ETV Bharat / bharat

ಪತ್ನಿ ಮೇಲೆ ಸ್ನೇಹಿತನಿಂದ ಅತ್ಯಾಚಾರ ; ವಿರೋಧಿಗಳನ್ನು ಹಣಿಯಲು ಪಾಪಿ ಪತಿಯೊಬ್ಬನ ದುಷ್ಕೃತ್ಯ! - ಉತ್ತರ ಪ್ರದೇಶದಲ್ಲಿ ಅತ್ಯಾಚಾರ

ತನ್ನ ಸ್ನೇಹಿತರನ್ನು ಗಂಭೀರ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರದಿಂದ ತನ್ನ ಪತ್ನಿಯ ಮೇಲೆಯೇ ಪತಿ, ಸ್ನೇಹಿತರಿಂದ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರಪ್ರದೇಶದ ಬಾದೌನ್ ಎಂಬಲ್ಲಿ ನಡೆದಿದೆ..

budaun-man-allegedly-gets-wife-raped-to-frame-opponents
ಪತ್ನಿ ಮೇಲೆ ಸ್ನೇಹಿತನಿಂದ ಅತ್ಯಾಚಾರ; ವಿರೋಧಿಗಳನ್ನು ಹಣಿಯಲು ಪಾಪಿ ಪತಿಯೊಬ್ಬನ ದುಷ್ಕೃತ್ಯ!
author img

By

Published : May 2, 2022, 1:16 PM IST

ಬಾದೌನ್‌(ಉತ್ತರಪ್ರದೇಶ) : ತನ್ನ ವಿರೋಧಿಗಳನ್ನು ಗಂಭೀರ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ್ದಾನೆ. ಇಂಥದ್ದೊಂದು ಹೀನ, ಆಘಾತಕಾರಿ ಕೃತ್ಯ ಉತ್ತರಪ್ರದೇಶದ ಬಾದೌನ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಸ್ವತ: ಪೊಲೀಸರೇ ತಿಳಿಸಿದ್ದಾರೆ.

ಪ್ರಕರಣದ ವಿವರ : ಈ ಘಟನೆ ಕಳೆದ ಭಾನುವಾರ ನಡೆದಿದೆ. ಗಂಡ ತನ್ನ 22 ವರ್ಷದ ಪತ್ನಿಗೆ ಸುಳ್ಳು ಹೇಳಿ ಬೈಕ್‌ನಲ್ಲಿ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಸ್ಥಳ ತಲುಪಿದ ಬಳಿಕ ಅಲ್ಲಿಗೆ ತನ್ನ ಸ್ನೇಹಿತನನ್ನೂ ಕರೆಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ನೇಹಿತನಿಗೆ ಪತ್ನಿ ಮೇಲೆ ಅತ್ಯಾಚಾರ ಮಾಡುವಂತೆ ಮಾನಗೇಡಿ ಪತಿ ಸೂಚಿಸಿದ್ದಾನೆ.

ಈ ದುಷ್ಕೃತ್ಯಕ್ಕೆ ಬಲಿಯಾದ ಹೆಂಡತಿ ಪತಿಯ ಸ್ನೇಹಿತನಿಂದ ಎರಡು ಬಾರಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ನಂತರ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಕರೆ ಮಾಡಿ, ಪತ್ನಿ ಮೇಲೆ ಇಬ್ಬರು ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಾನೆ.

ಈ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಪತ್ನಿ ನಡೆದ ಸತ್ಯ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಪತಿ ಇಬ್ಬರನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾಳೆ.

ಇದರಿಂದ ಆಘಾತಗೊಂಡ ಪೊಲೀಸರು, ತಡ ಮಾಡದೇ ಆರೋಪಿ ಗಂಡ ಹಾಗೂ ಆತನ ಸ್ನೇಹಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಗಂಡನನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವನಿಗೆ ಶೋಧ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಿದ್ಧಾರ್ಥ್‌ ವರ್ಮಾ ಮಾಹಿತಿ ನೀಡಿದ್ದಾರೆ.

ಓದಿ : ದೇಶದಲ್ಲಿ 3,157 ಹೊಸ ಕೋವಿಡ್‌ ಪ್ರಕರಣ ಪತ್ತೆ, 26 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.