ETV Bharat / bharat

ಸಿಗದ ಆಂಬ್ಯುಲೆನ್ಸ್​.. ಇಬ್ಬರು ಮಕ್ಕಳ ಶವ ಬೈಕ್​ನಲ್ಲಿ ಸಾಗಿಸಿದ ಬಡ ಪೋಷಕರು - ಸಿಗದ ಆಂಬ್ಯುಲೆನ್ಸ್

ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಅಧಿಕಾರಿಗಳು ವಿಫಲರಾದ ಕಾರಣ ತಮ್ಮ ಮಕ್ಕಳ ಶವಗಳನ್ನು ಪೋಷಕರು ದ್ವಿಚಕ್ರ ವಾಹನಗಳಲ್ಲಿ ಸಾಗಿಸಿದ ಎರಡು ಪ್ರತ್ಯೇಕ ಹೃದಯವಿದ್ರಾವಕ ಘಟನೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿವೆ.

Bodies of two children carried on two wheelers in Telugu states
ತೆಲುಗು ನಾಡು: ಎರಡು ಮಕ್ಕಳ ಶವ ದ್ವಿಚಕ್ರದ ಮೂಲಕ ಸಾಗಾಟ
author img

By

Published : Nov 8, 2022, 11:49 AM IST

Updated : Nov 8, 2022, 4:23 PM IST

ಹೈದರಾಬಾದ್/ಅಮರಾವತಿ: ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಅಧಿಕಾರಿಗಳು ವಿಫಲರಾದ ಕಾರಣ ತಮ್ಮ ಮಕ್ಕಳ ಶವಗಳನ್ನು ಪೋಷಕರು ದ್ವಿಚಕ್ರ ವಾಹನಗಳಲ್ಲಿ ಸಾಗಿಸಿದ ಎರಡು ಪ್ರತ್ಯೇಕ ಹೃದಯವಿದ್ರಾವಕ ಘಟನೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಈ ಎರಡೂ ಘಟನೆಗಳು ಸೋಮವಾರ ಖಮ್ಮಂ ಮತ್ತು ಮಚಲಿಪಟ್ಟಣದಲ್ಲಿ ನಡೆದಿವೆ.

ತೆಲಂಗಾಣದ ಖಮ್ಮಂ ಪಟ್ಟಣದ ಬುಡಕಟ್ಟು ದಂಪತಿ ವೆಟ್ಟಿ ಮಲ್ಲ ಮತ್ತು ಆದಿ ಅವರ ಮೂರು ವರ್ಷದ ಮಗಳು ಸುಕ್ಕಿ ಜ್ವರ ಮತ್ತು ಫಿಟ್ಸ್‌ನಿಂದ ಖಮ್ಮಂ ಪ್ರಧಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಳು. ಹಾಗಾಗಿ ಆಕೆಯ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್​ಗಾಗಿ ಪರದಾಡಿದ್ದಾರೆ. ಬಾಲಕಿಯ ಪೋಷಕರ ಬಳಿ ಹಣವಿಲ್ಲದ ಕಾರಣ ಮೃತದೇಹವನ್ನು ಮೋಟಾರ್‌ಸೈಕಲ್‌ನಲ್ಲಿ ಸಾಗಿಸಿದ್ದಾರೆ. ಈ ದಂಪತಿ ತಮ್ಮ ಮಗಳ ಮೃತದೇಹವನ್ನು ಖಮ್ಮಂನಿಂದ 68 ಕಿಲೋಮೀಟರ್‌ ದೂರವಿರುವ ತಮ್ಮ ಸ್ವಗ್ರಾಮ ಕೊತ್ತಮೇಡೆಪಲ್ಲಿಗೆ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿರುವು ಇಂಥಹ ದುಸ್ಥಿತಿಗೆ ಕಾರಣ: ಮೃತದೇಹ ಸ್ಥಳಾಂತರಿಸಲು ಆಂಬ್ಯುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ವಿಫಲವಾದಾಗ, ಮಗುವಿನ ತಂದೆ ಸಹಾಯ ಪಡೆಯಲು ತಮ್ಮ ಗ್ರಾಮಕ್ಕೆ ತೆರಳಿದರು. ಗ್ರಾಮಸ್ಥರೊಬ್ಬರು ಮೋಟಾರ್ ಸೈಕಲ್ ನೀಡಿದ್ದು, ಅದರ ಮೇಲೆ ಪೋಷಕರು ಮಗುವಿನ ಮೃತದೇಹವನ್ನು ತಮ್ಮ ಗ್ರಾಮಕ್ಕೆ ತಂದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕರುಣೆ ತೋರದೆ ಇದ್ದುದು ಇಂಥಹ ಪರಿಸ್ಥಿತಿ ಬರಲು ಕಾರಣ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಆಂಧ್ರದಲ್ಲೂ ಅಮಾನವೀಯ ಘಟನೆ.. ಆಂಧ್ರಪ್ರದೇಶದ ಮಚಿಲಿಪಟ್ಟಣಂದಲ್ಲಿ ನಡೆದ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಇಲ್ಲಿ ಕೂಡ 14 ವರ್ಷದ ಬಾಲಕನ ಶವವನ್ನು ಆತನ ತಂದೆ ಮತ್ತು ಇನ್ನೊಬ್ಬ ಸಂಬಂಧಿ ದ್ವಿಚಕ್ರ ವಾಹನದಲ್ಲಿ ಹೊತ್ತೊಯ್ದಿದ್ದಾರೆ.

ಗೊಲ್ಲ ನವೀನ್ (14) ಭಾನುವಾರ ಮಂಗಿನಪುಡಿ ಕಡಲತೀರದಲ್ಲಿ ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಆ ಬಾಲಕನ ಶವ ಸೋಮವಾರ ಸತ್ರಂಪಲೆಂ ಗ್ರಾಮದ ದಡದಲ್ಲಿ ಪತ್ತೆಯಾಗಿದ್ದು, ಒಂದು ಗಂಟೆ ಕಳೆದರೂ ಅಧಿಕಾರಿಗಳು ಬಾರದ ಕಾರಣ ನವೀನ್ ತಂದೆ ನಾಗರಾಜು ಹಾಗೂ ಚಿಕ್ಕಪ್ಪ ಬಾಲಕೃಷ್ಣ ಅವರು ದ್ವಿಚಕ್ರ ವಾಹನದಲ್ಲಿ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಅಧಿಕಾರಿಗಳು ಹೇಳೋದೇ ಬೇರೆ.. ಇಷ್ಟೆಲ್ಲಾ ಆದರೂ ಸ್ಥಳೀಯ ಅಧಿಕಾರಿಗಳು ಮಾತ್ರ ತಮಗೆ ಮಾಹಿತಿ ನೀಡದೆ ಶವವನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಪುಂಸಕಳೆಂದು ಟೀಕೆ, ಮಗುವಾಗಿದ್ದರೂ ಲಿಂಗ ಪರೀಕ್ಷೆ ಮಾಡಿಸಿದ ಪತಿ ವಿರುದ್ಧ ಪತ್ನಿ ದೂರು

Last Updated : Nov 8, 2022, 4:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.