ETV Bharat / bharat

ಮೂರು ಆ್ಯಪ್ ಅಭಿವೃದ್ದಿಪಡಿಸಿ ಗಿನ್ನೆಸ್‌ ದಾಖಲೆ ಬರೆದ 12 ವರ್ಷದ ಬಾಲಕ! - Etv Bharat Kannada

ಕೋವಿಡ್​ ಸಂದರ್ಭದಲ್ಲಿ ಆನ್​ಲೈನ್​ ಮುಖಾಂತರ ಕೋಡಿಂಗ್​ ಕಲಿತು ಮೂರು ಆ್ಯಪ್​ಗಳನ್ನು ಅಭಿವೃದ್ಧಿಪಡಿಸಿದ 12 ವರ್ಷದ ಬಾಲಕನ ಹೆಸರು ಇದೀಗ ಗಿನ್ನಿಸ್​ ದಾಖಲೆ ಪುಸ್ತಕದ ಪುಟ ಸೇರಿದೆ.

Haryana: 12-yr-old boy creates 3 apps, enters Guinness Book of World Records
ಕಾರ್ತಿಕೇಯ
author img

By

Published : Aug 9, 2022, 10:26 PM IST

ಚಂಡಿಗಢ: ಹರಿಯಾಣ ಮೂಲದ 12 ಹರೆಯದ ಬಾಲಕನೋರ್ವ ಮೂರು ಸ್ಮಾರ್ಟ್​ಫೋನ್​ ಆ್ಯಪ್​ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗಿನ್ನಿಸ್​ ದಾಖಲೆ ಪುಸ್ತಕದಲ್ಲಿ 'ಯಂಗೆಸ್ಟ್​ ಆ್ಯಪ್​ ಡೆವಲಪರ್​' ಎಂದು ಹೆಸರು ಗಳಿಸಿದ್ದಾನೆ. ಕಾರ್ತಿಕೇಯ ಆ್ಯಪ್​ಗಳನ್ನು ಅಭಿವೃದ್ದಿಪಡಿಸಿದ ಬಾಲಕ. ಜವಾಹರ್​ ನವೋದಯ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ.

ಕೋವಿಡ್​ ಸಂದರ್ಭದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ನೀಡಿ ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ಮುಂದುವರೆಸಲು ಸರ್ಕಾರ ಸೂಚಿಸಿತ್ತು. ಕಾರ್ತಿಕೇಯನ ತಂದೆ ತನ್ನ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಉಂಟಾಗದಂತೆ 10,000 ರೂಪಾಯಿ ಬೆಲೆಯ ಮೊಬೈಲ್​ ಫೋನ್ ಖರೀದಿಸಿ ತಂದುಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಈ ಮೊಬೈಲ್​ ಫೋನ್ ತಾಂತ್ರಿಕ ದೋಷದಿಂದ​ ಕೆಲಸ ಸ್ಥಗಿತಗೊಳಿಸಿತ್ತು. ಇದರಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ, ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಮೊಬೈಲ್​ನಲ್ಲಿ ಕಂಡಂತಹ ದೋಷಗಳಿಗಾಗಿ ಪೋಷಕರ ಮುಖೇನ ಯೂಟ್ಯೂಬ್‌ನಲ್ಲಿ ಹುಡುಗ ಮಾಹಿತಿ ಪಡೆದು ಮೊಬೈಲ್ ಸರಿಪಡಿಸಿದ್ದಾನೆ.

ಇದು ಬಾಲಕನಲ್ಲಿ ಕ್ರಮೇಣ ಮೊಬೈಲ್​ ಮತ್ತು ಕೋಡಿಂಗ್​ ಬಗ್ಗೆ ಆಸಕ್ತಿ ಹುಟ್ಟಿಸಿದೆ. ನಂತರದ ದಿನಗಳಲ್ಲಿ ಆನ್​ಲೈನ್​ ಮುಖಾಂತರ ಕೋಡಿಂಗ್​ ಅಭ್ಯಾಸವನ್ನೂ ಪ್ರಾರಂಭಿಸುತ್ತಾನೆ. ಇದೆಲ್ಲದರ ಪರಿಣಾಮ ಎಂಬಂತೆ ಮುಂದಿನ ದಿನಗಳಲ್ಲಿ ಮೂರು ಆ್ಯಪ್​ಗಳನ್ನು ತಯಾರಿಸಿಯೇ ಬಿಟ್ಟ. ಒಂದು ಸಾಮಾನ್ಯ ಜ್ಞಾನಕ್ಕೆ, ಮತ್ತೊಂದು ಕೋಡಿಂಗ್​ ಹಾಗೂ ಗ್ರಾಫಿಕ್ಸ್​ಗೆ, ಮೂರನೆಯದು ಡಿಜಿಟಲ್​ ಶಿಕ್ಷಣಕ್ಕಾಗಿ ಹೀಗೆ ಒಟ್ಟು ಮೂರು ಆ್ಯಪ್​ಗಳನ್ನು ಅಭಿವೃದ್ದಿಪಡಿಸಿದ್ದಾನೆ. ಪ್ರಸುತ ಕಾರ್ತಿಕೇಯ ಈ ಆ್ಯಪ್​ಗಳ ಮುಖಾಂತರ ಒಟ್ಟು 45,000 ಜನರಿಗೆ ಉಚಿತ ತರಬೇತಿಯನ್ನೂ ನೀಡುತ್ತಿದ್ದಾನೆ.! ಇದರ ಹೊರತಾಗಿಯೂ ವಿದ್ಯಾಭ್ಯಾಸದಲ್ಲೂ ಮುಂದಿದ್ದಾನೆ.

ಪ್ರತಿಷ್ಠಿತ ಹಾರ್ವರ್ಡ್​ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಕಾರ್ತಿಕೇಯ ತೇರ್ಗಡೆಗೊಂಡು ವಿದ್ಯಾರ್ಥಿವೇತನ ಪಡೆದಿದ್ದಾನೆ. ಪ್ರಸ್ತುತ ಬಿ.ಎಸ್ಸಿಯಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಶಿಕ್ಷಣ ಮುಂದುವರೆಸಿದ್ದಾನೆ. ಪುಟ್ಟ ಹುಡುಗನ ಸಾಧನೆ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಗಮನ ಸೆಳೆದಿದ್ದು,​ ಕಾರ್ತಿಕೇಯನಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಕಾರ್ತಿಕೇಯ, "ನನಗೆ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ತುಂಬಾ ಇಷ್ಟ. ಅವರಿಂದ ಸ್ಫೂರ್ತಿ ಪಡೆದು ಈ ಸಾಧನೆ ಮಾಡಿದ್ದೇನೆ. ಭವಿಷ್ಯದಲ್ಲಿ ಭಾರತಕ್ಕೆ ಸೇವೆ ಸಲ್ಲಿಸುವುದು ನನ್ನ ಮಹದಾಸೆ" ಎಂದು ಹೇಳಿದ್ದಾನೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​ನಲ್ಲಿ ಶೀಘ್ರವೇ 3 ಹೊಸ ಫೀಚರ್: ಗ್ರೂಪ್​ಗಳಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್​​ ಆಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.