ETV Bharat / bharat

ಪಾಕಿಸ್ತಾನಿ ಡ್ರೋನ್​ ಹೊಡೆದುರುಳಿಸಿದ ಬಿಎಸ್​ಎಫ್​; ಹೆರಾಯಿನ್ ಜಪ್ತಿ, ಓರ್ವನ ಬಂಧನ - ಪಂಜಾಬ್​ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ

ಭಾರತದೊಳಗೆ ಡ್ರೋನ್ ಮೂಲಕ ಹೆರಾಯಿನ್ ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಯತ್ನಗಳನ್ನು ಬಿಎಸ್​​ಎಫ್​​ ಯೋಧರು ವಿಫಲಗೊಳಿಸಿದ್ದಾರೆ.

BSF SHOT DOWN PAKISTANI DRONE
BSF SHOT DOWN PAKISTANI DRONE
author img

By

Published : May 28, 2023, 4:49 PM IST

ಚಂಡೀಗಢ : ಭಾರತದೊಳಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನಿ ಕಳ್ಳಸಾಗಣೆದಾರರ ಎರಡು ಪ್ರಯತ್ನಗಳನ್ನು ಪಂಜಾಬ್​ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ ವಿಫಲಗೊಳಿಸಿದೆ. ಅಮೃತಸರ ಸೆಕ್ಟರ್‌ನ ಎರಡು ಸ್ಥಳಗಳಲ್ಲಿ ಪಾಕಿಸ್ತಾನದ ಕಡೆಯಿಂದ ಡ್ರೋನ್ ಮೂಲಕ ಕಳುಹಿಸಲಾದ ಹೆರಾಯಿನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್​ಗಳಿಂದ ಸರಕು ಇಳಿಸಿಕೊಳ್ಳುವ ಭಾರತೀಯ ಕಳ್ಳಸಾಗಣೆದಾರನನ್ನು ಬಿಎಸ್​ಎಫ್​ ಬಂಧಿಸಿದೆ.

ಬಿಎಸ್ಎಫ್ ಪ್ರಕಾರ, ಬೆಟಾಲಿಯನ್ 22 ರ ಜವಾನರು ರಾತ್ರಿ ಸಮಯದಲ್ಲಿ ಅಟ್ಟಾರಿ ಗಡಿಗೆ ಸಮೀಪವಿರುವ ಪುಲ್ ಮೊರಾನ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಬೆಳಗ್ಗೆ 9.35ರ ಸುಮಾರಿಗೆ ಡ್ರೋನ್ ಸದ್ದು ಕೇಳಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಗುಂಡಿನ ದಾಳಿ ಆರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಡ್ರೋನ್‌ನ ಸದ್ದು ನಿಂತಿತು. ಆದರೆ ಸಮಯ ವ್ಯರ್ಥ ಮಾಡದೆ ಜವಾನರು ಪ್ರದೇಶವನ್ನು ಸೀಲ್ ಮಾಡಿ ಹುಡುಕಾಟ ಆರಂಭಿಸಿದ್ದರು. ಆಗ ಹತ್ತಿರದ ಜಮೀನಿನಲ್ಲಿ ಡಿಜೆಐ ಮ್ಯಾಟ್ರಿಸ್ ಆರ್‌ಟಿಕೆ 300 ಡ್ರೋನ್ ಪತ್ತೆಯಾಗಿದೆ. ಆದರೆ ಇದರೊಂದಿಗೆ ಯಾವುದೇ ಹೆರಾಯಿನ್​ ಸಿಕ್ಕಿರಲಿಲ್ಲ. ಹೀಗಾಗಿ ಯೋಧರು ರಾತ್ರಿ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು.

ನಂತರ ರಾತ್ರಿ ಸಮಯದಲ್ಲಿ ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವುದು ಬಿಎಸ್​ಎಫ್ ಯೋಧರ ಗಮನಕ್ಕೆ ಬಂದಿದೆ. ಬೆನ್ನಟ್ಟಿ ಆತನನ್ನು ಹಿಡಿದಾಗ ಆತನ ಬಳಿ ಹೆರಾಯಿನ್​ನ ಬಾಕ್ಸ್​ ಪತ್ತೆಯಾಗಿದೆ. ಆರೋಪಿ ಕಳ್ಳಸಾಗಾಣಿಕೆದಾರನನ್ನು ಕೂಡಲೇ ಯೋಧರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಸರಕುಗಳನ್ನು ಪರಿಶೀಲಿಸಿದಾಗ ಅದರ ಒಟ್ಟು ತೂಕ 3.5 ಕೆ.ಜಿ. ಆಗಿರುವುದು ಕಂಡು ಬಂದಿದೆ.

ಅಮೃತಸರ ವಲಯದಿಂದ ಮತ್ತೊಂದು ಕಡೆ ಕಳ್ಳಸಾಗಣೆಯ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಒಂದು ಭಾರತದ ಗಡಿಗೆ ಡ್ರೋನ್ ಬಂದಿತ್ತು. ಆ ಡ್ರೋನ್ ಹಿಂತಿರುಗಲು ಯಶಸ್ವಿಯಾಗಿತ್ತು. ಆದರೆ ಶೋಧದ ಸಮಯದಲ್ಲಿ ಡ್ರೋನ್‌ನಿಂದ ಬೀಳಿಸಲಾದ 2.2 ಕೆಜಿ ಹೆರಾಯಿನ್ ಅನ್ನು ಬಿಎಸ್​ಎಫ್​ ಯೋಧರು ವಶಪಡಿಸಿಕೊಂಡಿದ್ದಾರೆ.

ಗುಜರಾತ್​ನಲ್ಲಿ ಡ್ರಗ್ಸ್​ ಪತ್ತೆ: ಗಡಿ ಭದ್ರತಾ ಪಡೆ ಯೋಧರು ಶನಿವಾರ ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಳಿಯ ನಿರ್ಜನ ದ್ವೀಪದಿಂದ ಡ್ರಗ್ಸ್ ಇರಬಹುದು ಎಂದು ಶಂಕಿಸಲಾದ ಮೂರು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಎಸ್‌ಎಫ್‌ನ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, 1 ಕೆಜಿ ತೂಕದ ಪ್ಯಾಕೆಟ್‌ಗಳು ಜಖೌದಿಂದ ಸುಮಾರು 12 ಕಿಮೀ ದೂರದಲ್ಲಿರುವ ಲೂನಾ ಬೆಟ್‌ನ ದಡದಲ್ಲಿ ಪತ್ತೆಯಾಗಿವೆ.

ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಮೇಲೆ "36 ಕಾಫಿಪ್ಯಾಡ್ಸ್ ಮೈಲ್ಡ್" ಎಂದು ಮುದ್ರಿಸಲಾಗಿತ್ತು. ಅವು ಈ ಹಿಂದೆ ವಶಪಡಿಸಿಕೊಂಡ ಪ್ಯಾಕೆಟ್‌ಗಳಂತೆಯೇ ಇದ್ದು, ಇವುಗಳಲ್ಲಿ ಹೆರಾಯಿನ್ ಇರುವುದು ದೃಢಪಟ್ಟಿದೆ. ಕಳೆದ ಏಪ್ರಿಲ್‌ ತಿಂಗಳಿನಿಂದೀಚೆಗೆ 29 ಪ್ಯಾಕೆಟ್ ಚರಸ್, ಎರಡು ಪ್ಯಾಕೆಟ್ ಆಂಫೆಟಮೈನ್ ಮತ್ತು ನಾಲ್ಕು ಪ್ಯಾಕೆಟ್ ಹೆರಾಯಿನ್ ಅನ್ನು ಗುಜರಾತ್​ನ ಜಖೌ ಕರಾವಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಹೊಸ ಸಂಸತ್ ಭವನದ ಜೊತೆ ಶವಪೆಟ್ಟಿಯ ಚಿತ್ರ ಹೋಲಿಕೆ ಮಾಡಿದ ಆರ್​ಜೆಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.