ETV Bharat / bharat

ಸನಾತನ ಧರ್ಮದ ಕುರಿತ ವಿವಾದದ ಹಿಂದೆ ಬಿಜೆಪಿ ಕೈವಾಡವಿದೆ : ಹೈಕೋರ್ಟ್​ಗೆ ಉದಯನಿಧಿ ಸ್ಟಾಲಿನ್​ ಹೇಳಿಕೆ

ಸನಾತನ ಧರ್ಮದ ಕುರಿತ ವಿವಾದದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಮದ್ರಾಸ್​ ಹೈಕೋರ್ಟ್​ಗೆ ಉದಯನಿಧಿ ಸ್ಟಾಲಿನ್​ ಹೇಳಿದ್ದಾರೆ.

bjps-hidden-hand-behind-sanatan-row-litigation-udhayanidhi-tells-hc
ಸನಾತನ ಧರ್ಮದ ಕುರಿತ ವಿವಾದದ ಹಿಂದೆ ಬಿಜೆಪಿ ಕೈವಾಡವಿದೆ : ಹೈಕೋರ್ಟ್​ಗೆ ಉದಯನಿಧಿ ಸ್ಟಾಲಿನ್​
author img

By ETV Bharat Karnataka Team

Published : Oct 17, 2023, 2:11 PM IST

ಚೆನ್ನೈ (ತಮಿಳುನಾಡು) : ಸನಾತನ ಧರ್ಮದ ಕುರಿತು ಉಂಟಾಗಿರುವ ವಿವಾದದ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್​ ಮದ್ರಾಸ್​ ಹೈಕೋರ್ಟ್​ಗೆ ತಿಳಿಸಿದ್ದಾರೆ. ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ವಿಚಾರಣೆ ನಡೆಸಿತು.

ಸಚಿವ ಉದಯನಿಧಿ ಸ್ಟಾಲಿನ್​ ಪರ ವಕೀಲ ವಿಲ್ಸನ್​ ವಾದ ಮಂಡಿಸಿ, ತಮ್ಮ ಕಕ್ಷಿದಾರ ಉದಯನಿಧಿ ಸ್ಟಾಲಿನ್​ ವಿರುದ್ಧ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ಪೈಕಿ ಅವರ ಅನರ್ಹತೆ ಕುರಿತು ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ಪರ ವಕೀಲರು ಹಾಜರಾಗಿರುವುದು ಬಿಜೆಪಿಯ ಕೈವಾಡ ಇರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಕಕ್ಷಿದಾರರ ವಿರುದ್ಧ ಸಲ್ಲಿಕೆಯಾಗಿರುವ ರಿಟ್​ ಅರ್ಜಿ ರಾಜಕೀಯ ಪ್ರೇರಿತವಾಗಿದ್ದು, ಇದನ್ನು ವಜಾಗೊಳಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು.

ತಮಿಳುನಾಡಿನ ಮಣ್ಣಿನಲ್ಲಿ ಬಿಜೆಪಿ ತನ್ನ ರಾಜಕೀಯ ಸಿದ್ಧಾಂತವನ್ನು ಬಿತ್ತಲು ಪ್ರಯತ್ನಿಸುತ್ತಿದೆ. ಇದು ಇಲ್ಲಿ ಸಲ್ಲಿಕೆಯಾಗಿರುವ ರಿಟ್​ ಅರ್ಜಿಯಿಂದ ಗೊತ್ತಾಗುತ್ತದೆ. ಅರ್ಜಿದಾರರು ಹಿಂದು ಮುನ್ನಾನಿಯ ಮುಖಂಡರಾಗಿದ್ದು, ಆರ್​ಎಸ್​ಎಸ್​ ಮತ್ತು ಬಿಜೆಪಿ ಹಿನ್ನೆಲೆಯುಳ್ಳವರು ಎಂದು ನ್ಯಾಯಾಲಯದ ಗಮನ ಸೆಳೆದರು. 100 ವರ್ಷಗಳಿಗಿಂತಲೂ ಹಳೆಯದಾದ ದ್ರಾವಿಡ ಸಿದ್ಧಾಂತವನ್ನು ವಿರೋಧಿಸುವ ಒಂದು ನಿರ್ದಿಷ್ಟ ಸಿದ್ಧಾಂತವು ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.

ತಮಿಳುನಾಡಿನ ಬಹುಪಾಲು ಜನರು ದ್ರಾವಿಡ ಸಿದ್ಧಾಂತವನ್ನು ಪಾಲನೆ ಮಾಡುತ್ತಾರೆ. ಈ ಸಿದ್ಧಾಂತವನ್ನು ಪಾಲನೆ ಮಾಡುವ ಹಿನ್ನಲೆ ಜನರು ನನಗೆ ಮತ ಹಾಕಿದ್ದಾರೆ. ದ್ರಾವಿಡ ನಾಯಕರಾದ ಪೆರಿಯಾರ್​, ಮಾಜಿ ಮುಖ್ಯಮಂತ್ರಿ ಪೆರಾರಿಗ್ನಾರ್​ ಅಣ್ಣಾ, 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಡಿಎಂಕೆ ಕಾರ್ಯಕರ್ತರು ಈ ಸಿದ್ಧಾಂತದ ಮೇಲೆ ನಂಬಿಕೆಯನ್ನು ಇಟ್ಟಿಕೊಂಡಿದ್ದಾರೆ. ನಾವು ಕೂಡ ಈ ಸಿದ್ಧಾಂತದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ. ಜೊತೆಗೆ ಇತರ ಎಲ್ಲಾ ಧರ್ಮಗಳ ಬಗ್ಗೆ ಗೌರವ ಇದೆ ಎಂದು ಉದಯನಿಧಿ ಸ್ಟಾಲಿನ್​ ಹೇಳಿದರು.

ಧರ್ಮದ ಹೆಸರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ತಾರ್ಕಿಕವಲ್ಲದ ನಂಬಿಕೆ ಮತ್ತು ತಾರತಮ್ಯದ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ. ಸೆಕ್ಷನ್​ 25ರ ಅಡಿಯಲ್ಲಿ ವಿಚಾರವಾದ ಮತ್ತು ನಾಸ್ತಿಕವಾದದ ಹಕ್ಕನ್ನು ನಾವು ಹೊಂದಿದ್ದೇವೆ. ಆದರೆ ಅರ್ಜಿದಾರರು ಸೆಕ್ಷನ್​​ 25ರಡಿಯಲ್ಲಿ ಕೇವಲ ಆಸ್ತಿಕವಾದ ಮಾತ್ರ ಹೊಂದಿರುವುದಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದು ನಾಸ್ತಿಕವಾದವನ್ನು ಪಾಲಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನೂ ನೀಡುತ್ತದೆ ಎಂದು ನ್ಯಾಯಾಲಯದಲ್ಲಿ ಪ್ರತಪಾದಿಸಿದರು.

1927ರಲ್ಲಿ ಮಹಾದ್ ಸತ್ಯಾಗ್ರಹದಲ್ಲಿ ಮನು ಸ್ಮೃತಿಯನ್ನು ಸುಟ್ಟುಹಾಕಿದ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದ ಅವರು "ಅಸಮಾನತೆಯಲ್ಲಿ ನೆಲೆಗೊಂಡಿರುವ ಪ್ರಾಚೀನ ಹಿಂದೂ ಧರ್ಮಗ್ರಂಥಗಳ ಅಧಿಕಾರವನ್ನು ನಾಶ ಮಾಡೋಣ" ಎಂದು ಹೇಳಿದರು. ಸನಾತನ ಧರ್ಮದ ತಾರತಮ್ಯವನ್ನು ಸಾಬೀತುಪಡಿಸಲು ಮನುಸ್ಮೃತಿಯಲ್ಲಿ ಹಲವು ಉಲ್ಲೇಖಗಳಿವೆ ಎಂದು ಹೇಳಿದರು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಸನಾತನ ಧರ್ಮ ನಿರ್ಮೂಲನೆ ಕುರಿತ ಸಾರ್ವಜನಿಕ ಭಾಷಣ ಮತ್ತು ಚರ್ಚೆಗಳು ಸೈದ್ಧಾಂತಿಕ ಮತ್ತು ರಾಜಕೀಯವಾಗಿ ಅಸಂವಿಧಾನಿಕ ಎಂದು ಅರ್ಥೈಸಲು ಸಾಧ್ಯವಿಲ್ಲ. ಆದ್ದರಿಂದ ಈ ವಿಷಯದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.

ಅರ್ಜಿದಾರರಾದ ಟಿ ಮನೋಹರ್ ಅವರು ಹಿಂದೂ ಮುನ್ನನಿಯ ಪದಾಧಿಕಾರಿಯಾಗಿದ್ದು, ಕಳೆದ ಸೆಪ್ಟೆಂಬರ್ 2ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಉದಯನಿಧಿ ಸ್ಟಾಲಿನ್ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇನ್ನಿಬ್ಬರು ಹಿಂದೂ ಮುನ್ನಾನಿ ಪದಾಧಿಕಾರಿಗಳು ತಮಿಳುನಾಡಿನ ಮಾನವ ಸಂಪನ್ಮೂಲ ಸಚಿವ ಪಿ.ಕೆ ಸೇಕರ್ ಬಾಬು ಮತ್ತು ಡಿಎಂಕೆ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎ ರಾಜಾ ವಿರುದ್ಧವೂ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಪಬ್ಲಿಕ್​ ಅಲ್ಲ, ಪಬ್ಲಿಸಿಟಿ ಇಂಟ್ರೆಸ್ಟ್​ ಲಿಟಿಗೇಶನ್: ಉದಯನಿಧಿ ವಿರುದ್ಧದ ಅರ್ಜಿಗಳಿಗೆ ಸುಪ್ರೀಂನಲ್ಲಿ ತಮಿಳುನಾಡು ಸರ್ಕಾರ ಆಕ್ಷೇಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.