ETV Bharat / bharat

ಹೃದಯಾಘಾತದಿಂದ BJYM ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್​ ನಿಧನ! - ಪಶ್ಚಿಮ ಬಂಗಾಳದ ಬಿಜೆವೈಎಂ ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್

ಹೃದಯಾಘಾತದಿಂದ ಬಿಜೆವೈಎಂ ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್ ನಿಧನರಾಗಿದ್ದು, ಟಿಎಂಸಿ ನಾಯಕ ಕುನಾಲ್​ಘೋಷ್ ಸಂತಾಪ ಸೂಚಿಸಿದ್ದಾರೆ.

ರಾಜು ಸರ್ಕಾರ್
ರಾಜು ಸರ್ಕಾರ್
author img

By

Published : Jul 27, 2021, 8:40 AM IST

ಕೋಲ್ಕತ್ತಾ: ಹೃದಯಾಘಾತದಿಂದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್ ನಿಧನರಾಗಿದ್ದಾರೆ.

ನಿನ್ನೆ ನಗರದ ಬಿಜೆಪಿ ಪ್ರಧಾನ ಕಚೇರಿ ಹೇಸ್ಟಿಂಗ್ಸ್​​ನಲ್ಲಿ ಬಿಜೆಪಿ ಸಮಾವೇಶದಲ್ಲಿ ರಾಜು ಸರ್ಕಾರ ಭಾಗಿಯಾಗಿದ್ದರು. ಚರ್ಚೆಯ ವೇಳೆ ಬಿಜೆಪಿ ಎರಡು ಬಣಗಳ ನಡುವಿನ ವಿವಾದವು ಉದ್ವಿಗ್ನತೆ ಸೃಷ್ಟಿಸಿತು. ಸದಸ್ಯರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವೇಳೆ ರಾಜುಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ, ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅವರು ಬದುಕುಳಿಯಲಿಲ್ಲ.

ಇದನ್ನೂ ಓದಿ: ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಸ್ಕರ್ ಫರ್ನಾಂಡಿಸ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ರಾಜು ಸರ್ಕಾರ ನಿಧನಕ್ಕೆ ಸಂತಾಪ ಸೂಚಿಸಿರುವ ಟಿಎಂಸಿ ನಾಯಕ ಕುನಾಲ್​ ಘೋಷ್​, ರಾಜು ಅವರು ನನ್ನನ್ನು ಭೇಟಿಯಾಗಲು ಆಗಾಗ್ಗೆ ಬರುತ್ತಿದ್ದರು. ಇತ್ತೀಚೆಗೆ ವಾಟ್ಸ್​ಆ್ಯಪ್​​​ನಲ್ಲಿ ಚಾಟ್​ ಕೂಡ ಮಾಡಿದ್ದೆವು. ಅವರ ಸಾವಿನ ಹಿಂದೆ ಬೇರೆ ಏನೋ ಕಾರಣವಿದೆ ಎಂದು ಕುನಾಲ್​ ಘೋಷ್ ಅನುಮಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.