ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆರೋಗ್ಯದ ದೃಷ್ಟಿಯಿಂದ ಕಲ್ಕತ್ತಾ ಹೈಕೋರ್ಟ್ ಮಹಿಳೆಯೊಬ್ಬರಿಗೆ ತನ್ನ 34 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಅನುಮತಿ ನೀಡಿದೆ.
ಈಗಿರುವ ಕಾನೂನು ನಿಯಮದ ಪ್ರಕಾರ 24 ವಾರಗಳವರೆಗಿನ ಭ್ರೂಣವನ್ನು ಮಾತ್ರ ಗರ್ಭಪಾತ ಮಾಡಬಹುದಾಗಿತ್ತು. ಈ ಹಿಂದೆ ಕೆಲ ಅರ್ಹ ಪ್ರಕರಣಗಳಲ್ಲಿ 27 ರಿಂದ 28 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೂ ದೇಶದ ಕೆಲ ನ್ಯಾಯಾಲಯಗಳು ಅನುಮತಿಸಿದ ಉದಾಹರಣೆಗಳಿವೆ.
ಆದರೆ, ಉತ್ತರ ಕೋಲ್ಕತ್ತಾದ ನಿವಾಸಿಯೊಬ್ಬರು ಮದುವೆಯಾದಾಗಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸುದೀರ್ಘ ಚಿಕಿತ್ಸೆಯ ನಂತರ ಗರ್ಭಿಣಿಯಾಗಿದ್ದರು. ಆದರೆ, ಭ್ರೂಣ ಬೆಳೆದಂತೆ ಬೆಳೆದಂತೆ ಇವರ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಾ ಹೋಗಿದೆ.
ಇದನ್ನೂ ಓದಿ: ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ತಡೆ ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್
ಹೀಗಾಗಿ ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಕಲ್ಕತ್ತಾ ಹೈಕೋರ್ಟ್ ಆಕೆಗೆ ಗರ್ಭಪಾತಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದು, ತೀರಾ ತಡವಾಗಿ ಗರ್ಭಪಾತ ಮಾಡುವುದರಿಂದ ಮತ್ತಷ್ಟು ತೊಡಕುಗಳು ಉಂಟಾದರೆ ಯಾರೂ ಜವಾಬ್ದಾರರಲ್ಲ ಎಂದು ತಿಳಿಸಿದೆ.