ETV Bharat / bharat

ಜೀವಂತ ಹಾವುಗಳನ್ನು ಹಾರದಂತೆ ಬದಲಿಸಿಕೊಂಡ ವಧು, ವರ -ವಿಡಿಯೋ ವೈರಲ್​ - ಹಾವಿನ ಹಾರ ವಿಡಿಯೋ ವೈರಲ್​

ಹಾವುಗಳು ವಿಷಕಾರಿಯಾದರೂ ಅವುಗಳನ್ನು ಈ ರೀತಿಯಾಗಿಯೂ ಬಳಸಿಕೊಳ್ಳಬಹುದು ಎಂಬ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ಮದುವೆಯಲ್ಲಿ ವಧು-ವರರು ಹಾವನ್ನು ಹಾರದಂತೆ ಬದಲಿಸಿಕೊಂಡ ಭಯಾನಕ ವಿಡಿಯೋ ವೈರಲ್​ ಆಗಿದೆ.

bride-and-groom-exchange-snake-garlands
ವಿಡಿಯೋ ವೈರಲ್​
author img

By

Published : May 30, 2022, 9:21 PM IST

ಮದುವೆಯ ವೇಳೆ ವಧು ಮತ್ತು ವರ ಚೆಂದ ಚೆಂದದ ಹೂವಿನ ಹಾರಗಳನ್ನು ಕೊರಳಿನಲ್ಲಿ ಹಾಕಿಕೊಂಡು ಮೆರೆಯುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಂದು ನವಜೋಡಿ ಜೀವಂತ ಹಾವುಗಳನ್ನೇ ಹಾರವನ್ನಾಗಿ ಪರಸ್ಪರ ಬದಲಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

  • Bride and Groom exchange snake garlands during a marriage ceremony in rural Maharashtra. The snakes were let loose after the ceremony was over👇 pic.twitter.com/x89n0CXiHQ

    — Vasavi Narayanan (@VasaviNarayanan) August 9, 2019 " class="align-text-top noRightClick twitterSection" data=" ">

ಹಾವು ಕಂಡರೆ ಮಾರುದ್ದ ದೂರ ಓಡುವ ಹುಡುಗಿಯರ ಪೈಕಿ ಈ ವಧು ಸ್ವಲ್ಪ ಭಿನ್ನವೇ ಅನ್ನಬಹುದು. ವರ ದೊಡ್ಡ ಹೆಬ್ಬಾವನ್ನು ತಂದು ಕೊರಳಿಗೆ ಹಾಕಿದರೂ ಭಯಪಡದೇ ಹಾರವನ್ನಾಗಿ ಸ್ವೀಕರಿಸಿದ್ದಾಳೆ. ಇದಾದ ಬಳಿಕ ವಧು ಕೂಡ ನಾಗರಹಾವನ್ನು ವರನ ಕೊರಳಿಗೆ ಹಾಕಿದ್ದಾಳೆ. ವಧು- ವರರಿಬ್ಬರೂ ಯಾವ ಭಯವಿಲ್ಲದೇ, ಹಾವನ್ನು ಹಾರದಂತೆ ಬದಲಿಸಿಕೊಂಡಿದ್ದನ್ನು ನೂರಾರು ಜನರು ಸುತ್ತಲೂ ನಿಂತುಕೊಂಡು ನೋಡಿದ್ದಾರೆ.

ವಿಡಿಯೋದ ಅಸಲಿಯತ್ತೇನು?: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ದೂರದ ಹಳ್ಳಿಯಲ್ಲಿ ನಡೆದ ವಿವಾಹದ್ದಾಗಿದೆ. ಇದು 2010 ರಲ್ಲಿ ನಡೆದ ಘಟನೆಯಾಗಿದೆ. 2019ರ ಆಗಸ್ಟ್​ 9ರಂದು ವಾಸವಿ ನಾರಾಯಣನ್​ ಎಂಬುವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು. ಹಾವನ್ನು ಹಾರವಾಗಿ ಬದಲಿಸಿಕೊಂಡು ವಿವಾಹವಾದ ವಧು-ವರರು ಅರಣ್ಯ ಇಲಾಖೆಯ ನೌಕರರಾಗಿದ್ದಾರೆ. ಮದುವೆಯಲ್ಲಿ ಹಾವುಗಳನ್ನು ಬದಲಿಸಿಕೊಂಡ ಬಳಿಕ ಅವುಗಳನ್ನು ಮತ್ತೆ ಕಾಡಿಗೆ ಬಿಡಲಾಗಿದೆ.

ಓದಿ: ನೆಹರೂ ಅವರಿಂದ ಹಿಡಿದು ಮೋದಿಯವರೆಗೆ : ಶಿಮ್ಲಾದ ಇಂಡಿಯನ್ ಕಾಫಿ ಹೌಸ್​ಗಿದೆ ಭವ್ಯ ಇತಿಹಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.