ಮುಂಗೇರ್(ಬಿಹಾರ): ಇಲ್ಲಿನ ಬ್ಯೂಟಿ ಪಾರ್ಲರ್‌ನಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿದ್ದ ವಧುವಿನ ಮೇಲೆ ಭಗ್ನ ಪ್ರೇಮಿಯೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸ್ ಕಾನ್ಸ್ಟೇಬಲ್ ಅಮನ್ ಕುಮಾರ್ ಎಂದು ಗುರುತಿಸಲಾಗಿದೆ. ಗುಂಡು ತಗುಲಿ ಗಂಭೀರವಾಗಿ ಗಾಯಾಕೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಅಮನ್ ಕುಮಾರ್ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಂತೆ ಕೋಪಗೊಂಡಿದ್ದ. ಮೇ.21 ರಂದು ಮದುವೆ ನಡೆಯಬೇಕಿತ್ತು. ಅದಕ್ಕೂ ಯುವತಿ ಮೇಕಪ್ ಮಾಡಿಸಿಕೊಳ್ಳಲು ಕಸ್ತೂರ ಬಾ ವಾಟರ್ ಚೌಕ್‌ನಲ್ಲಿರುವ ಬ್ಯೂಟಿ ಪಾರ್ಲರ್‌ಗೆ ತೆರಳಿದ್ದರು. ಆರೋಪಿ ಯುವತಿಯೊಂದಿಗೆ ಬ್ಯೂಟಿ ಪಾರ್ಲರ್‌ಗೆ ಬಂದಿದ್ದ, ಯುವತಿಗೆ ಮೇಕಪ್ ಮಾಡುವಾಗ ಆರೋಪಿ ಆಕೆಯ ಹಿಂದೆ ನಿಂತಿದ್ದ. ಆತನನ್ನು ಆಕೆಯ ಕುಟುಂಬ ಸದಸ್ಯ ಎಂದು ನಾವು ಭಾವಿಸಿದ್ದೆವು ಎಂದು ಪಾರ್ಲರ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ ಆರೋಪಿ ಪಿಸ್ತೂಲ್ ತೆಗೆದು ಯುವತಿಗೆ ಕಡೆ ಗುರಿ ಇಟ್ಟಿದ್ದಾನೆ, ನಂತರ ಯುವತಿಯ ಭುಜಕ್ಕೆ ಗುಂಡು ಹಾರಿಸಿದ್ದಾನೆ ಎಂದು ಅವರು ಹೇಳಿದರು. ಯುವತಿ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಆರೋಪಿ ಗುಂಡು ಹಾರಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪಾರ್ಲರ್ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಬಳಿಯಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಚಾಕು ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು
ತನ್ನೊಂದಿಗೆ ಬರಲು ನಿರಾಕರಿಸಿದ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ: ತನ್ನೊಂದಿಗೆ ಬರುವುದಕ್ಕೆ ನಿರಾಕರಿಸಿದಕ್ಕಾಗಿ ಪಾಗಲ್ ಪ್ರೇಮಿನೊಬ್ಬ ವಿವಾಹಿತ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಈ ಘಟನೆ ನಿನ್ನೆ (ಭಾನುವಾರ) ಬಿಹಾರದ ಪಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ವ ಚಂಪಾರಣ್‌ನಲ್ಲಿ ನಡೆದಿತ್ತು. ಆ್ಯಸಿಡ್ ದಾಳಿಯಲ್ಲಿ ಮಹಿಳೆ, ಆಕೆಯ ಪತಿ ಮತ್ತು ಇಬ್ಬರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ರಾತ್ರಿ ಸಮಯದಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಮಲಗಿದ್ದಾಗ ಈ ಘಟನೆ ನಡೆದಿತ್ತು.
ಈ ಕುರಿತು ಪೊಲೀಸರ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳು ಮನೆಯ ಛಾವಣಿ ಮೇಲೆ ಹತ್ತಿ ಅವರು ಮಲಗಿರುವ ಸ್ಥಳಕ್ಕೆ ಸರಿಯಾಗಿ ಛಾವಣಿ ಸರಿಸಿದಿದ್ದಾರೆ. ಬಳಿಕ ಆ ಸಂದಿ ಮೂಲಕ ಆ್ಯಸಿಡ್ ಸುರಿದಿದ್ದು, ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಆ್ಯಸಿಡ್ ಅವರ ದೇಹವನ್ನು ಸುಡುವಾಗ ನೋವಿನಿಂದ ಕಿರುಚಿಗೊಂಡಿದ್ದಾರೆ. ಆದರೆ ಹೊರಗೆ ಬಾಗಿಲನ್ನು ಲಾಕ್ ಮಾಡಿರುವುದರಿಂದ ಕುಟುಂಬದ ಸಹಾಯಕ್ಕೆ ನೆರೆಹೊರೆಯವರು ತಕ್ಷಣ ಬರಲು ಸಾಧ್ಯವಾಗಿಲ್ಲ. ಬಳಿಕ ಬಾಗಿಲನ್ನು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮರುದಿನ ಇಂದು (ಸೋಮವಾರ) ಬೆಳಿಗ್ಗೆ ಚಿಕಿತ್ಸೆಗಾಗಿ ಅವರನ್ನು ಮೋತಿಹಾರಿಯಿಂದ ಮುಜಾಫರ್‌ಪುರ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿಸಿದ್ದರು.