ಮುಂಬೈ: ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿರುವ ಇಂದು ನಮಗೆ ಯಾವುದೇ ಮಾಹಿತಿ ಕ್ಷಣಮಾತ್ರದಲ್ಲಿ ಲಭ್ಯವಾಗುತ್ತಿದೆ. ಈ ತಂತ್ರಜ್ಞಾನ ಇಂದು ಆಡಳಿತವನ್ನು ಕೂಡ ಸುಗಮ ಮಾಡಿರುವುದು ಸುಳ್ಳಲ್ಲ. ಇಂತಹ ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಾಂಬೆ ಹೈ ಕೋರ್ಟ್ ಮುಂದಾಗಿದೆ. ಇದಕ್ಕಾಗಿ ಇಂದಿನಿಂದ ಬಾಂಬೆ ಹೈಕೋರ್ಟ್ ಟೆಲಿಗ್ರಾಂ ಚಾನಲ್ ಅನ್ನು ಶುರು ಮಾಡಿದೆ. ಇದರ ಮೂಲಕ ಸರಳ ಮತ್ತು ಸುಲಭವಾಗಿ ಅರ್ಜಿಗಳ ಕುರಿತು ತಿಳಿಯಲು ಸಹಾಯ ಆಗಲಿದೆ. ಈ ಟೆಲಿಗ್ರಾಂ ಚಾನಲ್ ಮೂಲಕ ಪ್ರಕರಣಗಳ ಮಾಹಿತಿ ವಾದಿ ಮತ್ತು ಪ್ರತಿವಾದಿಗಳಿಗೆ ಲಭ್ಯವಾಗಲಿದ್ದು, ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.
ಬಾಂಬೆ ಹೈಕೋರ್ಟ್ ವೆಬ್ಸೈಟ್ ಮೂಲಕ ಇದೀಗ ನ್ಯಾಯಾಲಯದ ಪ್ರಕರಣಗಳ ಕುರಿತು ಮಾಹಿತಿ ಸಿಗಲಿದೆ. ಇಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ತಮ್ಮ ಕೇಸ್ ಅನ್ನು ನ್ಯಾಯಾಲಯ ಇಂದು ಕೈ ಗೊಳ್ಳಲಿದೆಯಾ ಅಥವಾ ನಾಳೆ ಕೈಗೊಳ್ಳಲಿದೆಯಾ ಎಂಬ ಮಾಹಿತಿಯನ್ನು ಪಡೆಯುತ್ತಿದ್ದರು. ವೆಬ್ಸೈಟ್ನಲ್ಲಿ ಈ ಕುರಿತು ಮಾಹಿತಿ ಪಡೆಯುವುದು ಸಾಮಾನ್ಯ ಜನರಿಗೆ ಮತ್ತು ಸದಸ್ಯೇತರರಿಗೆ ಕಷ್ಟವಾಗಿತ್ತು. ಇದು ವಕೀಲರಿಗೆ ಮತ್ತು ಇದರ ಬಗ್ಗೆ ಮಾಹಿತಿ ಇದ್ದವರಿಗೆ ಮಾತ್ರ ಸುಲಭವಾಗಿ ಸಿಗುತ್ತಿತ್ತು. ಈ ವಿಷಯ ಮನಗಂಡು ಜನರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಈ ಹೆಜ್ಜೆಯನ್ನು ಇಡಲಾಗಿದೆ.
ಟೆಲಿಗ್ರಾಂನಲ್ಲಿ ಮಾಹಿತಿ: ಬಾಂಬೆ ಹೈಕೋರ್ಟ್ ಇದೀಗ ತಮ್ಮದೇ ಅಧಿಕೃತ ಟೆಲಿಗ್ರಾಂ ಚಾನಲ್ ಅನ್ನು ನವೆಂಬರ್ 9 ರಿಂದ ಆರಂಭಿಸಿದೆ. ಈ ಮೂಲಕ ಮಾಹಿತಿಗಳು ಸಲುಭವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಲ್ಲಿ ಕೇಸ್ನ ಮಾಹಿತಿ, ಸೂಚನಾ ಶೀಟ್, ಆದೇಶ ಪ್ರತಿ, ತೀರ್ಪಿನ ಪ್ರತಿಯನ್ನು ಪಡೆಯಬಹುದಾಗಿದೆ.
ದೊಡ್ಡ ಫೈಲ್ಗಳು ಕೂಡ ಸುಲಭವಾಗಿ ಲಭ್ಯ: ಟೆಲಿಗ್ರಾಂ ಚಾನಲ್ನಲ್ಲಿ ಸಲಭವಾಗಿ 2.5 ಎಂಬಿಯ ಪಿಡಿಎಫ್ ಫೈಲ್ ಅಥವಾ ವರ್ಡ್ ಫೈನ್ ಅನ್ನು ಕಳುಹಿಸಬಹುದಾಗಿದೆ. ಇದನ್ನು ಡೌನ್ಲೋಡ್ ಮಾಡುವುದು ಕೂಡ ಸುಲಭವಾಗಿದೆ. ಆದರೆ ದೊಡ್ಡ ಗಾತ್ರದ ಫೈಲ್ಗಳು ಜಿಮೇಲ್ ಅಥವಾ ವಾಟ್ಸ್ಅಪ್ ನಲ್ಲಿ ಬೆಂಬಲಿಸುವುದಿಲ್ಲ. ಆದರೆ, ಇಂತಹ ಫೈಲ್ಗಳ ಪಿಡಿಎಫ್ ಅನ್ನು ಇದೀಗ ಟೆಲಿಗ್ರಾಂ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಹೈಕೋರ್ಟ್ ವಕೀಲರಾಗಿರುವ ವಿನೋದ್ ಸತ್ಪುಟ್, ಹೈಕೋರ್ಟ್ ವೆಬ್ಸೈಟ್ನಲ್ಲಿ ವಕೀಲರು ಹೊರತಾಗಿ ಸಾಮಾನ್ಯ ಜನರು ಮಾಹಿತಿಗಳನ್ನು ಹುಡುಕುವುದು ಮತ್ತು ಓದುವುದು ಕಷ್ಟ ಸಾಧ್ಯ. ಪ್ರಕರಣ ಸಂಬಂಧ ವಾದಿಗಳು ಮತ್ತು ಪ್ರತಿವಾದಿಗಳು ಇದೀಗ ಟೆಲಿಗ್ರಾಂ ಮೂಲಕ ಸಾಮಾನ್ಯ ಸಾರ್ವನಿಕ ಪ್ರಕರಣದ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಂಬೈಯಲ್ಲೂ ಹೆಚ್ಚುತ್ತಿದೆ ವಾಯು ಮಾಲಿನ್ಯ; ಜೆ.ಜೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರತ್ಯೇಕ ಒಪಿಡಿ