ಬೀಡ್ (ಮಹಾರಾಷ್ಟ್ರ): ನೆರೆರಾಜ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕೃಷಿ ಉತ್ಸವ ಆರಂಭವಾಗಿದೆ. ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಕೃಷಿ ಉತ್ಸವದಲ್ಲಿ ಈ ವರ್ಷ ಕರ್ನಾಟಕದ ಬೆಳಗಾವಿಯ ಗಜೇಂದ್ರ ಎಂಬ ಕೋಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೃಷಿ ಉತ್ಸವದಲ್ಲಿ ಈ ಗಜೇಂದ್ರನೇ ಆಕರ್ಷಣೆಯಾಗಿದ್ದು, ಇದನ್ನು ನೋಡಲು ರೈತರು ಮತ್ತು ಜನತೆ ಮುಗಿ ಬೀಳುತ್ತಿದ್ದಾರೆ.
ಹೌದು, ಬೀಡ್ ಜಿಲ್ಲೆಯಲ್ಲಿ ಕೃಷಿ ರತ್ನ ಗಣೇಶರಾವ್ ಬೇಂದ್ರೆ ಅವರ ಸ್ಮರಣಾರ್ಥ ಪ್ರತಿ ವರ್ಷ ಕೃಷಿ ಉತ್ಸವ ಆಯೋಜಿಸಲಾಗುತ್ತದೆ. ಈ ವರ್ಷ ಕೃಷಿ ಉತ್ಸವದಲ್ಲಿ ವಸ್ತುಪ್ರದರ್ಶನಕ್ಕಾಗಿ 180 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ರೈತರಿಗೆ ಉಪಯುಕ್ತವಾದ ಎಲ್ಲ ಸಾಮಗ್ರಿಗಳು ಸೇರಿದಂತೆ ವಿವಿಧ ಸಲಕರಣೆಗಳ ಮಳಿಗೆಗಳು ಸೇರಿವೆ. ರೈತರಲ್ಲಿ ಜಾನುವಾರು ಮತ್ತು ಹೈನುಗಾರಿಕೆಯ ಬಗ್ಗೆ ಆಸಕ್ತಿ ಮೂಡಿಸಲು ಬೆಳಗಾವಿಯ ಗಜಗಾತ್ರದ ಕೋಣ ಈ ಬಾರಿ ಕೃಷಿ ಉತ್ಸವದ ಭಾಗವಾಗಿದೆ. ಇಷ್ಟೇ ಅಲ್ಲ, ಇಡೀ ಕೃಷಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಜನರ ಗಮನ ಸೆಳೆಯುತ್ತಿದೆ.
ಒಂದೂವರೆ ಟನ್ ತೂಕದ ಗಜೇಂದ್ರ: ಕೃಷಿ ಉತ್ಸವದಲ್ಲಿ ಗಜಗಾತ್ರದ ಕೋಣವನ್ನು ಕಂಡ ಬೆರಗಾತ್ತಿರುವ ಮಹಾರಾಷ್ಟ್ರದ ರೈತರು, ಇದರ ತೂಕ, ಆಹಾರದ ಬಗ್ಗೆ ಕೇಳಿ ಕುತೂಹಲವನ್ನೂ ಹೆಚ್ಚಿಕೊಳ್ಳುತ್ತಿದ್ದಾರೆ. ಕೃಷಿ ಉತ್ಸವಕ್ಕೆ ಬರುತ್ತಿರುವ ಜನರಿಗೆ ಕೋಣ ಬಗ್ಗೆ ಮಾಲೀಕರು ಸ್ವವಿವರವಾಗಿ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಇದನ್ನು ನೋಡಲು ಮತ್ತು ಅದರ ತಿಳಿದುಕೊಳ್ಳಲು ರೈತರ ದಂಡೇ ಸೇರುತ್ತಿದೆ.
ಇದನ್ನೂ ಓದಿ: ಈ ಕೋಣದ ಬೆಲೆ ಬರೋಬ್ಬರಿ 35 ಕೋಟಿ ರೂಪಾಯಿ.. ಹೈದರಾಬಾದ್ ಸದರ್ ಉತ್ಸವದಲ್ಲಿ 'ರಾಜು'ದೇ ಹವಾ..
ಒಂದೂವರೆ ಟನ್ ತೂಕದ ತೂಗುತ್ತಿರುವ ಗಜೇಂದ್ರನಿಗೆ ನಾವು ದಿನಕ್ಕೆ ಹದಿನೈದು ಲೀಟರ್ ಹಾಲು ಮತ್ತು ಮೂರು ಕೆಜಿ ಸೇಬುಗಳನ್ನು ನೀಡುತ್ತಿದ್ದೇವೆ. ಅಲ್ಲದೇ, 2 ಕೆಜಿ ಹಿಟ್ಟು ಮತ್ತು 3 ಕೆಜಿ ಹಿಂಡಿ, ಮೇವು ನೀಡಲಾಗುತ್ತಿದೆ. ಈ ಗಜೇಂದ್ರ ಕೋಣವನ್ನು 1.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡುವ ಪಂಜಾಬ್‌ನಿಂದ ಬೇಡಿಕೆ ಬಂದಿದೆ. ಆದರೂ, ನಾವು ಕೊಡುತ್ತಿಲ್ಲ ಎಂದು ಮಾಲೀಕರು ಕೇಳುವ ಮಾತುಗಳನ್ನು ಕೇಳಿ ಕೃಷಿ ಉತ್ಸವಕ್ಕೆ ಬರುತ್ತಿರುವ ರೈತರು ಬೆರಗಾಗುತ್ತಿದ್ದಾರೆ.
ಗಜೇಂದ್ರನ ಮೂಲಕ ರೈತರಿಗೆ ಉತ್ತೇಜನ: ಬೆಳಗಾವಿಯ ಗಜೇಂದ್ರ ಕೋಣದ ಮಾಲೀಕರ ಮನೆಯಲ್ಲಿ ಈ ಕೋಣದ ಜೊತೆಗೆ 50 ಎಮ್ಮೆಗಳು ಸಹ ಇವೆ. ಈ ಎಮ್ಮೆಗಳು ನಿತ್ಯ 100 ರಿಂದ 150 ಲೀಟರ್ ಹಾಲು ನೀಡುತ್ತಿದ್ದು, ಅದರಿಂದ 4-5 ಸಾವಿರ ರೂ.ಗಳನ್ನು ಗಳಿಸುತ್ತಾರೆ. ಆದ್ದರಿಂದ ಬೀಡ್ ಜಿಲ್ಲೆಯ ರೈತರು ಮತ್ತು ಜನರಲ್ಲಿ ಹೈನುಗಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಈ ಬಾರಿ ಉತ್ಸವಕ್ಕೆ ಗಜೇಂದ್ರ ಕೋಣವನ್ನು ಕರೆಸಲಾಗಿದೆ. ಒಂದೂವರೆ ಟನ್ ತೂಕದ ಗಜೇಂದ್ರ ಹೆಚ್ಚು ಆಕರ್ಷಣೆಯಾಗಿರುವುದಲ್ಲದೇ, ಅದರ ಮೂಲಕ ಇಲ್ಲಿನ ರೈತರಲ್ಲೂ ಹೈನುಗಾರಿಕೆ ಬಗ್ಗೆ ಉತ್ತೇಜನ ಸಿಗುವಂತೆ ಮಾಡುವ ಉದ್ದೇಶವಾಗಿದೆ ಎಂದು ಕೃಷಿ ಉತ್ಸವದ ಆಯೋಜಕ ಮಹೇಶ್ ಬೇಂದ್ರೆ ತಿಳಿಸಿದ್ದಾರೆ.
ಅಲ್ಲದೇ, ಕೃಷಿ ಉತ್ಸವದಲ್ಲಿ ಕೃಷಿ ಪ್ರವಾಸೋದ್ಯಮ ಮತ್ತು ಆಧುನಿಕ ಯಂತ್ರೋಪಕರಣಗಳು ವಸ್ತು ಪ್ರದರ್ಶನ ಇರಲಿದೆ. ನಮ್ಮ ಜಿಲ್ಲೆಯ ರೈತರಿಗೆ ಹರಿಯಾಣ ಪಂಜಾಬ್ ಮತ್ತು ಇತರ ರಾಜ್ಯಗಳ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಸಲು ರಾಜ್ಯ ಮಟ್ಟದ ಕೃಷಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳ ರೈತರಿಗೆ ತಿಳಿಸಲು ಕೃಷಿ ಆಧಾರಿತ ವಿಚಾರ ಸಂಕಿರಣಗಳು ಕೂಡ ನಡೆಯಲಿವೆ ಆಯೋಜಕರು ಮಾಹಿತಿ ನೀಡಿದರು.
ಇದನ್ನೂ ಓದಿ: ಈ ದೈತ್ಯ ಗಜೇಂದ್ರನಿಗೆ ಮನಸೋಲದವ್ರೇ ಇಲ್ಲ.. 80 ಲಕ್ಷ ರೂ. ಕೊಡ್ತೇವೆಂದರೂ ಮಾರಾಟ ಮಾಡಲೊಪ್ಪದ ಮಾಲೀಕ