ನವದೆಹಲಿ: ದೇಶದ ಅತಿದೊಡ್ಡ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೋ ಶುಕ್ರವಾರ ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಷೇರುದಾರರಿಗೆ ಬಂಪರ್ ಕೊಡುಗೆ ನೀಡಿದೆ. ಜೊಮ್ಯಾಟೋ ಷೇರುಗಳು ಐಪಿಒ ಇಶ್ಯೂ ಪ್ರೈಸ್ಗಿಂತಲೂ ಶೇ.53ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿದ್ದು, ಹೂಡಿಕೆದಾರರಿಗೆ ಬಂಪರ್ ಲಾಭ ತಂದು ಕೊಟ್ಟಿದೆ.
ಜೊಮ್ಯಾಟೋ ಐಪಿಓ ಜುಲೈ 14ರಿಂದ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆ ತಜ್ಞರು ಇದರ ಐಪಿಒಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಹೂಡಿಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಐಪಿಒ ಇಶ್ಯೂ ಪ್ರೈಸ್ಗಿಂತಲೂ ಶೇ.53ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿದೆ.
ಜೊಮ್ಯಾಟೋ ಷೇರುಗಳು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಪ್ರತಿ ಷೇರಿಗೆ 116 ರೂ.ಗಳಂತೆ ಲಿಸ್ಟ್ ಆಗಿದೆ. ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ 115 ರೂ.ಗೆ ಲಿಸ್ಟ್ ಆಗಿದೆ. ಇದರ ಐಪಿಒ ಮೂಲ ಬೆಲೆ 72 - 76 ರೂ. ಆಗಿತ್ತು. ಆದರೆ, ಇದೀಗ ಬರೋಬ್ಬರಿ ಶೇ.51ರಷ್ಟು ಹೆಚ್ಚಿನ ಬೆಲೆಗೆ ಷೇರುಗಳು ಲಿಸ್ಟ್ ಆಗಿವೆ. ಇನ್ನು ಎನ್‌ಎಸ್‌ಇಯಲ್ಲಿ 1 ಲಕ್ಷ ಕೋಟಿ ರೂ. ದಾಟಿದೆ. 9,375 ಕೋಟಿ ರೂ. ಸಂಗ್ರಹಿಸುವ ಗುರಿಯೊಂದಿಗೆ ಜೊಮ್ಯಾಟೋ ಸಾರ್ವಜನಿಕ ಆರಂಭಿಕ ಕೊಡುಗೆ ಘೋಷಿಸಿತ್ತು.