ETV Bharat / bharat

ಕರ್ನಾಟಕದಲ್ಲಿ ಸಿಎಂ ತವರಲ್ಲೇ ಸೋಲು, ಬಂಗಾಳದಲ್ಲಿ ದೀದಿ 4/4, ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಗೆ 'ಪಂಚ್‌'ಕಜ್ಜಾಯ - ವಿಧಾನಸಭೆ ಉಪ ಚುನಾವಣೆ

ಅಕ್ಟೋಬರ್‌ 30ರಂದು ದೇಶದ 29 ವಿಧಾನಸಭೆ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಹೊರಬಿದ್ದಿದ್ದು, ಒಟ್ಟು ಫಲಿತಾಂಶದ ಸಂಪೂರ್ಣ ವಿವರ ಹೀಗಿದೆ.

byelection overall results report
29 ವಿಧಾನಸಭೆ, 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದ ಸಂಪೂರ್ಣ ಮಾಹಿತಿ
author img

By

Published : Nov 2, 2021, 8:18 PM IST

ನವದೆಹಲಿ: ದೇಶದ ಹಲವೆಡೆ ನಡೆದ ಲೋಕಸಭೆ ಹಾಗು ವಿಧಾನಸಭೆ ಉಪಚುನಾವಣೆಯ ಫಲಿತಾಂಶಗಳು ಹೀಗಿವೆ..

1. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮಂಡಿ ಲೋಕಸಭಾ ಹಾಗೂ ಫತೇಪುರ್, ಜುಬ್ಬಲ್ ಕೊಟ್‌ಖೈ ಮತ್ತು ಅರ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಕ್ಲೀನ್‌ಸ್ವೀಪ್ ಮಾಡಿದೆ. ಫತೇಪುರ್ ಮತ್ತು ಅರ್ಕಿ ವಿಧಾನಸಭಾ ಕ್ಷೇತ್ರಗಳನ್ನು ಉಳಿಸಿಕೊಂಡಿರುವ ಕೈ ಪಕ್ಷ ಜುಬ್ಬಲ್-ಕೋಟ್‌ಖೈ ಹಾಗೂ ಮಂಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಕಿತ್ತುಕೊಂಡಿದೆ.

2. ಪಶ್ಚಿಮ ಬಂಗಾಳದಲ್ಲಿ ದಿನ್ಹತಾ, ಖರ್ದಾಹಾ, ಗೋಸಾಬ (ಎಸ್‌ಸಿ) ಮತ್ತು ಶಾಂತಿಪುರದಲ್ಲಿ ತೃಣಮೂಲ ಕಾಂಗ್ರೆಸ್ ಜಯ ದಾಖಲಿಸಿದೆ. ಈ 4 ಕ್ಷೇತ್ರಗಳ ಪೈಕಿ ಟಿಎಂಸಿಯ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಖರ್ದಾಹಾ ವಿಧಾನಸಭಾ ಕ್ಷೇತ್ರದಲ್ಲಿ 93,000 ಮತಗಳ ಅಂತರದಿಂದ ಗೆದ್ದಿದ್ದಾರೆ. ದಿನ್ಹತಾ ಕ್ಷೇತ್ರದಲ್ಲಿ ಟಿಎಂಸಿಯ ಉದಯನ್ ಗುಹಾ 1.6 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.

3. ಹರಿಯಾಣದಲ್ಲಿ ಐಎನ್‌ಎಲ್‌ಡಿ ನಾಯಕ ಅಭಯ್ ಸಿಂಗ್ ಚೌಟಾಲ ಅವರು ಎಲ್ಲೆನಾಬಾದ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಗೋಬಿಂದ್ ಕಾಂಡವನ್ನು 6,700 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೇಂದ್ರದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಜನವರಿಯಲ್ಲಿ ಚೌಟಾಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇಲ್ಲಿ ಉಪಚುನಾವಣೆ ನಡೆದಿತ್ತು.

4. ಕರ್ನಾಟಕದಲ್ಲಿ ರಾಜ್ಯದಲ್ಲಿ ನಡೆದಿರುವ ಉಪಚುನಾವಣೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ ಭೂಸನೂರ ಗೆದ್ದರೆ, ಹಾನಗಲ್‌ನಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದರು. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯ ಭೂಸನೂರ ರಮೇಶ ಬಾಳಪ್ಪ ಅವರು ಕಾಂಗ್ರೆಸ್‌ನ ಅಶೋಕ ಮಲ್ಲಪ್ಪ ಮನಗೂಳಿ ವಿರುದ್ಧ 31,185 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾನಗಲ್‌ನಲ್ಲಿ ಕಾಂಗ್ರೆಸ್‌ನ ಮಾನೆ ಶ್ರೀನಿವಾಸ ಮಾನೆ ಅವರು ಬಿಜೆಪಿಯ ಶಿವರಾಜ್ ಶರಣಪ್ಪ ಸಜ್ಜನರ್ ವಿರುದ್ಧ 7,373 ಮತಗಳ ಅಂತರದಿಂದ ಗೆಲುವು ಪಡೆದರು.

5. ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನಾ ಅಭ್ಯರ್ಥಿ ಕಾಲಾಬೆನ್ ದೇಲ್ಕರ್ 51,269 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಸ್ವತಂತ್ರ ಸಂಸದ ಮೋಹನ್ ದೇಲ್ಕರ್ ಅವರ ನಿಧನದಿಂದ ಉಪಚುನಾವಣೆ ನಡೆದಿತ್ತು. ಅವರ ಪತ್ನಿ ಕಲಾಬೆನ್ ದೇಲ್ಕರ್ (50) 1,18,035 ಮತಗಳನ್ನು ಗಳಿಸಿದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಮಹೇಶ್ ಗವಿತ್ 66,766 ಮತಗಳನ್ನು ಪಡೆದ್ದಾರೆ.

6. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮೀಸಲು ಕ್ಷೇತ್ರವಾದ ಕುಶೇಶ್ವರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಜೆಡಿಯ ಅಭ್ಯರ್ಥಿ ಗಣೇಶ್ ಭಾರ್ತಿ ವಿರುದ್ಧ ಜೆಡಿಯುನ ಅಮನ್ ಭೂಷಣ್ ಹಜಾರಿ 12,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಅಮನ್ ಭೂಷಣ್ ಹಜಾರಿ ಅವರ ತಂದೆಯ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು. ಅಮನ್ ಭೂಷಣ್ ಹಜಾರಿ 58,882 ಮತಗಳನ್ನು ಪಡೆದರು. ಗಣೇಶ್ ಭಾರ್ತಿ 47,184 ಮತಗಳನ್ನು ಪಡೆದಿದ್ದಾರೆ.

7. ರಾಜಸ್ಥಾನದ ವಲ್ಲಭನಗರ ಮತ್ತು ಧರಿಯಾವಾಡ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ 71 ಶಾಸಕರ ವಿರುದ್ಧ ಕಾಂಗ್ರೆಸ್‌ನ ಸಂಖ್ಯೆ 108ಕ್ಕೆ ತಲುಪಿದೆ.

8. ಮಧ್ಯಪ್ರದೇಶದಲ್ಲಿ ಜೋಬಾತ್ ಮತ್ತು ಪೃಥ್ವಿಪುರ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ರಾಯಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ 82140 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜ್ಞಾನೇಶ್ವರ್ ಪಾಟೀಲ್ ಇಲ್ಲಿಂದ 632455 ಮತಗಳನ್ನು ಪಡೆದರೆ, 550315 ಮತಗಳನ್ನು ಕಾಂಗ್ರೆಸ್ ನ ರಾಜ್ ನಾರಾಯಣ್ ಸಿಂಗ್ ಪಡೆದಿದ್ದಾರೆ.

9. ಅಸ್ಸೋಂನಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟವು ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕೇಸರಿ ಪಕ್ಷವು ಮೂರು ಸ್ಥಾನಗಳನ್ನು ಗೆದ್ದುಕೊಂಡರೆ ಅದರ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಎರಡು ಕ್ಷೇತ್ರಗಳಲ್ಲಿ ಜಯದ ನಗೆ ಬೀರಿದೆ. ಈಶಾನ್ಯ ರಾಜ್ಯದ ಜನರು ಬಿಜೆಪಿ ಮೇಲೆ ನಂಬಿಕೆ ಇರಿಸಿದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದ್ದಾರೆ.

10. ತೆಲಂಗಾಣದ ಹುಜೂರಾಬಾದ್ ಲೋಕಸಭೆ ಉಪ ಕದನದಲ್ಲಿ ಆಡಳಿತ ಸರ್ಕಾರ ಟಿಆರ್‌ಎಸ್‌ಗೆ ಮುಖಭಂಗವಾಗಿದ್ದು, ಬಿಜೆಪಿಯ ಇಟಲ ರಾಜೇಂದರ್‌ ಗೆಲುವಿನ ನಗೆ ಬೀರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿಶನ್‌ ರೆಡ್ಡಿ, ಆಡಳಿತದಲ್ಲಿರುವ ಟಿಆರ್‌ಎಸ್‌ ಉಪ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿದೆ. ಆದರೆ ಜನರು ಬಿಜೆಪಿಗೆ ಮತ ನೀಡಿ ಇಟಲ ರಾಜೇಂದರ್‌ ಅವರನ್ನು ಗೆಲ್ಲಿಸಿದ್ದಾರೆ. ಹಣದ ಬಲವನ್ನು ತಿರಸ್ಕರಿಸಿದ ಜನರಿಗೆ ಧನ್ಯವಾದ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.