ಕೋಲ್ಕತ್ತಾ: ಅಕ್ರಮವಾಗಿ ಮಾದಕ ವಸ್ತು ಶೇಖರಿಸಿಟ್ಟಿದ್ದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಎಂಬಾತನನ್ನು ಬಂಧಿಸಿದ್ದು, ಇದೀಗ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಾದಕವಸ್ತು ಬಳಕೆ ಹಾಗೂ ಶೇಖರಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳ ಬಿಜೆಪಿ ಯುವ ಘಟಕದ ಪದಾಧಿಕಾರಿ ಪಮೇಲಾ ಗೋಸ್ವಾಮಿ, ಪೊಲೀಸರ ವಿಚಾರಣೆ ವೇಳೆ ರಾಕೇಶ್ ಸಿಂಗ್ ಹೆಸರು ಬಾಯಿ ಬಿಟ್ಟಿದ್ದು, ಈ ಹೇಳಿಕೆ ಆಧಾರದ ಮೇಲೆ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದರು.