ಹೈದರಾಬಾದ್(ತೆಲಂಗಾಣ): ಕಳೆದ ವರ್ಷ ಮದುವೆಯ ಸಂದರ್ಭದಲ್ಲಿ ‘ಬುಲೆಟ್ ಬಂಡಿ’ ತೆಲುಗು ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ್ದ ವರನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಬಡಂಗಪೇಟೆ ಮಹಾನಗರ ಪಾಲಿಕೆಯ ಪಟ್ಟಣ ಯೋಜನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕುಲಾ ಅಶೋಕ್ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಯೋಜನಾ ವಿಭಾಗದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್, ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಬಂದಿದ್ದ ದೇವೇಂದರ್ ರೆಡ್ಡಿ ಎಂಬುವರಿಂದ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಅಶೋಕ್ ನಗದು ತೆಗೆದುಕೊಂಡು ಹೋಗುತ್ತಿದ್ದನಂತೆ.
‘ಬುಲೆಟ್ ಬಂಡಿ’ ಹಾಡಿಗೆ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವರು ಈ ಅಶೋಕ್.
ಇದನ್ನೂ ಓದಿ: 40 ಲಕ್ಷ ಬೆಲೆ ಬಾಳುವ ಬೈಕ್ಗಳೊಂದಿಗೆ ಐವರು ಕಳ್ಳರ ಬಂಧನ: ಪೊಲೀಸರನ್ನು ಶ್ಲಾಘಿಸಿದ ಎಸ್ಪಿ