ETV Bharat / bharat

ಜನವರಿ 31ರಿಂದ ಸಂಸತ್ತಿನ ಬಜೆಟ್ ಅಧಿವೇಶನ.. ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ - ಕೇಂದ್ರ ಬಜೆಟ್ ಮಂಡನೆ

ಇತ್ತೀಚೆಗೆ ಸಂಸತ್ತಿನ 400ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಮಧ್ಯೆಯೇ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳ ಸುಗಮ ಕಾರ್ಯ ನಿರ್ವಹಣೆಗೆ ಯೋಜನೆಯನ್ನು ಸಿದ್ಧಪಡಿಸಲು ಈಗಾಗಲೇ ಸದನಗಳಿಗೆ ಸೂಚನೆ ನೀಡಲಾಗಿದೆ..

ಸಂಸತ್
ಸಂಸತ್
author img

By

Published : Jan 14, 2022, 2:05 PM IST

ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಗಿ ಏಪ್ರಿಲ್ 8ಕ್ಕೆ ಮುಕ್ತಾಯವಾಗಲಿದೆ.

ರಾಷ್ಟ್ರಪತಿಗಳು ಜನವರಿ 31ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಭಾಗ ಫೆಬ್ರವರಿ 11ರಂದು ಮುಕ್ತಾಯವಾಗಿ ಒಂದು ತಿಂಗಳ ನಂತರ ಅಂದರೆ ಮಾರ್ಚ್ 14ರಿಂದ ಏಪ್ರಿಲ್ 8ರವರೆಗೆ ಎರಡನೇ ಭಾಗದ ಅಧಿವೇಶನ ನಡೆಯಲಿದೆ. ಫೆಬ್ರವರಿ 1ರಂದು ಕೇಂದ್ರದ 2022-23ರ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವಾಲಯದ ಜನರಲ್, ರಾಜ್ಯಸಭೆಯ 256ನೇ ಅಧಿವೇಶನವನ್ನು (ಬಜೆಟ್ ಅಧಿವೇಶನ - 2022) ಜನವರಿ 31ರ ಸೋಮವಾರದಿಂದ ನಡೆಯಲಿದೆ. ಹೋಳಿ ಹಬ್ಬದ ನಿಮಿತ್ತ ಮಾರ್ಚ್ 18ರಂದು ಯಾವುದೇ ಸಭೆ ಇರುವುದಿಲ್ಲ. 2022-23ರ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸಂಸತ್ತಿನ 400ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಮಧ್ಯೆಯೇ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳ ಸುಗಮ ಕಾರ್ಯ ನಿರ್ವಹಣೆಗೆ ಯೋಜನೆಯನ್ನು ಸಿದ್ಧಪಡಿಸಲು ಈಗಾಗಲೇ ಸದನಗಳಿಗೆ ಸೂಚನೆ ನೀಡಲಾಗಿದೆ.

ಓದಿ: ಪೈಶಾಚಿಕ ಕೃತ್ಯ! ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಹೆತ್ತ ತಾಯಿಯ ಮೇಲೆ ಪಾಪಿ ಮಗನಿಂದ ಅತ್ಯಾಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.