ಹೈದರಾಬಾದ್: ನವೆಂಬರ್ 17ರಂದು 'ಗಿನ್ನೆಸ್ ವಿಶ್ವದಾಖಲೆಗಳ ದಿನ'ವನ್ನಾಗಿ ಆಚರಣೆ ಮಾಡಲಾಗುತ್ತದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಪಂಚದಾದ್ಯಂತ ವಿಶೇಷ ದಾಖಲೆಗಳನ್ನು ಒಳಗೊಂಡಿರುವ ಮಹತ್ವದ ಪುಸ್ತಕವಾಗಿದ್ದು, ಚಕಿತಗೊಳಿಸುವ, ಅಚ್ಚರಿ ಮೂಡಿಸುವ ದಾಖಲೆಗಳು ಈ ಪುಸ್ತಕದಲ್ಲಿ ನಮೂದಾಗುತ್ತವೆ. ಇದೀಗ 18ನೇ ಗಿನ್ನೆಸ್ ವಿಶ್ವದಾಖಲೆ (18th Guinness World Records Day) ದಿನ ಮತ್ತಷ್ಟು ಹೊಸ ದಾಖಲೆಗಳು ಹುಟ್ಟಿಕೊಂಡಿವೆ.
ಬ್ರಿಟಿಷ್ ಜಿಮ್ನಾಸ್ಟ್, ಯೂಟ್ಯೂಬರ್ ಆಶ್ಲೇ ವ್ಯಾಟ್ಸನ್ (Ashley Watson) ಎರಡು ಬಾರ್ಗಳ ನಡುವೆ ಸುಮಾರು 6 ಮೀಟರ್ ದೂರ ಬ್ಯಾಕ್ಫ್ಲಿಪ್ ಮಾಡುವ ಮೂಲಕ ಹಿಂದಿನ ದಾಖಲೆ ಪುಡಿಗಟ್ಟಿದ್ದಾರೆ.
ಚೀನಾದ ಝಾಂಗ್ ಶುವಾಂಗ್ ಸುಮಾರು 50 ಮೀಟರ್ ಕಾರು ಎಳೆಯುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಇದಕ್ಕಾಗಿ ಅವರು ತೆಗೆದುಕೊಂಡಿದ್ದು ಕೇವಲ 1 ನಿಮಿಷ 13.27 ಸೆಕೆಂಡ್ ಕಾಲಾವಧಿ.
![50 ಮೀಟರ್ ಕಾರು ಎಳೆದ ಕ್ರೀಡಾಪಟು](https://etvbharatimages.akamaized.net/etvbharat/prod-images/13670485_dfdfddfd.jpg)
ಅಮೆರಿಕದ ಲಾರಾ ಬಿಯಾಂಡೋ ಎಂಬವರು ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗಿನ್ನೆಸ್ ದಾಖಲೆಗಳ ಸಾಧನೆ ಮಾಡಿದ್ದು, ಇದೀಗ ಚೆಂಡಿನ ಸುತ್ತ ಲೆಗ್ಸ್ಪಿನ್ ಮಾಡುವ ಮೂಲಕ ಹುಬ್ಬೇರಿಸಿದ್ದಾರೆ.
![ಫುಟ್ಬಾಲ್ನಲ್ಲಿ ಮತ್ತೊಂದು ಗಿನ್ನೆಸ್ ದಾಖಲೆ](https://etvbharatimages.akamaized.net/etvbharat/prod-images/13670485_wtrrefdfdf.jpg)
ಲಂಡನ್ನ ಟೈಲರ್ ಫಿಲಿಪ್ಸ್ ಪೋಗೋ ಸ್ಟಿಕ್ನೊಂದಿಗೆ ಅತಿ ಹೆಚ್ಚಿನ ಕಾರುಗಳ ಮೇಲೆ ಜಿಗಿಯುವ ಸಾಧನೆ ಮಾಡಿದ್ದಾರೆ. ಜಪಾನ್ನ ಇಕೆಡಾ ಕೇವಲ 30 ಸೆಕೆಂಡ್ಗಳಲ್ಲಿ 360 ಡಿಗ್ರಿಗಳಷ್ಟು ಸೈಕಲ್ ಅನ್ನು 45 ಸಲ ತಿರುಗಿಸಿ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
![30 ಸೆಕೆಂಡ್ಗಳಲ್ಲಿ 45 ಸಲ ಸೈಕಲ್ ತಿರುಗಿಸಿದ ಅಥ್ಲೀಟ್](https://etvbharatimages.akamaized.net/etvbharat/prod-images/13670485_twfdfdfdfdfdfd.jpg)