ETV Bharat / bharat

ಬಿಹಾರ: ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಕೊಂದು, ದುಷ್ಕರ್ಮಿಗಳು ಪರಾರಿ - ಬಿಹಾರ ಬಿಜೆಪಿ ನಾಯಕನ ಕೊಲೆ

ಬಿಹಾರದಲ್ಲಿ ಗುಂಡಿನ ಸದ್ದು- ಮಾಧೇಪುರದಲ್ಲಿ ಬಿಜೆಪಿ ಮುಖಂಡ ವಿಪಿನ್ ಕುಮಾರ್ ಸಿಂಗ್​ಗೆ ಗುಂಡಿಕ್ಕಿ ಹತ್ಯೆ- ಹಂತಕರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

BJP leader shot dead in bihar
ಬಿಜೆಪಿ ಮುಖಂಡನ ಹತ್ಯೆ
author img

By

Published : Jul 30, 2022, 8:33 PM IST

ಬಿಹಾರ: ಬಿಹಾರದ ಮಾಧೇಪುರದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಮುಖಂಡನ ಹತ್ಯೆಯಾಗಿದೆ. ಮಾಧೇಪುರದ ಗ್ವಾಲ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಾಪುರ್​ನಲ್ಲಿ ವಿಪಿನ್ ಕುಮಾರ್ ಸಿಂಗ್​​ಗೆ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಗುಂಡು ತಗುಲಿ ವಿಪಿನ್ ಕುಮಾರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಪಿನ್ ಕುಮಾರ್ ಸಿಂಗ್ ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗ್ವಾಲ್ಪಾರಾ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೂರು ಬೈಕ್‌ಗಳಲ್ಲಿ ಬಂದ 6 ಮಂದಿ ಕ್ರಿಮಿನಲ್‌ಗಳು ಈ ಕೃತ್ಯ ಎಸಗಿದ್ದಾರೆ. ಟಿಕ್ಕರ್ ತೊಲ ಮೋರ್ ಸಮೀಪದ ಮೋರಿ ಬಳಿ 5 ಮಂದಿ ಕ್ರಿಮಿನಲ್‌ಗಳು ಹೊಂಚು ಹಾಕಿದ್ದರು. ಓರ್ವ ವಿಪಿನ್ ಕುಮಾರ್ ಸಿಂಗ್ ಅವರ ಕಾರನ್ನು ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಮೋರಿ ಸಮೀಪ ತಲುಪಿದ ತಕ್ಷಣ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ವಾಲ್ಪಾರಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಪೆನ್ನು, ಪೆನ್ಸಿಲ್​ ಹಿಡಿಯಬೇಕಾದ ಮಕ್ಕಳ ಕೈಗೆ ಹಾರೆ, ಕೊಡಲಿ.. ಮುಖ್ಯಶಿಕ್ಷಕ ನಡೆಗೆ ಖಂಡನೆ - ವಿಡಿಯೋ ವೈರಲ್​

ಪೊಲೀಸರು ಘಟನೆ ನಡೆದ ಸ್ಥಳದಿಂದ ಆರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೃತ ದೇಹದಿಂದ ಎರಡು ಗುಂಡುಗಳನ್ನು ಹೊರ ತೆಗೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.