ETV Bharat / bharat

ನಾವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ವೆಚ್ಚದಲ್ಲಿ ಅಮರಾವತಿ ಅಭಿವೃದ್ಧಿ: ಬಿಜೆಪಿ ಘೋಷಣೆ

author img

By

Published : Jan 4, 2022, 10:50 AM IST

2024ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ವೆಚ್ಚದಲ್ಲಿ ಅಮರಾವತಿಯನ್ನು ರಾಜಧಾನಿ ಆಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಆಂಧ್ರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ವೀರರಾಜು ಹೇಳಿದ್ದಾರೆ.

BJP will develop Amaravati as capital city at cost of Rs 10,000 cr if voted to power: Somu Veerraju

ಕೃಷ್ಣಾ (ಆಂಧ್ರಪ್ರದೇಶ): 2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 10,000 ಕೋಟಿ ವೆಚ್ಚದಲ್ಲಿ ಅಮರಾವತಿಯನ್ನು ರಾಜಧಾನಿಯನ್ನು ಅಭಿವೃದ್ಧಿ ಪಡಿಸುವುದಾಗಿ ಭಾರತೀಯ ಜನತಾ ಪಕ್ಷದ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಸೋಮು ವೀರರಾಜು ಘೋಷಿಸಿದ್ದಾರೆ.

ಕೃಷ್ಣಾ ಜಿಲ್ಲೆಯ ಪೆನುಗಂಚಿಪ್ರೋಲು ಗ್ರಾಮ ದೇವತೆ ತಿರುಪತಮ್ಮ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್‌ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಮೇಲೂ ರಾಜ್ಯದ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಚಂದ್ರಬಾಬು ನೇತೃತ್ವದ ಟಿಡಿಪಿ ಸರ್ಕಾರ, ರಾಜಧಾನಿ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಇದಕ್ಕಾಗಿ 7,200 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ, ಆದರೆ ಇದರಲ್ಲಿ ಕೇಂದ್ರ ಸರಕಾರವೂ ಪ್ರಮುಖ ಕೊಡುಗೆ ನೀಡಿದೆ ಎಂದರು. ಇನ್ನು ವೈಎಸ್‌ಆರ್‌ ಕಾಂಗ್ರೆಸ್​ ಸರ್ಕಾರ ಮೂರು ರಾಜಧಾನಿಗಳ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕ ವೀರರಾಜು ಆರೋಪಿಸಿದರು.

ಇದನ್ನೂ ಓದಿ:ONGC ನೂತನ ಸಿಎಂಡಿ ಆಗಿ ಅಲ್ಕಾ ಮಿತ್ತಲ್​ ನೇಮಕ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.