ತರನ್-ತರನ್ (ಪಂಜಾಬ್): ಪೈಪ್ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವಾಗ ಬಾಂಬ್ ಪತ್ತೆಯಾಗಿರುವ ಘಟನೆ ಪಂಜಾಬ್ನ ತರನ್-ತರನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಬಂದು ನಿಷ್ಕ್ರಿಯಗೊಳಿಸಿದ್ದಾರೆ.
ಬಾಂಬ್ ಕಂಡುಬಂದ ಬಗ್ಗೆ ಮಾಜಿ ಸೈನಿಕರೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸದ್ಯ ಸ್ಥಳದಲ್ಲಿ ಕಾಮಗಾರಿ ಸೇರಿ ಎಲ್ಲ ಚಟುವಟಿಕಗಳಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 'ಲಿಟಲ್ ಚಾಂಪ್'ಗೆ ಲಿವರ್ ಸಮಸ್ಯೆ: ಚಿಕಿತ್ಸಾ ವೆಚ್ಚಕ್ಕೆ ರೇಶಮಿಯಾ ಕೊಟ್ಟ ವಾಚ್ ಹರಾಜಿಗೆ!