ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ನರಹತ್ಯೆ ; ಬಿಜೆಪಿ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆಗೈದ ಉಗ್ರರು - ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ

ಜಮ್ಮು-ಕಾಶ್ಮೀರದಲ್ಲಿ ನರಹತ್ಯೆಯನ್ನು ಮುಂದುವರೆಸಿರುವ ಉಗ್ರರು ಇಂದು ಬಿಜೆಪಿ ಮುಖಂಡನೊಬ್ಬನ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಗುಂಡು ತಿಂದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಯಿತಾದರೂ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ..

BJP worker shot dead in Kulgam
BJP worker shot dead in Kulgam
author img

By

Published : Aug 17, 2021, 8:10 PM IST

ಜಮ್ಮು-ಕಾಶ್ಮೀರ (ಕುಲ್ಗಾಮ್​) : ಶಂಕಿತ ಉಗ್ರರ ಗುಂಪೊಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ. ಜಾವೇದ್ ಅಹ್ಮದ್ ದಾರ್ ಗುಂಡಿನ ದಾಳಿಗೆ ಬಲಿಯಾದ ಬಿಜೆಪಿ ಮುಖಂಡ ಎಂದು ತಿಳಿದು ಬಂದಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಪ್ರದೇಶದ ಹತ್ತಿರ ಇರುವ ಬ್ರಶ್ಲೂ ಜಾಗೀರ್ ಎಂಬ ಪ್ರದೇಶದಲ್ಲಿ ಜಾವೇದ್ ಅಹ್ಮದ್ ದಾರ್ ಅವರ ಮೇಲೆ ಇಂದು (ಮಂಗಳವಾರ) ಮಧ್ಯಾಹ್ನ ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪರಿಣಾಮ ಗುಂಡು ತಿಂದ ಬಿಜೆಪಿ ಕಾರ್ಯಕರ್ತ ಜಾವೇದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • Jammu & Kashmir: BJP's Constituency President of Homshalibugh in Kulgam, Javeed Ahmad Dar shot dead by terrorists this afternoon at Brazloo-jagir of the district. pic.twitter.com/OXRJea1HbW

    — ANI (@ANI) August 17, 2021 " class="align-text-top noRightClick twitterSection" data=" ">

ಸದ್ಯ ಭಾರತೀಯ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿವೆ. ಉಗ್ರರನ್ನು ಸದೆಬಡೆಯಲು ಮುಂದಾಗಿವೆ. ಇನ್ನು, ಈ ಬಗ್ಗೆ ಟ್ವೀಟ್​ ಮಾಡಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದೊಂದು ಭಯಾನಕ ಘಟನೆ. ಜಾವೀದ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆಗೈದದ್ದು ದುರಂತ. ಈ ಘಟನೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.