ನರ್ಮದಪುರಂ: ಸಿಯೋನಿ ಮಾಲ್ವಾ ನಿವಾಸಿಯಾಗಿರುವ ಯುವಕ ನಿಶಾಂಕ್ ರಾಥೋಡ್ ಭಾನುವಾರ ಮಧ್ಯಾಹ್ನ 3 ಗಂಟೆಯ ನಂತರ ಭೋಪಾಲ್‌ನಿಂದ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಮತ್ತು ಕುಟುಂಬದವರು ವಿದ್ಯಾರ್ಥಿಯನ್ನು ಹುಡುಕಲು ಆರಂಭಿಸಿದ್ದಾರೆ. ಈ ನಡುವೆ ನಿಶಾಂಕ್ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ವೊಂದನ್ನು ನೋಡಿದ ಕುಟುಂಬ ಸದಸ್ಯರು ಶಾಕ್ ಆಗಿದ್ದಾರೆ.
ಈ ಪೋಸ್ಟ್‌ನಲ್ಲಿ ನಿಶಾಂಕ್‌ನ ಫೋಟೋದ ಮೇಲೆ 'ಗುಸ್ತಾಕ್-ಎ-ನಬಿ ಅದೇ ಶಿಕ್ಷೆ, ದೇಹದಿಂದ ಬೇರ್ಪಟ್ಟಿದೆ' ಎಂದು ಬರೆಯಲಾಗಿದೆ. ನಿಶಾಂಕ್‌ನ ಯಾವ ಪೋಸ್ಟ್ನಿಂದ ಈ ವಿವಾದ ಎದ್ದಿದೆ ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಯುವಕನ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ಪೋಸ್ಟ್ ಇರಲಿಲ್ಲ. ಇದೆಲ್ಲವನ್ನು ನೋಡಿದ ನಂತರ ಕುಟುಂಬ ಸದಸ್ಯರು ಯುವಕರನ್ನು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಫೋನ್ ರಿಂಗ್ ಆಗಿ ಕಟ್ ಆಗುತ್ತಿತ್ತು.
ಇದರಿಂದ ಭಯಗೊಂಡ ಕುಟುಂಬಸ್ಥರು ರಾತ್ರಿ ಭೋಪಾಲ್‌ಗೆ ತೆರಳಿದ್ದಾರೆ. ಅದೇ ಸಮಯದಲ್ಲಿ, ನಿಶಾಂಕ್‌ನನ್ನೂ ಪೊಲೀಸರು ಹುಡುಕುತ್ತಿದ್ದರು. ಬರ್ಖೇಡಾ ಬಳಿ ನಿಶಾಂಕ್ ಮೊಬೈಲ್ ಲೊಕೇಶನ್ ಪತ್ತೆಯಾಗಿತ್ತು. ಅಲ್ಲದೇ ಬರ್ಖೇಡಾ ರೈಲು ಹಳಿಯಲ್ಲಿ ಯುವಕನ ಶವ ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಬಳಿಕ ಯುವಕನ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ. ಪೊಲೀಸರು ಇಡೀ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ರೈಸನ್, ಭೋಪಾಲ್ ಮತ್ತು ನರ್ಮದಾಪುರಂ ಜಿಲ್ಲೆಗಳ ಪೊಲೀಸ್ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ ಮೂವರು.. ಓರ್ವ ಬಾಲಕಿ ದುರ್ಮರಣ
ಸಂಬಂಧಿಕರಿಂದ ಬಂದ ಮಾಹಿತಿ ಮೇರೆಗೆ ಸ್ಥಳದ ಸಮೀಪ ಮೃತ ನಿಶಾಂಕ್ ರಾಥೋಡ್ ಅವರ ಸ್ಕೂಟಿ ಮತ್ತು ಮೊಬೈಲ್ ಪತ್ತೆಯಾಗಿದೆ. ಇದರೊಂದಿಗೆ ರೈಸನ್ ಪೊಲೀಸರು ಸಂಪೂರ್ಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಭೋಪಾಲ್‌ನಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಯುವಕನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮೃತ ನಿಶಾಂಕ್ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದನ್ನು ಉದಯಪುರ ಘಟನೆಗೆ ಜೋಡಿಸಿ ಜನರು ಈ ಸಂಪೂರ್ಣ ವಿಷಯವನ್ನು ನೋಡುತ್ತಿದ್ದಾರೆ.
ಸಿಯೋನಿ ಮಾಳವಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಭಾನುವಾರ ರಾತ್ರಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಸಿಯೋನಿ ಮಾಳವಾ ತಲುಪಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.