ನವದೆಹಲಿ : ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಸಾಮಾನ್ಯವಾಗಿ ಮುಖ್ಯ ಆರ್ಥಿಕ ಸಲಹೆಗಾರರಿಂದ ರಚಿಸಲ್ಪಟ್ಟಿರುವ ಸಮೀಕ್ಷೆಯು ಪ್ರಸ್ತುತ ಆರ್ಥಿಕ ವರ್ಷ ಅಂದರೆ ಪ್ರಸ್ತುತ ದೇಶದ ಆರ್ಥಿಕತೆಯ ಬಗ್ಗೆ ವಿವರವಾದ ಅಂಕಿ-ಅಂಶಗಳನ್ನು ಮತ್ತು ಭವಿಷ್ಯದ ನೀತಿ-ನಿರ್ದೇಶನವನ್ನು ಸಹ ಒಳಗೊಂಡಿರುತ್ತದೆ.
ಮೊದಲ ಆರ್ಥಿಕ ಸಮೀಕ್ಷೆಯನ್ನು ಆರ್ಥಿಕ ವರ್ಷ 1950-51ರಲ್ಲಿ ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ, ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಬಜೆಟ್‌ನೊಂದಿಗೆ ಪ್ರಸ್ತುತಪಡಿಸಲಾಯಿತು. ಆದರೆ, 1964ರಿಂದ ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ಮಂಡಿಸುತ್ತಾ ಬರಲಾಗಿದೆ. ಕಳೆದ ವರ್ಷ ಮಾತ್ರ ಕೇಂದ್ರ ಬಜೆಟ್‌ಗೆ ಎರಡು ದಿನಗಳ ಮೊದಲು ಮಂಡಿಸಲಾಗಿತ್ತು.
ಸಾಮಾನ್ಯವಾಗಿ, ಆರ್ಥಿಕ ಸಮೀಕ್ಷೆಯನ್ನು 'ಸಂಚಿಕೆ ಒಂದು' ಮತ್ತು 'ಸಂಚಿಕೆ ಎರಡು' ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅಂಕಿ-ಅಂಶಗಳು ಇರುತ್ತದೆ. ಆರ್ಥಿಕ ಸಮೀಕ್ಷೆಯ ಮೊದಲ ಭಾಗವು ಆರ್ಥಿಕ ವಿಚಾರಗಳು, ದೊಡ್ಡ ನೀತಿ ಸಮಸ್ಯೆಗಳು, ಭಾರತೀಯ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಇತರ ವಿಷಯಗಳನ್ನು ಹಾಗೂ ಎರಡನೇ ಸಂಚಿಕೆಯು ಪ್ರಮುಖ ಸ್ಥೂಲ-ಆರ್ಥಿಕ ಸೂಚಕಗಳೊಂದಿಗೆ ಆರ್ಥಿಕತೆಯ ಸ್ಥಿತಿಯೊಂದಿಗೆ ವ್ಯವಹರಿಸುವ ಭಾರೀ ದತ್ತಾಂಶದ ದಾಖಲೆಗಳನ್ನು ಒಳಗೊಂಡಿರುತ್ತದೆ.
ಕಳೆದ ವರ್ಷ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಿದ್ದರು. ಮೊದಲ ಭಾಗದಲ್ಲಿ, ಶತಮಾನಕ್ಕೊಮ್ಮೆ ಸಂಭವಿಸುವ ಬಿಕ್ಕಟ್ಟಿನ ನಡುವೆ ಜೀವನ ಮತ್ತು ಜೀವನೋಪಾಯವನ್ನು ಉಳಿಸುವ ಮತ್ತು ಬೆಳವಣಿಗೆಯು ಸಾಲದ ಸುಸ್ಥಿರತೆಗೆ ಕಾರಣವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಅವರ ಆಲೋಚನೆಗಳ ಕುರಿತು ಮಾತನಾಡಿದ್ದರು.
ಏಕಾಏಕಿ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಆರೋಗ್ಯ ಕ್ಷೇತ್ರದ ಮೇಲೆ ಬೀರಿದ ಪರಿಣಾಮವನ್ನು ಕೇಂದ್ರೀಕರಿಸಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಮತ್ತು ನಡೆಯುತ್ತಿರುವ ಇತರ ಸುಧಾರಣಾ ಪ್ರಕ್ರಿಯೆಗಳಿಂದ ನಿಯೋಜಿಸಲಾದ ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ಗಳನ್ನು ಕೆ ಸುಬ್ರಮಣಿಯನ್ ಪ್ರಶ್ನಿಸಿದ್ದರು.
ಇದನ್ನೂ ಓದಿ: ಕೋವಿಡ್ 3ನೇ ಅಲೆ ಮಧ್ಯೆ ಬಜೆಟ್ ಅಧಿವೇಶನ.. ಇಲ್ಲಿವೆ ಪ್ರಮುಖ ಅಂಶಗಳು
ಎರಡನೇ ಭಾಗದಲ್ಲಿ ಜಿಡಿಪಿಯ ಗಾತ್ರ, ಅಂದಾಜು ಬೆಳವಣಿಗೆ ದರ, ಇತರ ಹಣಕಾಸಿನ ಬೆಳವಣಿಗೆಗಳು, ಬಾಹ್ಯ ವಲಯದ ಬಗ್ಗೆ ಮಾಹಿತಿ, ವಿತ್ತೀಯ ನಿರ್ವಹಣೆಯ ವಿವರಗಳು, ಬೆಲೆ ಮತ್ತು ಹಣದುಬ್ಬರದ ಮಾಹಿತಿಯಂತಹ ಪ್ರಮುಖ ಸ್ಥೂಲ-ಆರ್ಥಿಕ ಡೇಟಾವನ್ನು ಹಂಚಿಕೊಂಡಿದ್ದರು. ಜೊತೆಗೆ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ, ಕೃಷಿ ಮತ್ತು ಆಹಾರ ನಿರ್ವಹಣೆಯ ಸ್ಥಿತಿ, ಉದ್ಯಮ ಮತ್ತು ಮೂಲಸೌಕರ್ಯ, ಸೇವಾ ವಲಯ, ಸಾಮಾಜಿಕ ಮೂಲಸೌಕರ್ಯ, ಉದ್ಯೋಗ ಮತ್ತು ಮಾನವ ಅಭಿವೃದ್ಧಿಯಂತಹ ವಿಚಾರಗಳ ಬಗ್ಗೆಯೂ ಮಾತನಾಡಿದ್ದರು.
ಜನವರಿ 28ರಂದು ನೂತನವಾಗಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ನೇಮಕಗೊಂಡ ವಿ. ಅನಂತ ನಾಗೇಶ್ವರನ್ ಅವರು ಪ್ರಸಕ್ತ ಸಾಲಿನ (2022-23) ಆರ್ಥಿಕ ಸಮೀಕ್ಷೆಯನ್ನು ಬಜೆಟ್ ಅಧಿವೇಶನದ ಮೊದಲ ದಿನವಾದ ಹಾಗೂ ಬಜೆಟ್ ಮಂಡನೆಯ ಮುನ್ನಾ ದಿನವಾದ ಇಂದು ಮಂಡಿಸಲಿದ್ದಾರೆ. ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ