ETV Bharat / bharat

ಮಹಿಳೆಗೆ ದಿಢೀರ್‌ ಎದೆನೋವು: ಸೀದಾ ಆಸ್ಪತ್ರೆಗೆ ಬಸ್‌ ಚಲಾಯಿಸಿ ಪ್ರಾಣ ಉಳಿಸಿದ ಚಾಲಕ! - etv bharat karnataka

ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಗಾಂಧಿನಗರದಿಂದ ಅಹಮದಾಬಾದ್‌ಗೆ ಸಂಚರಿಸುತ್ತಿದ್ದರು. ಬಸ್‌ ಕೋಬಾ ಸರ್ಕಲ್ ಬಳಿ ಸಾಗುತ್ತಿದ್ದಂತೆ ದಿಢೀರ್‌ ಎದೆನೋವು ಕಾಣಿಸಿಕೊಂಡಿದೆ.

Bus driver Shankarpuri Goswami
ಬಸ್ ಚಾಲಕ ಶಂಕರಪುರಿ ಗೋಸ್ವಾಮಿ
author img

By

Published : Dec 14, 2022, 3:55 PM IST

ಅಹಮದಾಬಾದ್: ರಾಜ್ಯ ಸಾರಿಗೆ ವೋಲ್ವೋ ಬಸ್ ಚಾಲಕರೊಬ್ಬರು ಎದೆನೋವು ಕಾಣಿಸಿಕೊಂಡಿದ್ದ ಮಹಿಳೆಯ ಜೀವ ಉಳಿಸಲು ಬಸ್ ಅ​ನ್ನು ನೇರವಾಗಿ ಖಾಸಗಿ ಆಸ್ಪತ್ರೆಗೆ ಚಲಾಯಿಸಿ ಮಾನವೀಯತೆ ಮೆರೆದಿದ್ದಾರೆ. ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ 31 ವರ್ಷದ ಮಹಿಳೆ ಗಾಂಧಿನಗರದಿಂದ ಅಹಮದಾಬಾದ್‌ಗೆ ಸಂಚರಿಸುತ್ತಿದ್ದರು. ಬಸ್‌ ಇಲ್ಲಿನ ಕೋಬಾ ಸರ್ಕಲ್ ಬಳಿ ಸಾಗುತ್ತಿದ್ದಂತೆ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೊಡಲೇ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಈ ವಿಚಾರವನ್ನು ಚಾಲಕ ಶಂಕರಪುರಿ ಗೋಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.

ಚಾಲಕ ತಕ್ಷಣ ಎಚ್ಚೆತ್ತುಕೊಂಡು ಕೇವಲ ಏಳೇ ನಿಮಿಷದಲ್ಲಿ ಕೋಬಾ ವೃತ್ತದಿಂದ ಅಪೋಲೋ ಆಸ್ಪತ್ರೆಗೆ ಬಸ್ ಚಲಾಯಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆತು 20 ನಿಮಿಷಗಳ ನಂತರ ಮಹಿಳೆ ಚೇತರಿಸಿಕೊಂಡರು ಎಂದು ಅಪೋಲೋ ವೈದ್ಯರು ತಿಳಿಸಿದರು. ಸಮಯ ಪ್ರಜ್ಞೆ ಮೆರೆದು ಜೀವ ಕಾಪಾಡಿದ ಬಸ್ ಚಾಲಕನನ್ನು ಸನ್ಮಾನಿಸಲಾಗಿದೆ.

ಇದನ್ನೂ ಓದಿ:ಒಂದೇ ಕುಟುಂಬದ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.