ಸರಣ್ (ಬಿಹಾರ): ಅನೇಕ ಜನರನ್ನು ಹೊತ್ತ ಬೋಟ್ ಸಂಪೂರ್ಣವಾಗಿ ಮುಳುಗಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದ ಸರಣ್ ಜಿಲ್ಲೆಯ ರಹಾರಿಯಾ ಘಾಟ್ ಬಳಿಯ ಗಂಗಾ ನದಿಯಲ್ಲಿ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಆ ಬೋಟ್ನಲ್ಲಿ ಮರಳನ್ನೂ ತುಂಬಲಾಗಿದ್ದು, ಬಲವಾದ ಗಾಳಿ, ಭೀಕರ ಅಲೆಯಿಂದಾಗಿ ಅವಘಡ ಸಂಭವಿಸಿದೆ. ಬೋಟ್ನಲ್ಲಿದ್ದ ಕೆಲವರು ಈಜಿ ದಡ ಸೇರಿದ್ದಾರೆ. ಕೆಲವರನ್ನು ಪಕ್ಕದಲ್ಲಿದ್ದ ಬೋಟ್ಗಳ ಜನರು ರಕ್ಷಿಸಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.