ಪ.ಬಂಗಾಳ : ಟಿಎಂಸಿ ನಾಯಕ ಮತ್ತು ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಅವಾಚ್ಯ ಪದಗಳನ್ನಾಡಿದ ವಿಡಿಯೋವೊಂದನ್ನು ಬಿಜೆಪಿ ಇಂದು ಹರಿಬಿಟ್ಟಿದೆ.
ಈ ಸಂಬಂಧ ಬಿಜೆಪಿ ಇಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದೆ. ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ವಿಧಾನಸಭಾ ಚುನಾವಣೆಯ ಉಳಿದ ಹಂತಗಳಲ್ಲಿ ಪ್ರಚಾರ ಮಾಡದಂತೆ ಅವರನ್ನು ಸೆನ್ಸಾರ್ ಮತ್ತು ಡಿಬಾರ್ ಮಾಡುವಂತೆ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಫಿರ್ಹಾದ್ ಹಕೀಮ್ ವಿಡಿಯೋವನ್ನು ಡಾಕ್ಟರೇಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಫಿರ್ಹಾದ್ ಹಕೀಮ್ ತಮ್ಮ ಸೇವಾ ಅವಧಿ ಮುಗಿದ ಬಳಿಕವೂ ಪಶ್ಚಿಮ ಬಂಗಾಳ ಮಹಾನಗರ ಪಾಲಿಕೆಗಳ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ತಮ್ಮ ಅಧಿಕಾರ ಚಲಾಯಿಸುವಂತಿಲ್ಲ ಎಂದು ಚುನಾವಣಾ ಆಯೋಗ (ಇಸಿಐ) ನಿರ್ಬಂಧಿಸಿ ಆದೇಶ ನೀಡಿದ ಬೆನ್ನಲ್ಲೇ, ಫಿರ್ಹಾದ್ ಹಕೀಮ್ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ.. ಕೋಲ್ಕತ್ತಾ ಪಾಲಿಕೆ ಅಧ್ಯಕ್ಷ ಸ್ಥಾನಕ್ಕೆ ಟಿಎಂಸಿ ಮುಖಂಡ ರಾಜೀನಾಮೆ