ನವದೆಹಲಿ: ದೆಹಲಿಯಿಂದ ಪುಣೆಗೆ ತೆರಳುತ್ತಿದ್ದ ಸ್ಪೆಸ್‌ಜೆಟ್ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಕರೆ ಬಂದಿದ್ದರಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾವರಣ ಉಂಟಾಯಿತು. ಇದಾದ ನಂತರ ಸಿಐಎಸ್‌ಎಫ್ ಮತ್ತು ದೆಹಲಿ ಪೊಲೀಸರು ಅಲರ್ಟ್ ಆಗಿದ್ದರು. ಸ್ಪೈಸ್‌ಜೆಟ್‌ನ ಈ ಹಾರಾಟದ ಬಗ್ಗೆ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
-
A call regarding a bomb in Pune-bound Spicejet flight from Delhi was received before the takeoff. CISF & Delhi Police are on alert. Flight being checked at Delhi Airport: Delhi Police pic.twitter.com/nQLrtSOqlv
— ANI (@ANI) January 12, 2023 " class="align-text-top noRightClick twitterSection" data="
">A call regarding a bomb in Pune-bound Spicejet flight from Delhi was received before the takeoff. CISF & Delhi Police are on alert. Flight being checked at Delhi Airport: Delhi Police pic.twitter.com/nQLrtSOqlv
— ANI (@ANI) January 12, 2023A call regarding a bomb in Pune-bound Spicejet flight from Delhi was received before the takeoff. CISF & Delhi Police are on alert. Flight being checked at Delhi Airport: Delhi Police pic.twitter.com/nQLrtSOqlv
— ANI (@ANI) January 12, 2023
ಟೇಕಾಫ್ ಆಗುವ ಮುನ್ನ ಮಾಹಿತಿ ಪಡೆದ ಬಾಂಬ್ ಸ್ಕ್ವಾಡ್, ದೆಹಲಿ ಪೊಲೀಸರು ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ವಿಮಾನವನ್ನು ಬೋರ್ಡಿಂಗ್ನಲ್ಲಿ ನಿಲ್ಲಿಸಲಾಗಿದ್ದು, ನಂತರ ಅಲ್ಲಿಗೆ ಬಾಂಬ್ ಸ್ಕ್ವಾಡ್ ಆಗಮಿಸಿ ತನಿಖೆ ನಡೆಸಿದರು. ಮಾಹಿತಿ ಪ್ರಕಾರ, ವಿಮಾನ ದೆಹಲಿಯಿಂದ ಪುಣೆಗೆ ಸಂಜೆ 6:30ಕ್ಕೆ ಹಾರಬೇಕಿತ್ತು. ಸದ್ಯ ಪೊಲೀಸರು ಈ ಬಗ್ಗೆ ನಿರಂತರ ತನಿಖೆ ನಡೆಸುತ್ತಿದ್ದಾರೆ.
ಬಾಂಬ್ ಕರೆ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಏರ್ಪೋರ್ಟ್ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಷ್ಟೇ ಅಲ್ಲ ವಿಮಾನದಲ್ಲಿ ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂತು. ಆ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ದೂರವಾಯಿತು.
ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಎಸ್‌ಎಫ್ ಮತ್ತು ದೆಹಲಿ ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ’’ವಿಮಾನವನ್ನು ಪರಿಶೀಲಿಸಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ವಿಮಾನದಲ್ಲಿ ಕಂಡು ಬಂದಿಲ್ಲ. ಆದಾಗ್ಯೂ, ನಿಯಮದಂತೆ ಹಾಗೂ ಮುಂಜಾಗರೂತೆಯ ಭಾಗವಾಗಿ ನಮ್ಮ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚಗೆ ಗೋವಾದಲ್ಲೂ ಇಂತಹುದೇ ಘಟನೆಯ ವರದಿಯಾಗಿತ್ತು. ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಾಸ್ಕೋ ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸಲಾಗಿತ್ತು. ಆಗ ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ವಿಮಾನವು ಗುಜರಾತ್‌ನ ಜಾಮ್ನಗರದಿಂದ ಗೋವಾಕ್ಕೆ ನಿಗದಿಯಂತೆ ಪ್ರಯಾಣ ಬೆಳೆಸಿತ್ತು.
ಇದಕ್ಕೂ ಮೊದಲು ಬಾಂಬ್ ಬೆದರಿಕೆ ಹಿನ್ನೆಲೆ ಮಾಸ್ಕೋ - ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಸೋಮವಾರ ರಾತ್ರಿ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿ, ಜಾಮ್‌ನಗರ ವಿಮಾನ ನಿಲ್ದಾಣವನ್ನು ಎಲ್ಲ ದಿಕ್ಕುಗಳಿಂದಲೂ ಬಂದ್ ಮಾಡಿ ಪರಿಶೀಲನೆ ನಡೆಸಿದ್ದರು. ಫ್ಲೈಟ್‌ನಲ್ಲಿ ಒಟ್ಟು 236 ಪ್ರಯಾಣಿಕರು ಮತ್ತು 8 ಸಿಬ್ಬಂದಿಗಳಿದ್ದರು. ಎಲ್ಲರನ್ನೂ ರಾತ್ರಿ 9.49ರ ಸುಮಾರಿಗೆ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿ, ತಪಾಸಣೆ ಕೈಗೊಳ್ಳಲಾಗಿತ್ತು. ಬಳಿಕ ಅವರನ್ನು ಟರ್ಮಿನಲ್ ಕಟ್ಟಡದೊಳಗಿನ ವಿಶ್ರಾಂತಿ ಕೊಠಡಿಗೆ ಕರೆದೊಯ್ಯಲಾಗಿತ್ತು.
ಬಾಲಕಿ ಮೇಲೆ ಅತ್ಯಾಚಾರವೆಸಗಿದ 10 ವರ್ಷದ ಬಾಲಕ.. ಸ್ವಂತ ಮಗಳನ್ನೇ ಕೊಂದ ಪಾಪಿ ತಂದೆ