ETV Bharat / bharat

ಪ್ರೇಯಸಿ ಜೊತೆ ಜಗಳವಾಡಿ 'ಪ್ರೀತಿ' ಕೊಂದ ಪ್ರಿಯಕರ - ಲವರ್​ ಮೇಲೆ ಯುವಕನಿಂದ ಹಲ್ಲೆ

ಮಕ್ಕಳಿಗೆ ನಮ್ಮಂತೆ ಕಷ್ಟವಾಗದಿರಲಿ.. ಎಂದು ಬಯಸುವ ತಂದೆ-ತಾಯಿ ಜೀವನದ ಸಂಧ್ಯಾಕಾಲದಲ್ಲೂ ಬೆವರುಹರಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸಲು ಪರದಾಟ ಅನುಭವಿಸುವ ಅನೇಕ ನಿದರ್ಶನಗಳಿವೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂದು ಪಣತೊಟ್ಟು ಶಾಲೆಯ ಹೊಸ್ತಿಲು ತುಳಿಯುವ ಮಕ್ಕಳು ಎಳೆಯ ವಯಸ್ಸಿನಲ್ಲೇ ಅಡ್ಡದಾರಿ ಹಿಡಿಯುತ್ತಾರೆ. ಪ್ರೀತಿ-ಪ್ರೇಮ ಅಂತ ಬದುಕನ್ನೇ ಹಾಳು ಮಾಡಿಕೊಳ್ತಾರೆ. ಇವತ್ತು ತಮಿಳುನಾಡಿನದಲ್ಲಿ ನಡೆದ ದುರ್ಘಟನೆ ಇದಕ್ಕೊಂದು ಉದಾಹರಣೆ.

Boyfriend stabbed his girlfriend
Boyfriend stabbed his girlfriend
author img

By

Published : Sep 23, 2021, 8:09 PM IST

Updated : Sep 23, 2021, 8:33 PM IST

ಚೆನ್ನೈ: ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಬುದ್ದಿಯನ್ನು ಕೋಪದ ಕೈಗೆ ಕೊಟ್ಟಿದ್ದಾನೆ. ಪ್ರಿಯತಮೆಗೆ ಚಾಕುವಿನಿಂದ ಇರಿದು, ತದನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ರಾಧಾನಗರದಲ್ಲಿ ನಡೆದಿದೆ.

Boyfriend stabbed his girlfriend
ಆತ್ಮಹತ್ಯೆಗೆ ಯತ್ನಿಸಿದ ಪಾಗಲ್​ ಪ್ರೇಮಿ

ಸರ್ಕಾರಿ ಬಸ್​​ ಡ್ರೈವರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಮತಿಯಜಗನ್ ಅವರ ಮಗಳು ಶ್ವೇತಾ (25) ಖಾಸಗಿ ಕಾಲೇಜಿ​ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಶ್ವೇತಾ ಹಾಗೂ ಆಕೆಯ ಬಾಯ್​ಫ್ರೆಂಡ್​​​ ರಾಮ​ಚಂದ್ರನ್​​ ನಡುವೆ ಕಾಲೇಜು​ ಪಕ್ಕದಲ್ಲಿನ ರೈಲ್ವೆ ಸ್ಟೇಷನ್​ ಬಳಿ ಜಗಳವಾಗಿದೆ. ಈ ವೇಳೆ ಆಕ್ರೋಶಗೊಂಡಿರುವ ರಾಮ್​ಚಂದ್ರನ್​​ ಚಾಕುವಿನಿಂದ ಶ್ವೇತಾ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ತದನಂತರ ತನ್ನ ಕುತ್ತಿಗೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Boyfriend stabbed his girlfriend
ಸಾವನ್ನಪ್ಪಿದ ಯುವತಿ

ಇದನ್ನೂ ಓದಿ: ಫೇಸ್​​ಬುಕ್ ಯುವತಿಯಿಂದ ಪ್ರೇಮದ ನಾಟಕ: ಯುವಕನಿಗೆ 11 ಲಕ್ಷ ರೂ. ಪಂಗನಾಮ

ಘಟನೆ ನೋಡಿರುವ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶ್ವೇತಾ ಸಾವನ್ನಪ್ಪಿದ್ದು, ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆಂದು ವರದಿಯಾಗಿದೆ.

Last Updated : Sep 23, 2021, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.