ಮುುಂಬೈ: ಬಾಂಬೆ ಹೈಕೋರ್ಟ್ 20 ತಿಂಗಳ ಬಳಿಕ ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದೆ. ಸಂತ್ರಸ್ತೆ ವಿವಾಹೇತರ ಸಂಬಂಧ ಹೊಂದಿರುವುದು ಆಕೆಯ ಪತಿಗೆ ತಿಳಿದ ಕಾರಣ, ಈ ಆರೋಪ ಹೊರಿಸಲಾಗಿದೆ ಎಂದು ಹೈಕೋರ್ಟ್ಗೆ ತಿಳಿಸಿದ್ದಾಳೆ. ಹೀಗಾಗಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿ, ಬಿಡುಗಡೆ ಮಾಡಿದೆ.
ಏನಿದು ಪ್ರಕರಣ ?: ಸಂತ್ರಸ್ತೆ ವಿವಾಹಿತ ಮಹಿಳೆಯಾಗಿದ್ದು, ಜನವರಿ 27, 2021 ರಂದು ಕಂಡಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿ ಅಜಿತ್ ದಾಸನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವರಿ 20 ರಂದು ಸಂಜೆ ಆರೋಪಿಯ ಬೈಕ್‌ನಲ್ಲಿ ತನ್ನ ಗಂಡನ ಅಂಗಡಿಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆ ದೂರು ನೀಡಿದ್ದರು.
ಸಂತ್ರಸ್ತೆ ಮನೆಗೆ ಹೋಗುವಾಗ ಆರೋಪಿಯು ಬೈಕ್ನನ್ನು ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಬಲವಂತದಿಂದ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು. ಮನೆಗೆ ತಲುಪಿದಾಗ, ಆಕೆಯ ಪತಿ ತಡವಾದ ಬಗ್ಗೆ ವಿಚಾರಿಸಿದಾಗ, ಆರೋಪಿ ಅಜಿತ್ ದಾಸ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಾಳೆ. ಬಳಿಕ ಜನವರಿ 28 ರಂದು ಆರೋಪಿಯನ್ನು ಬಂಧಿಸಲಾಯಿತು.
ಇದನ್ನೂ ಓದಿ: Kissing ಅಸ್ವಾಭಾವಿಕ ಲೈಂಗಿಕತೆಯಲ್ಲ: ಪೋಕ್ಸೋ ಕೇಸ್ ಆರೋಪಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್
ಸಂತ್ರಸ್ತೆ ಕೋರ್ಟ್ನಲ್ಲಿ ಹೇಳಿದ್ದೇನು?: ಸಂತ್ರಸ್ತೆ ಪತಿಗೆ ಆಕೆಯ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಅಲ್ಲದೇ ಆತ ಈ ಬಗ್ಗೆ ಪ್ರಶ್ನಿಸಿದ್ದಾನೆ. ಹಾಗಾಗಿ ಸಂತ್ರಸ್ತೆ ತನ್ನ ವೈವಾಹಿಕ ಜೀವನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಸುಳ್ಳು ಹೇಳಿರುವುದಾಗಿ, ಆಕೆ ಕೋರ್ಟ್ನಲ್ಲಿ ಹೇಳಿದ್ದಾಳೆ. ವಾದ ವಿವಾದವನ್ನು ಆಲಿಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಪೀಠ ಬಳಿಕ ಆರೋಪಿಗೆ ಜಾಮೀನು ನೀಡಿದೆ.