ETV Bharat / bharat

ಮಹಿಳೆ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ವಿರುದ್ಧ ದಾಖಲಾಯ್ತು ಪ್ರಕರಣ - ಉತ್ತರಾಖಂಡ ಬಿಜೆಪಿ ಶಾಸಕ

ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ಶಾಸಕನ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

BJP MLA
BJP MLA
author img

By

Published : Jul 2, 2021, 9:21 PM IST

ಹರಿದ್ವಾರ(ಉತ್ತರಾಖಂಡ): ಭಾರತೀಯ ಜನತಾ ಪಾರ್ಟಿ ಶಾಸಕನೋರ್ವನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಎಫ್‌ಐಆರ್‌ ದಾಖಲಾಗಿದೆ. ಜ್ವಾಲಾಪುರ ಶಾಸಕ ಸುರೇಶ್ ರಾಥೋಡ್​ ವಿರುದ್ಧ ಸೆಕ್ಷನ್​ 370 ಅಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಇದೇ ಪ್ರಕರಣ ಸಂಬಂಧ ಶಾಸಕ ಕೂಡ ದೂರು ದಾಖಲಿಸಿದ್ದು, ಮಹಿಳೆ ಬ್ಲಾಕ್​ಮೇಲ್​ ಮಾಡ್ತಿದ್ದಾಳೆ ಎಂದಿದ್ದರು. ಜತೆಗೆ 36 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆಂದು ಹೇಳಿಕೊಂಡಿದ್ದರು. ಈಗಾಗಲೇ ಮಹಿಳೆಯನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಶಾಸಕನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾಳೆ.

ಇದನ್ನೂ ಓದಿರಿ: 17 ವರ್ಷದ ಕನಸು ನನಸು: ಆಂಜನೇಯನ ದೇಗುಲ ನಿರ್ಮಿಸಿದ ಅರ್ಜುನ್​ ಸರ್ಜಾ

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಸುರೇಶ್ ರಾಥೋಡ್, ಕಾನೂನಿನ ಮುಂದೆ ಎಲ್ಲರೂ ಸಮಾನರು. ನನ್ನ ವಿರುದ್ಧ ಮಾಡಲಾಗಿರುವ ಆರೋಪ ಸುಳ್ಳು. ವಿಚಾರಣೆ ಎದುರಿಸಲು ತಯಾರಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.