ETV Bharat / bharat

ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ - ಬಾಂಬೆ ಹೈಕೋರ್ಟ್

ಜಾನ್ಸನ್ ಅಂಡ್​ ಜಾನ್ಸನ್ ಬೇಬಿ ಟಾಲ್ಕಂ ಪೌಡರ್‌ ಬಗ್ಗೆ ಹೊಸ ಪರೀಕ್ಷೆಯನ್ನು ನಡೆಸಲು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್​ ಆದೇಶಿಸಿದೆ.

bombay-hc-suggests-retesting-of-johnson-and-johnson-baby-talcum-powder
ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ
author img

By

Published : Jan 7, 2023, 8:34 PM IST

ಮುಂಬೈ (ಮಹಾರಾಷ್ಟ್ರ): ಮಕ್ಕಳ ತ್ವಚೆಗೆ ಬಳಸುವ ಜನಪ್ರಿಯ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಟಾಲ್ಕಂ ಪೌಡರ್‌ ಕುರಿತು ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್​ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಈ ಬೇಬಿ ಪೌಡರ್​ ಬಳಕೆ ಬಗ್ಗೆ ಹೊಸ ಪರೀಕ್ಷೆ ಕೈಗೊಳ್ಳಲು ಮತ್ತು ಪ್ರತಿಕೂಲ ಫಲಿತಾಂಶಗಳಿದ್ದಲ್ಲಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಅನುಮತಿ ನೀಡಿದೆ.

ಜಾನ್ಸನ್​ ಅಂಡ್​ ಜಾನ್ಸನ್​ ಬೇಬಿ ಪೌಡರ್ ​ಅನ್ನು ಮಕ್ಕಳ ತ್ವಚೆಗೆ ಮುದ ನೀಡಲಿ ಎಂದು ಬಳಕೆ ಮಾಡಲಾಗುತ್ತಿದೆ. ಆದರೆ, ಇದರ ಮಾದರಿ ಪರೀಕ್ಷೆಗಳು ಮೊದಲ ಬಾರಿಗೆ ಉತ್ಪನ್ನವು ಗುಣಮಟ್ಟವನ್ನು ಹೊಂದಿಲ್ಲ ಎಂಬುವುದನ್ನು ಬಹಿರಂಗ ಪಡಿಸಿತ್ತು. ಅಲ್ಲದೇ, ​ಈ ಪೌಡರ್​ ನವಜಾತ ಶಿಶುಗಳ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಲು ಬಳಸುವ ಪ್ರಕ್ರಿಯೆಯಿಂದಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಬೇಬಿ ಪೌಡರ್ ವಿವಾದಕ್ಕೆ ಸಿಲುಕಿತ್ತು.

ಹೊಸ ಪರೀಕ್ಷೆ ನಡೆಸುವಂತೆ ಕೋರ್ಟ್​ ಸೂಚನೆ: ಈ ಕಂಪನಿಯ ಪೌಡರ್​ ಅನ್ನು ಪ್ರಯೋಗಾಲಯಲ್ಲಿ ನಡೆಸಿದ ಪರೀಕ್ಷೆಯ ವೇಳೆ ಪಿಎಚ್​ ಮಾನದಂಡ ನಿಗದಿಗಿಂತಲೂ ಕಡಿಮೆ ಇರುವುದು ಕಂಡು ಬಂದಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ ಈ ವರದಿ ನೀಡಿದೆ ಎಂದು ಹೇಳಿ ಪೌಡರ್​ನ ಉತ್ಪಾದನೆಗೆ ನೀಡಿದ ಪರವಾನಗಿಯನ್ನು ಈ ಹಿಂದೆ ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಇಲಾಖೆ ರದ್ದು ಮಾಡಿತ್ತು.

ಆದರೆ, ತನ್ನ ಪೌಡರ್​​ ಕುರಿತು ಕೇಳಿ ಬಂದಿದ್ದ ಆರೋಪಗಳನ್ನು ಕಂಪನಿ ತಳ್ಳಿ ಹಾಕಿತ್ತು. ಅಲ್ಲದೇ, ಸಂಗ್ರಹವಾದ ಪೌಡರ್ ದಾಸ್ತಾನು ಮಾರಾಟ ಮಾಡಲು ಅನುಮತಿ ನೀಡುವಂತೆ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಇಂದು ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ಜಿಎಸ್ ಪಟೇಲ್ ಮತ್ತು ಪಿಡಿ ನಾಯಕ್ ಅವರಿದ್ದ ಪೀಠವು ಪೌಡರ್​ಅನ್ನು ಹೊಸ ಪರೀಕ್ಷೆಯನ್ನು ಕೈಗೊಳ್ಳುವಂತೆ ಆದೇಶಿಸಿದೆ.

ವಿತರಣೆ-ಮಾರಾಟದ ಮೇಲಿನ ನಿಷೇಧ ಎತ್ತಿ ಹಿಡಿದ ಪೀಠ: ಇದೇ ವೇಳೆ ಮಾರಾಟ ಮತ್ತು ವಿತರಣೆಯ ಮೇಲಿನ ನಿಷೇಧವನ್ನು ನ್ಯಾಯ ಪೀಠ ಎತ್ತಿ ಹಿಡಿದಿದ್ದು, ಬೇಬಿ ಪೌಡರ್ ದಾಸ್ತಾನು ಮಾರಾಟ ಮಾಡಲು ಅನುಮತಿಸಬೇಕೆಂಬ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಮನವಿಯನ್ನೂ ತಿರಸ್ಕರಿಸಿದೆ. ನಾವು 2022ರಲ್ಲಿ ಜಾರಿಯಾದ ನೋಟಿಸ್​ ಮತ್ತು 2019ರಲ್ಲಿ ನಡೆಸಿದ ಪರೀಕ್ಷೆಯ ಆಧಾರದ ಮೇಲೆ ಈ ತೀರ್ಪು ನೀಡುತ್ತಿದ್ದೇವೆ ಎಂದು ನ್ಯಾಯ ಪೀಠ ತಿಳಿಸಿವೆ.

ಪೌಡರ್​ನ ಗುಣಮಟ್ಟದ ವಾಸ್ತವಿಕ ಪರಿಸ್ಥಿತಿ ಏನೆಂದು ಗೊತ್ತಿಲ್ಲ. ಜೊತೆಗೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೊಸ ಪರಿಸ್ಥಿತಿ ಬಗ್ಗೆಯೂ ತಿಳಿದಿಲ್ಲ ಎಂಬುವುದನ್ನು ನ್ಯಾಯ ಪೀಠವು ಗಮನಿಸಿದೆ. ಆದ್ದರಿಂದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಮಾದರಿಗಳ ಹೊಸ ಪರೀಕ್ಷೆಯನ್ನು ನಡೆಸಲು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ಫಲಿತಾಂಶ ಪ್ರತಿಕೂಲವಾಗಿದ್ದರೆ ಕ್ರಮ: ಅಷ್ಟೇ ಅಲ್ಲ, ಮಾದರಿಗಳ ಪರೀಕ್ಷೆಗಳ ಫಲಿತಾಂಶಗಳು ಪ್ರತಿಕೂಲವಾಗಿದ್ದರೆ ಕಂಪನಿಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದೂ ಒತ್ತಿಹೇಳಲಾಗಿದೆ ಎಂದು ಪೀಠ ನ್ಯಾಯ ತನ್ನ ಆದೇಶದಲ್ಲಿ ತಿಳಿಸಿದೆ. ಜಾನ್ಸನ್ ಅಂಡ್ ಜಾನ್ಸನ್​ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿ ಕದಂ, ಸಂಗ್ರಹವಾದ ದಾಸ್ತಾನು ಮಾರಾಟಕ್ಕೆ ಅನುಮತಿ ನೀಡುವಂತೆ ನ್ಯಾಯ ಪೀಠಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಿರಸ್ಕರಿಸಲಾಯಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ನಿಗದಿಪಡಿಲಾಗಿದೆ.

ಇದನ್ನೂ ಓದಿ: ಮಕ್ಕಳ ತ್ವಚೆಗೆ ಹಾನಿ.. ಜಾನ್ಸನ್​ ಅಂಡ್​ ಜಾನ್ಸನ್​ ಪೌಡರ್​ ಉತ್ಪಾದನೆ ರದ್ದಿಗೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.