ನವದೆಹಲಿ: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಭವಿಲ್ಲದೆ ಗೋ ಏರ್ ವಿಮಾನಯಾನ ಸಂಸ್ಥೆ ತೀರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಅತಿ ಕಡಿಮೆ ವೆಚ್ಚದ ವಿಮಾನಯಾನವಾಗಿ ಪರಿವರ್ತಿಸಿ ಗೋ ಫಸ್ಟ್ ಎಂದು ಮರುನಾಮಕರಣ ಮಾಡಿದೆ.
ಇನ್ಮುಂದೆ, ಗೋ ಏರ್ ಬದಲಾಗಿ ಗೋ ಫಸ್ಟ್ ಎಂಬ ಹೆಸರಿನ ವಿಮಾನದಲ್ಲಿ ಜನತೆ ಪ್ರಯಾಣ ಮಾಡಬಹುದು. ಈ ಹೊಸ ಬ್ರಾಂಡ್ ಅಡಿಯಲ್ಲಿ ವಿಮಾನಯಾನವು ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಪರಿವರ್ತಿಸುವ ಪ್ರಕ್ರಿಯೆಯಲ್ಲಿದೆ.
ಕಳೆದ 15 ತಿಂಗಳಲ್ಲಿ ಗೋ ಫಸ್ಟ್ ಚೇತರಿಸಿಕೊಂಡಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲೂ ನಾವು ಅದೇ ಉತ್ಸಾಹದಿಂದ ಮುಂದುವರಿಯುತ್ತೇವೆ. ಮತ್ತಷ್ಟು ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ತಿಳಿಸಿದ್ದಾರೆ.