ನವದೆಹಲಿ: ಗೂಗಲ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಸೇರಿದಂತೆ ಟೆಕ್ ದೈತ್ಯರು ತಮ್ಮ ಆದಾಯವನ್ನು ಭಾರತದ ಸುದ್ದಿ ಮಾಧ್ಯಮ ಕಂಪನಿಗಳೊಂದಿಗೆ ಹಂಚಿಕೊಳ್ಳಲು ಒತ್ತಾಯಿಸುವ ಕಾನೂನನ್ನು ಜಾರಿಗೆ ತರಬೇಕೆಂದು ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್ ಮೋದಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಮಾಧ್ಯಮಗಳು ಸುದ್ದಿ ಸಂಗ್ರಹಿಸಲು ಭಾರಿ ಹೂಡಿಕೆ ಮಾಡುತ್ತವೆ ಮತ್ತು ಅವು ವಿಶ್ವಾಸಾರ್ಹ ಮಾಹಿತಿಯನ್ನು ನೀಡುತ್ತವೆ. ಜಾಹೀರಾತು ಅವರ ಮುಖ್ಯ ಆದಾಯ. ಆದರೆ, ಆದಾಯದ ಹೆಚ್ಚಿನ ಪಾಲು ಈಗ ಈ ಟೆಕ್ ದೈತ್ಯರಿಂದ ಮೂಲೆಗುಂಪಾಗಿದೆ. ಇದರಿಂದಾಗಿ ಮುದ್ರಣ ಮಾಧ್ಯಮ ಮತ್ತು ಟಿವಿ ಚಾನೆಲ್‌ಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ ’ಎಂದು ಮೋದಿ ಹೇಳಿದರು.
ಆಸ್ಟ್ರೇಲಿಯಾ ಸರ್ಕಾರದ ಇತ್ತೀಚಿನ ನಡೆಯನ್ನು ಉಲ್ಲೇಖಿಸಿದ ಅವರು, ಈ ಟೆಕ್ ದೈತ್ಯರು ಸುದ್ದಿ ವಿಷಯಗಳಿಗೆ ಹಣ ನೀಡುವಂತೆ ಭಾರತವೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.