ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸಿಎಎ ಜಾರಿಯಾದರೆ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಂಗಳವಾರ ಹೇಳಿದ್ದಾರೆ. ಸಿಎಎ ಮಸೂದೆಯನ್ನು ಮೂರು ವರ್ಷಗಳ ಹಿಂದೆ ಅಂಗೀಕರಿಸಲಾಗಿದೆ, ಆದರೆ ಬಿಜೆಪಿ ಅದನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಅವರು ಕೇಂದ್ರದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುಮಾರು ಮೂರು ವರ್ಷಗಳ ಹಿಂದೆ ಸಿಎಎ ಅಂಗೀಕರಿಸಲ್ಪಟ್ಟಿದೆ. ಅದನ್ನು ಇನ್ನೂ ಏಕೆ ಜಾರಿಗೊಳಿಸಲಾಗಿಲ್ಲ? ಇದನ್ನು ಜಾರಿಗೆ ತಂದರೆ ಹಿಂದೂಗಳು ಮಾತ್ರ ಅಪಾಯಕ್ಕೆ ಸಿಲುಕುತ್ತಾರೆ ಎಂದು ಅವರು ಹೇಳಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ವಿಷಯ ಮತ್ತೊಮ್ಮೆ ತೀವ್ರಗೊಂಡಿದ್ದು, ವಿರೋಧ ಪಕ್ಷದ ನಾಯಕರು ಇದು ಕೇವಲ ಮತದಾರರನ್ನು ಓಲೈಸುವ ಸಾಧನ ಎಂದು ಟೀಕಿಸಿದ್ದಾರೆ.
-
Kolkata, WB | CAA was passed 3 yrs ago, if it's implemented it'll be dangerous to Hindus themselves. Why it isn't being implemented, who is stopping it? CAA-NRC is merely for politics: AR Chowdhury, Congress pic.twitter.com/zv77FgNzLK
— ANI (@ANI) November 29, 2022 " class="align-text-top noRightClick twitterSection" data="
">Kolkata, WB | CAA was passed 3 yrs ago, if it's implemented it'll be dangerous to Hindus themselves. Why it isn't being implemented, who is stopping it? CAA-NRC is merely for politics: AR Chowdhury, Congress pic.twitter.com/zv77FgNzLK
— ANI (@ANI) November 29, 2022Kolkata, WB | CAA was passed 3 yrs ago, if it's implemented it'll be dangerous to Hindus themselves. Why it isn't being implemented, who is stopping it? CAA-NRC is merely for politics: AR Chowdhury, Congress pic.twitter.com/zv77FgNzLK
— ANI (@ANI) November 29, 2022
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ, ಸಿಎಎ ಮತ್ತು ಎನ್‌ಆರ್‌ಸಿ ಕೇವಲ ರಾಜಕೀಯ ಸಾಧನಗಳು ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪಂಚಾಯತ್ ಚುನಾವಣೆಯಿಂದಾಗಿ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚುತ್ತಿದೆ. ರಾಜ್ಯ ಸರ್ಕಾರವು ಗೂಂಡಾಗಳಿಂದ ತುಂಬಿದೆ, ಹೀಗಾಗಿ ಪಂಚಾಯತ್ ಚುನಾವಣೆಯ ಸಮಯದಲ್ಲಿ ಬಂಗಾಳದಲ್ಲಿ ದೊಡ್ಡ ಮಟ್ಟದ ಅಶಾಂತಿ ಉಂಟಾಗುತ್ತದೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರು ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯು ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದು ಹೇಳಿದ್ದರು. ವಿಧಾನಸಭಾ ಚುನಾವಣೆ ಪ್ರಾರಂಭವಾಗುವ ಮುನ್ನವೇ ಕೇಂದ್ರವು ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಸಿಎಎಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಮತ್ತು ಅಂದಿನಿಂದ ವಿವಾದ ಆರಂಭವಾಗಿದೆ ಎಂದರು.
ಯಾವುದೇ ಸಂದರ್ಭದಲ್ಲೂ ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಲು ಬಿಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪದೇ ಪದೇ ಹೇಳುತ್ತಿದೆ.
ಇದನ್ನೂ ಓದಿ: ಸಿಎಎ ವಿರೋಧಿಸುವವರಿಗೆ ಸರ್ಜಿಕಲ್ ಸ್ಟ್ರೈಕ್ ರೀತಿ ಉತ್ತರ: ಓವೈಸಿಗೆ ಸಿ.ಟಿ.ರವಿ ತಿರುಗೇಟು