ETV Bharat / bharat

ಕೂಚ್‌ಬೆಹಾರ್‌ನಲ್ಲಿ ರಾಜ್ಯಪಾಲ ಜಗದೀಪ್ ಧಂಖರ್‌ಗೆ ಕಪ್ಪು ಬಾವುಟ ತೋರಿಸಿದ ಪ್ರತಿಭಟನಾಕಾರರು

ರಾಜ್ಯಪಾಲರಾದ ಜಗದೀಪ್ ಧಂಖರ್ ಅವರು ಮಾತಾಭಂಗದಿಂದ ಸಿಟಾಲ್ಕುಚಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

black flags shown to Governor Jagdeep Dhankhar in Coochbehar

author img

By

Published : May 13, 2021, 6:41 PM IST

ಸಿಟಾಲ್ಕುಚಿ(ಪ.ಬಂಗಾಳ) : ಕೂಚ್‌ಬೆಹಾರ್ ಜಿಲ್ಲೆಯ ಸಿಟಾಲ್ಕುಚಿಯಲ್ಲಿ ರಾಜ್ಯಪಾಲರಾದ ಜಗದೀಪ್ ಧಂಖರ್‌ಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿದೆ. ಮತದಾನದ ನಂತರದ ಹಿಂಸಾಚಾರಕ್ಕೆ ಒಳಗಾದ ಜನರನ್ನು ಭೇಟಿ ಮಾಡಲು ಇಂದು ಅವರು ಅಲ್ಲಿಗೆ ಹೋಗಿದ್ದರು.

ಇವರು ಮಾತಾಭಂಗದಿಂದ ಸಿಟಾಲ್ಕುಚಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಎಚ್ಚೆತ್ತ ಪೊಲೀಸರು ಅವರು ರಸ್ತೆಗೆ ಬರದಂತೆ ತಡೆಯಲು ಕ್ರಮ ಜರುಗಿಸಿದರು.

ಧಂಖರ್​ರ ಈ ಭೇಟಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದರು. ಈ ವೇಳೆ, ಟಿಎಂಸಿ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ ಆರಂಭವಾಗಿದೆ. ಟಿಎಂಸಿ ಗೂಂಡಾಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವ ಕ್ಷೇತ್ರಗಳಲ್ಲೇ ಹಿಂಸಾಚಾರ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.