ETV Bharat / bharat

ಬಿಜೆಪಿ ದುರಾಡಳಿತದಲ್ಲಿ ತೊಡಗಿದೆ: ಅಶೋಕ್ ಗೆಹ್ಲೋಟ್

author img

By

Published : Nov 26, 2022, 7:40 PM IST

ಗಾಂಧಿಧಾಮ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭರತ್ ಸೋಲಂಕಿ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದರು.

bjps-rule-as-misgovernance-statement-by-ashok-gehlot
ಬಿಜೆಪಿ ದುರಾಡಳಿತದಲ್ಲಿ ತೊಡಗಿದೆ : ಅಶೋಕ್ ಗೆಹ್ಲೋಟ್

ಗಾಂಧಿಧಾಮ್​ (ಗುಜರಾತ್): ಕಾಂಗ್ರೆಸ್ ಅಭ್ಯರ್ಥಿ ಭರತ್ ಸೋಲಂಕಿ ತಮ್ಮ ಚುನಾವಣಾ ಪ್ರಚಾರ ತೀವ್ರಗೊಳಿಸಿದ್ದು, ಗುಜರಾತ್​ನ ಗಾಂಧಿಧಾಮ್​ನಲ್ಲಿ ಜನಬೆಂಬಲ ಪಡೆಯಲು ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು.

ಸಭೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಬಿಜೆಪಿ ದುರಾಡಳಿತದಲ್ಲಿ ತೊಡಗಿದೆ. ಕೊರೊನಾ ಅವಧಿಯಲ್ಲಿ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕಛ್‌ನ ಅನೇಕ ಹಸುಗಳು ಲಂಪಿ ಕಾಯಿಲೆಯಿಂದ ಪ್ರಾಣವನ್ನು ಕಳೆದುಕೊಂಡಿವೆ. ಮೊರ್ಬಿ ದುರಂತದಲ್ಲಿ ಅನೇಕರು ಪ್ರಾಣ ಕಳೆದುಕೊಂಡಾಗ ಅವರ ಕುಟುಂಬಗಳಿಗೆ ಸರ್ಕಾರ ಸೂಕ್ತ ನೆರವು ನೀಡಲಿಲ್ಲ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯದ ಮುಖ್ಯಮಂತ್ರಿಗಳನ್ನು ಮಾತ್ರವಲ್ಲದೇ ಇಡೀ ಸಚಿವ ಸಂಪುಟವನ್ನೇ ಬದಲಾಯಿಸಿರುವುದು ನಾಯಕತ್ವದ ವೈಫಲ್ಯಕ್ಕೆ ನಿದರ್ಶನವಾಗಿದೆ. ನೋಟು ಬ್ಯಾನ್ ಆದ ಬಳಿಕ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು, ಉದ್ಯೋಗಗಳು ಖಾಲಿಯಾಗಿವೆ. ಪ್ರಸ್ತುತ 10 ಲಕ್ಷ ಉದ್ಯೋಗಗಳಷ್ಟೇ ಬಾಕಿ ಉಳಿದಿವೆ. ಗುಜರಾತ್​ನಲ್ಲಿ ಸರ್ಕಾರವನ್ನು ಬದಲಾಯಿಸುವುದರಿಂದ ಇಡೀ ದೇಶಕ್ಕೆ ಲಾಭವಾಗುತ್ತದೆ ಎಂದರು.

ಗಾಂಧಿಧಾಮ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭರತ್ ಸೋಲಂಕಿ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಎಐಸಿಸಿ ವಕ್ತಾರ ಮೋಹನ್‌ಪ್ರಕಾಶ್, ರಾಮ್‌ಕಿಶನ್ ಓಜಾ, ರಾಜಸ್ಥಾನ ಸಂಪುಟ ಸಚಿವ ಸಲ್ಲೆ ಮೊಹಮ್ಮದ್ ಕಚ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯಜುವೇಂದ್ರ ಸಿನ್ಹ್ ಜಡೇಜಾ, ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ:ಗುಜರಾತ್​ ವಿಧಾನಸಭೆ ಚುನಾವಣೆ: ರಾಜಕೀಯ ಪಕ್ಷಗಳ ಭರಪೂರ 'ಉಚಿತ' ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.