ಭುವನೇಶ್ವರ: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯನ್ನು ಒಡಿಶಾದಿಂದ ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನೀರಜ್ ಸಿಂಗ್ ಎಂಬ ಆರೋಪಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಐದನೇ ಆರೋಪಿಯಾಗಿದ್ದಾನೆ. ಈ ಹಿಂದೆ, ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಲು ಬಳಸಿದ ಗಿಟ್‌ಹಬ್ ಅಪ್ಲಿಕೇಶನ್‌ನಲ್ಲಿನ ಪಾತ್ರಗಳಿಗಾಗಿ ವಿಶಾಲ್ ಝಾ, ಶ್ವೇತಾ ಸಿಂಗ್, ಮಯಾಂಕ್ ರಾವಲ್ ಮತ್ತು ನೀರಜ್ ಬಿಷ್ಣೋಯ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಓದಿ: ಸವಾಲು ಹಾಕಿ, ಸ್ವಯಂ ಪ್ರೇರಿತವಾಗಿ ಕೋವಿಡ್ ಅಂಟಿಸಿಕೊಂಡಿದ್ದ ಗಾಯಕಿ ಹನಾ ಹೊರ್ಕಾ ನಿಧನ
ವರದಿಗಳ ಪ್ರಕಾರ, ಮುಂಬೈ ಪೊಲೀಸರ ಸೈಬರ್ ಸೆಲ್ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಆರೋಪಿ ಸಿಂಗ್ನನ್ನು ಮುಂಬೈಗೆ ಕರೆದೊಯ್ಯಲಿದ್ದಾರೆ. ಆ್ಯಪ್ ರಚಿಸಿದ್ದಕ್ಕಾಗಿ ಅಸ್ಸೋಂನಿಂದ ದೆಹಲಿ ಪೊಲೀಸರು ಬಂಧಿಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ‘ಬುಲ್ಲಿ ಬಾಯಿ’ ಆ್ಯಪ್ ಸೃಷ್ಟಿಕರ್ತ ನೀರಜ್ ಬಿಷ್ಣೋಯ್‌ಗೆ ಜಾಮೀನು ನೀಡಲು ದೆಹಲಿ ನ್ಯಾಯಾಲಯ ಕಳೆದ ವಾರ ನಿರಾಕರಿಸಿತ್ತು.