ETV Bharat / bharat

ಬಂಗಾಳದಲ್ಲಿ ಬಿಜೆಪಿಯಿಂದ ಪ್ರಚಾರದ ಹೊಸ ಅಸ್ತ್ರ: ತೃಣಮೂಲ - ಸಿಪಿಐಎಂ ಮೇಲೆ ರಹಸ್ಯ ಒಪ್ಪಂದದ ಆರೋಪ

author img

By

Published : Mar 26, 2021, 7:21 AM IST

ಪಶ್ವಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಿದ್ದು, ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೀಗ ಬಿಜೆಪಿ ಸಿಪಿಐ ಮತ್ತು ಟಿಎಂಸಿ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸುತ್ತಿವೆ.

ಸಯಂತನ್ ಬಸು ಮತ್ತು  ದೇಬಶ್ರೀ ಚೌಧರಿ
Sayantan Basu and Debashree Chaudhary

ಕೋಲ್ಕತಾ: ಸಿಪಿಐನ ಕಾರ್ಮಿಕರನ್ನು ತೃಣಮೂಲ ಕಾಂಗ್ರೆಸ್ ಗೂಂಡಾಗಳು ಥಳಿಸಿ, ಅವರ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಇದರಿಂದ ಕಾರ್ಮಿಕರಿಗೆ ತಮ್ಮ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಟಿಎಂಸಿ ಕೈಯಲ್ಲಿ ಅವಮಾನಗಳನ್ನು ಎದುರಿಸುತ್ತಿರುವ ತಳಮಟ್ಟದ ಸಿಪಿಐ ಕಾರ್ಮಿಕರು ಇದನ್ನು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಗುಡುಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೃಣಮೂಲ ಮತ್ತು ಸಿಪಿಐ ನಡುವಿನ ರಹಸ್ಯ ಸ್ಥಾನ ಹಂಚಿಕೆ ಆಗಿದೆ ಎಂದು ಆರೋಪಿಸಿದ ಅವರು, ಹೊಂದಾಣಿಕೆ ವ್ಯವಸ್ಥೆ ಕುರಿತಂತೆ ವಿವರಿಸಿದರು. ನಂದಿಗ್ರಾಮ​ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸುತ್ತಿದ್ದು, ಇವರಿಗೆ ಪ್ರತಿಸ್ಪರ್ಧಿಯಾಗಿ ಟಿಎಂಸಿ ಪಕ್ಷದ ನಂಬಿಕಸ್ಥ ಮತ್ತು ಹಾಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕಣಕ್ಕೆ ಇಳಿದಿದ್ದಾರೆ.

ನಂದಿಗ್ರಾಮದಲ್ಲಿ ಶೇ. 35ರಷ್ಟು ಅಲ್ಪಸಂಖ್ಯಾತ ಸಮುದಾಯದ ಮತದಾರರಿದ್ದಾರೆ. ಅಬ್ಬಾಸ್ ಸಿದ್ದೀಕ್ ಅವರು ಎಐಎಸ್ಎಫ್ ಸ್ಥಾನಕ್ಕಾಗಿ ತಮ್ಮ ಹಕ್ಕನ್ನು ತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಇತ್ತ ಸಿಪಿಐ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಈ ಮೂಲಕ ಸಿಎಂ ಮಮತಾ ಅವರಿಗೆ ಅನುಕೂಲ ಮಾಡಿಕೊಡಲು ಸಿಪಿಐ ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಯಾಗಿ ಟಿಎಂಸಿ ಸಿಲಿಗುರಿ ಮತ್ತು ಜಾದವ್‌ಪುರದಲ್ಲಿ ದುರ್ಬಲ ಮತ್ತು ಅಪರಿಚಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಸಿಪಿಐ ಗೆಲುವು ಸಾಧಿಸಲು ಅನುವು ಮಾಡಿಕೊಟ್ಟಿದೆ. ಡಿಎಂಸಿಯಿಂದ ಸಿಲಿಗುರಿಯಲ್ಲಿ ಅಶೋಕ್ ಭಟ್ಟಾಚಾರ್ಯ ಮತ್ತು ಜಾದವ್‌ಪುರದ ಡಾ.ಸುಜನ್ ಚಕ್ರವರ್ತಿ ಎಂಬುವವರು ಸ್ಪರ್ಧೆ ನಡೆಸಲಿದ್ದಾರೆ.

ಓದಿ: ಬಂಗಾಳದ ರಾಜಕೀಯ ಹಿಂಸಾಚಾರದ ವಿರುದ್ಧ ಕೈಲಾಶ್ ವಿಜಯವರ್ಗಿಯ ಆಕ್ರೋಶ

ಬಳಿಕ ರಾಯ್‌ಗುಂಜ್‌ನ ಬಿಜೆಪಿ ಲೋಕಸಭಾ ಸದಸ್ಯ ಮತ್ತು ಕೇಂದ್ರ ಸಚಿವ ದೇಬಶ್ರೀ ಚೌಧರಿ ಮಾತನಾಡಿ, ಸಿಪಿಐ ಮತ್ತು ತೃಣಮೂಲ ಪಕ್ಷಗಳು ರಹಸ್ಯ ಸ್ಥಾನ ಹಂಚಿಕೆ ಕಾರ್ಯತಂತ್ರ ರೂಪಿಸಿವೆ. ಪಶ್ಚಿಮ ಬಂಗಾಳದ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿವೆ. ಆದರೆ, ಈ ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಈ ರಹಸ್ಯ ತಂತ್ರ ಈಗ ದೇಶಕ್ಕೆ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.

ಸಿಪಿಐ ಪಶ್ಚಿಮ ಬಂಗಾಳದ ಜನರನ್ನು 34 ವರ್ಷಗಳ ಕಾಲ ಮೂರ್ಖರನ್ನಾಗಿ ಮಾಡಿತು. ಕಳೆದ 10 ವರ್ಷಗಳ ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ಜನರು ಬಳಲುತ್ತಿದ್ದಾರೆ. ಟಿಎಂಸಿ- ಸಿಪಿಐ ನಡುವಿನ ರಹಸ್ಯವನ್ನು ಪಶ್ಚಿಮ ಬಂಗಾಳದ ಜನರು ಅರಿತುಕೊಂಡಿದ್ದಾರೆ. ಇದಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೂಕ್ತ ಉತ್ತರವನ್ನು ನೀಡುತ್ತಾರೆ ಎಂದು ಚೌಧರಿ ಭವಿಷ್ಯ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.