ETV Bharat / bharat

ಬಿಎಸ್‌ಎಫ್‌ 57ನೇ ರೈಸಿಂಗ್‌ ಡೇ: ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತ ಎಂದು ಟ್ವೀಟ್‌ - BSF is manning km of the International Border

ಗಡಿ ಭದ್ರತಾ ಪಡೆ-ಬಿಎಸ್‌ಎಫ್‌ ಇಂದು 57ನೇ ವರ್ಷದ ಸಂಭ್ರಮ. ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಬಿಎಸ್‌ಎಫ್‌, ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತವಾಗಿ ಮುಂದುವರಿಯುತ್ತದೆ. ಇದು ಸೇವೆ ಮತ್ತು ರಕ್ಷಣೆಗೆ ಗೌರವವಾಗಿದೆ ಎಂದು ಟ್ವೀಟ್ ಮಾಡಿದೆ.

BSF turns 57, marks raising day today
ಬಿಎಸ್‌ಎಫ್‌ಗೆ 57ರ ಸಂಭ್ರಮ; ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತ ಎಂದು ಟ್ವೀಟ್‌
author img

By

Published : Dec 1, 2021, 6:10 PM IST

ಜಮ್ಮು-ಕಾಶ್ಮೀರ: ಗಡಿ ಭದ್ರತಾ ಪಡೆ (BSF) ಇಂದು 57ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಬಿಎಸ್‌ಎಫ್‌ ದೇಶದ ಮೊದಲ ಭದ್ರತಾ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತರ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಭಾರತದ ಗಡಿಗಳನ್ನು ರಕ್ಷಿಸುತ್ತಿದೆ.

2021ರ ಡಿಸೆಂಬರ್‌ 1 ರಂದು ಬಿಎಸ್‌ಎಫ್‌ ತನ್ನ 57ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತವಾಗಿ ಮುಂದುವರಿಯುತ್ತದೆ. ಇದು ಸೇವೆ ಮತ್ತು ರಕ್ಷಣೆಗೆ ಗೌರವವಾಗಿದೆ. ನಾವು ಶಾಶ್ವತವಾಗಿ ಉಳಿಸಿಕೊಳ್ಳುವ ಜೀವನ ಪರ್ಯಂತ ಕರ್ತವ್ಯ ಎಂದು ಬಿಎಸ್ಎಫ್ ಟ್ವೀಟ್ ಮಾಡಿದೆ.

ಕೇಂದ್ರಾಡಳಿತ ಪ್ರದೇಶವಾಗಿ ಇಬ್ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಎಸ್‌ಎಫ್‌ ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯ ಸುಮಾರು 192 ಕಿಮೀಟರ್‌ ಉದ್ದಕ್ಕೂ ರಕ್ಷಣೆಯ ನಿರ್ವಹಣೆ ಮಾಡುತ್ತಿದೆ. 2021ರಲ್ಲಿ ಡ್ರೋನ್ ಚಟುವಟಿಕೆಗಳು, ಸುರಂಗ ಮತ್ತು ಕಳ್ಳಸಾಗಣೆ ಪ್ರಯತ್ನಗಳಂತಹ ಅನೇಕ ಸವಾಲುಗಳನ್ನು ಬಿಎಸ್‌ಎಫ್‌ ಎದುರಿಸಿದ್ದು, ಜಮ್ಮು ವಿರೋಧಿಗಳ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಮೂವರು ಉಗ್ರರ ಹತ್ಯೆಗೈದ ಭದ್ರತಾ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.