಿ ಗಾಂಜಾ ಸಾಗಾಟ: ಇತ್ತೀಚೆಗೆ ರಾಚಕೊಂಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಅಕ್ರಮ ಸಾಗಣೆ ಮಾಡುತ್ತಿದ್ದ ಕಳ್ಳಸಾಗಣೆದಾರರನ್ನು ಪೊಲೀಸರು ಹಿಡಿದಿದ್ದಾರೆ. ಡಿಸಿಎಂ ವಾಹನದೊಳಗೆ ವಿಶೇಷ ಕಂಪಾರ್ಟ್‌ಮೆಂಟ್‌ನಲ್ಲಿ 400 ಕೆಜಿ ಗಾಂಜಾ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಅವರ ಯೋಜನೆಯನ್ನು ಗ್ರಹಿಸಿದ ಪೊಲೀಸರು ಆಂಧ್ರ ಮತ್ತು ಒಡಿಶಾ ಗಡಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ ಅವರನ್ನು ಹಿಡಿದಿದ್ದಾರೆ.
ಸಿನಿಮಾ ಸ್ಟೈಲ್ನಲ್ಲಿ ಗಾಂಜಾ ಸಾಗಾಟ: ಈ ಸಂದರ್ಭದಲ್ಲಿ ಸಿ.ಪಿ.ಚೌಹಾಣ್ ಮಾತನಾಡಿ, ರಾಚಕೊಂಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಪೂರೈಕೆ ಹಾಗೂ ಬಳಕೆಯ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಚೌಟುಪ್ಪಲ್ ಪೊಲೀಸರು ಅಂತಾರಾಜ್ಯ ಸೇರಿದ ನಾಲ್ವರನ್ನು ಬಂಧಿಸಿದ್ದಾರೆ. ಅವರಿಂದ 400 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಮತ್ತು ಒಡಿಶಾ ಗಡಿಯಿಂದ ಗಾಂಜಾ ತೆಗೆದುಕೊಂಡು ಹೋಗಿ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಸಾಗಿಸಲಾಗುತ್ತಿದೆ ಎಂದು ವಿವರಿಸಲಾಗಿದೆ. ಮತ್ತೊಂದೆಡೆ, ಎಲ್‌ಬಿನಗರ ಎಸ್‌ಡಬ್ಲ್ಯೂಒಟಿ ಪೊಲೀಸರು 10 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಮೂವರು ಆರೋಪಿಗಳನ್ನು ಮೀರಪೇಟ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಅಧಿಕಾರಿ ಹೇಳಿದ್ಧೇನು? 'ಪುಷ್ಪಾ ಸಿನಿಮಾದಿಂದ ಈ ಗ್ಯಾಂಗ್ ಸ್ಫೂರ್ತಿ ಪಡೆದಿದೆಯಂತೆ. ಯಾರಿಗೂ ತಿಳಿಯದಂತೆ ಗಾಂಜಾವನ್ನು ಡಿಸಿಎಂ ವಾಹನದೊಳಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಪೋಲೀಸರೂ ಕೂಡಾ ಪುಷ್ಪ ಸಿನಿಮಾ ನೋಡಿದ್ದಾರೆ. ಅದಕ್ಕಾಗಿಯೇ ಅವರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಪೊಲೀಸ್ ಅಧಿಕಾರಿಗೆ ಅನುಮಾನ ಬಂದು ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ವಿಶೇಷ ಕಂಪಾರ್ಟ್‌ಮೆಂಟ್ ಹಾಕಿರುವುದು ಗಮನಕ್ಕೆ ಬಂದಿದೆ.
ಅವರು ಅದನ್ನು ತೆರೆದಾಗ ಅವರ ಅಪರಾಧ ಕೃತ್ಯ ಬಹಿರಂಗವಾಯಿತು. ಈವರೆಗೆ 6 ಟ್ರಿಪ್ ಗಾಂಜಾ ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಸ್ಥಳೀಯವಾಗಿಯೂ ಅಲ್ಪಸ್ವಲ್ಪ ಪೂರೈಕೆಯಾಗುತ್ತಿತ್ತು. ಉಳಿದಂತೆ ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿರುವುದಾಗಿ ವರದಿಯಾಗಿದೆ. ಈ ಪ್ರಕರಣದಲ್ಲಿ ಏಳು ಮಂದಿ ಭಾಗಿಯಾಗಿರುವುದು ಪತ್ತೆಯಾಗಿದೆ. ಸದ್ಯ ನಾಲ್ವರನ್ನು ಬಂಧಿಸಿದ್ದೇವೆ. ವೀರಣ್ಣನನ್ನು ಗಾಂಜಾ ಪೂರೈಕೆಯಲ್ಲಿ ಕಿಂಗ್ ಪಿನ್ ಎಂದು ಗುರುತಿಸಿದ್ದೇವೆ. ಇಡೀ ಜಾಲವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿ ಚೌಹಾಣ್ ಮಾಹಿತಿ ನೀಡಿದರು.
ಇದನ್ನೂ ಓದಿ: ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹಲ್ಲೆ ಪ್ರಕರಣ: ಇಬ್ಬರು ದುಷ್ಕರ್ಮಿಗಳ ಬಂಧನ