ಪುರಿ(ಒಡಿಶಾ): ತಾಯಿ ಸಾವನ್ನಪ್ಪಿದಾಗ ಗಂಡು ಮಕ್ಕಳಂತೆ ಮುಂದೆ ನಿಂತು ಹೆಣ್ಣು ಮಕ್ಕಳೇ ಅಂತಿಮ ವಿಧಿ-ವಿಧಾನಗಳನ್ನು ನಡೆಸಿಕೊಟ್ಟಿರುವ ಘಟನೆ ಒಡಿಶಾದಲ್ಲಿ ನಡೆಯಿತು.
ತಾಯಿಯ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತು ನಾಲ್ಕು ಕಿಲೋ ಮೀಟರ್ ನಡೆದೇ ಸಾಗಿರುವ ಹೆಣ್ಣು ಮಕ್ಕಳು ಅಂತಿಮ ವಿಧಿವಿಧಾನ ಪೂರೈಸಿದರು. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವರು ಅಂತ್ಯಕ್ರಿಯೆಗೆ ಆಗಮಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನೋಡಿ: ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುದ್ದಿದ ಜಲ್ಲಿಕಟ್ಟು ಗೂಳಿ
ಮಂಗಳಘಟ್ಟ ನಿವಾಸಿ ಜಾತಿ ನಾಯಕ್ ನಿಧನರಾಗಿದ್ದರು. ತನ್ನಿಬ್ಬರು ಗಂಡು ಮಕ್ಕಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ನಾಲ್ವರು ಹೆಣ್ಣು ಮಕ್ಕಳೇ ಹೆತ್ತಮ್ಮನ ಕಳೇಬರ ಹೊತ್ತು ಸಾಗಿ, ಅಂತ್ಯಕ್ರಿಯೆ ಮುಗಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ದರ್ಬಾರ್: ಕೋಚ್ ದ್ರಾವಿಡ್ ಮಾರ್ಗದರ್ಶನದಲ್ಲಿ ನಾಯಕತ್ವ ಹೊಣೆ ವಹಿಸಿಕೊಂಡ ರಾಹುಲ್
ಆಸ್ತಿಗಾಗಿ ಹೊಡೆದಾಡುವ ಗಂಡು ಮಕ್ಕಳಿರುವ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಜೀವನದ ಸಂಧ್ಯಾಕಾಲದಲ್ಲಿ ಹೆತ್ತವರನ್ನು ಸಲಹಿ, ಅವರು ಸಾವನ್ನಪ್ಪಿದಾಗ ಅಂತಿಮ ವಿಧಿಗಳನ್ನು ನಡೆಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಅನೇಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.