ನವದೆಹಲಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 115 ಸ್ಥಾನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಉಳಿದ 25 ಸ್ಥಾನಗಳಲ್ಲಿ ಮೈತ್ರಿ ಮೂಲಕ ಸ್ಪರ್ಧಿಸಲಿದ್ದೇವೆ ಎಂದು ಭಾರತೀಯ ಜನತಾ ಪಕ್ಷದ ಕೇರಳ ಮುಖ್ಯಸ್ಥ ಕೆ.ಸುರೇಂದ್ರನ್ ಮಾಹಿತಿ ನೀಡಿದರು.
ಬಿಜೆಪಿ 115 ಸ್ಥಾನಗಳ ಮೇಲೆ ಹೋರಾಡಲಿದೆ ಮತ್ತು ಕೇರಳದ ಉಳಿದ 25 ಸ್ಥಾನಗಳಲ್ಲಿ ಮೈತ್ರಿಯಾಗಿ ಸ್ಪರ್ಧೆ ಮಾಡಲಿದ್ದೇವೆ . ನಾವು ನಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಬೆಳಗ್ಗೆ ಪಟ್ಟಿ ಹೊರಬರುವ ನಿರೀಕ್ಷೆ ಇದೆ. ಹಾಗೆ ಶ್ರೀಧರನ್ ಅವರ ಉಮೇದುವಾರಿಕೆಯನ್ನು ನಾವು ಶಿಫಾರಸ್ಸು ಮಾಡಿದ್ದೇವೆ ಎಂದು ಸುರೇಂದ್ರನ್ ಇಲ್ಲಿ ತಿಳಿಸಿದರು .
ಮೂಲಗಳ ಪ್ರಕಾರ, ಮುಂಬರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸೋಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
14 ಜಿಲ್ಲೆಗಳಲ್ಲಿ 140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.