ದೆಹಲಿ : ತೃಣಮೂಲ ಸಂಸದೆ ಮಾಹುವಾ ಮೊಯಿತ್ರಾ ಅವರ ನಿವಾಸದ ಹೊರಗೆ ಅವರ ರಕ್ಷಣಾ ದೃಷ್ಟಿಯಿಂದ ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಮಾಹುವಾ ಮೊಯಿತ್ರಾ ಸ್ವತಃ ಟ್ವೀಟ್ ಮಾಡಿರುವ ಹಿನ್ನೆಲೆ ಈ ಮಾಹಿತಿ ಬೆಳಕಿಗೆ ಬಂದಿದೆ.
ನನ್ನ ಮನೆಯ ಹೊರಗೆ 3 ಬಿಎಸ್ಎಫ್ ಯೋಧರು ನನ್ನ ರಕ್ಷಣೆಗಾಗಿ ಬರಾಖಂಬಾ ರಸ್ತೆ ಪೊಲೀಸ್ ಠಾಣೆ ಹೆಸರು ಹೇಳಿಕೊಂಡು ಬಂದಿದ್ದಾರೆ. ಇನ್ನೂ ಸಹ ನನ್ನ ಮನೆಯ ಹೊರಗಿದ್ದಾರೆ. ನಾನು ಭಾರತದ ಪ್ರಜೆಯಾಗಿದ್ದು, ಜನರು ನನ್ನನ್ನು ರಕ್ಷಿಸುತ್ತಾರೆ ಎಂದು ಮಾಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಪ್ರಮುಖ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಬಿಎಸ್ಎಫ್ ಯೋಧರನ್ನು ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಮತ್ತು ಗೃಹ ಸಚಿವರ ಕಚೇರಿಗೆ ಮನವಿ ಮಾಡಿದ್ದಾರೆ ಟಿಎಂಸಿ ಸಂಸದೆ.